ಶಾಯರಿ

ಶಾಯರಿ

ನನಗೂ
ಏಳು ಬಾರಿ ಕೂಗುವ ಆಸೆ ಇದೆ
ಆದರೆ ನಿನ್ನಂತೆ
ನಿಂತಲ್ಲೇ ನಿಲ್ಲುವ ಕೆಲಸ ಮಾತ್ರ ಬೇಡವಾಗಿದೆ

ನಿನಗಿಂತ
ಚುಕ್ಕಿ ಚಿಕ್ಕದಾದರೂ
ನಗುವುದು ಬಿಡುವುದಿಲ್ಲ
ಆದರೆ
ನಿನ್ನ ಕೈಗಿಟ್ಟ ಚೆಕ್ಕು ಎಷ್ಟು ದೊಡ್ಡ ಬೆಲೆಯದಾದರು
ಒಮ್ಮೆಯೂ ನಗಿಸಲಿಲ್ಲ

ಚಂದ್ರನಿಗೆ
ಕೋಟಿ ನಕ್ಷತ್ರ ಕಾಟಕೊಟ್ಟರು
ದಾಟಿ ಬರುವುದು ಬಿಡಲಿಲ್ಲ
ಆದರೆ ನಿನಗೆ
ಕಾಯ್ದು ಕಾಯ್ದು ಒಂದು ಚೀಟಿ ಕೊಟ್ಟರು
ಮತ್ತೆಂದೂ ಕಾಲೇಜ್ ಗೇಟ್ ದಾಟಿಸಲಿಲ್ಲ

ಹಲುಬಿ
ಗುಲಾಬಿ ತರಿಸಿಕೊಂಡರು
ಮುಡಿಗೇರಿಸಿ ಎದುರಿಗೆ ಬರಲಿಲ್ಲ
ತರುಬಿ
ತಾಯತ ಕೊಟ್ಟರು
ಹೋಗ್ತಾ ಹೋಗ್ತಾ ನನ್ನ ಮರೆಯಲೇ ಇಲ್ಲ

ಶ್ರೀ ಹನಮಂತ ಸೋಮನಕಟ್ಟಿ

Related post