ಶುಭಾಶಯ
ಹೊಸತು ವರುಷದ
ಆದಿಯಲ್ಲಿ
ಸವಿಗನಸೊಂದು
ಮನದಲಿ ಮೂಡಲಿ!
ಮಾವು ಬೇವಿನ
ಚಿಗುರಿನಂದದಿ
ನಿಮ್ಮ ಬಾಳಿದು
ನಳನಳಿಸಲಿ!
ಮನದ ಮರಿ
ಕೋಗಿಲೆಯು
ಉಲ್ಲಾಸದಲೆ
ತಾ ಹಾಡಲಿ !
ಮಳೆಯಬಿಲ್ಲಿನ
ಬಣ್ಣವೆಲ್ಲವು
ನಿಮ್ಮ ಕಣ್ಣಲಿ
ಪ್ರತಿಫಲಿಸಲಿ !
ಹೊಂಗೆ ಹೂವಿನ
ನವಿರುಗಂಪಿನ
ಘಮಲು
ನಿಮ್ಮನಾವರಿಸಲಿ!
ನವನಾವೀನ್ಯದ
ಮಧುರ ಭಾವದಿ
ನಿಮ್ಮ ಮನವದು
ಬೀಗಲಿ !
ಕಷ್ಟ ಬರಲೀ,
ಸುಖವೇ ಇರಲಿ,
ಸಮಚಿತ್ತದಿ
ಬಾಳು ಸಾಗಲಿ !!
ಯುಗಾದಿ ಹಬ್ಬದ ಶುಭಾಶಯಗಳು.

ಶ್ರೀವಲ್ಲಿ ಮಂಜುನಾಥ