ಶ್ರೀ ಭಕ್ತ ಕನಕದಾಸರು
ಭಕ್ತಿ ಭಾವಕೆ ಅಜರಾಮರದ ಹೆಸರು ಕನ್ನಡ ಭಾಷೆಯ ವಿಶಿಷ್ಟವಾದ ದಾಸಶ್ರೇಷ್ಠರು
ಯುದ್ಧದಿ ಸೋತ ದಾಸ ಪರಂಪರೆಯ ಹರಿದಾಸರು
ಕಾಗಿನೆಲೆಯ ನಿವಾಸಿ ಶ್ರೀ ಭಕ್ತ ಕನಕದಾಸರು
ಹಾವೇರಿಯ ಬಾಡ ಗ್ರಾಮದ ತಿಮ್ಮಪ್ಪ ನಾಯಕ
ಚಿನ್ನದಂತ ಮಗನ ಹೆತ್ತರು ಬಚ್ಚಮ್ಮ ಬೀರಪ್ಪನಾಯಕ
ವಿಜಯನಗರ ಸಾಮ್ರಾಜ್ಯದ ಗಂಡೆದೆಯ ದಂಡನಾಯಕ
ತಿರುಪತಿ ತಿಮ್ಮಪ್ಪನ ಆಶೀರ್ವಾದದ ಕುಲದೀಪಕ
ಶ್ರೀವ್ಯಾಸರಾಯರ ಪ್ರೀತಿಯ ಮೆಚ್ಚಿನ ಶಿಷ್ಯರಾಗಿ
ಉಡುಪಿ ದೇಗುಲದಿ ಕನಕನ ಕಿಂಡಿಗೆ ಹೆಸರಾಗಿ
ಲೋಕ ಕಲ್ಯಾಣದಿ ಕೃಷ್ಣನ ಪ್ರೀತಿಯ ಭಕ್ತರಾಗಿ
ಜಾತಿ ವ್ಯವಸ್ಥೆಯ ತಿರಸ್ಕರಿಸಿದರು ಮನುಕುಲಕ್ಕಾಗಿ
ಕಾಗಿನೆಲೆ ಆದಿಕೇಶವರಾಯರ ಅಂಕಿತದಲಿ
ಕೀರ್ತನೆಗಳ ರಚಿಸಿ ಹಾಡಿದರು ಕೃಷ್ಣನ ಸ್ಮರಣೆಯಲಿ
ಮೋಹನ ತರಂಗಿಣಿ ನಳಚರಿತ್ರೆ ಕೃತಿಗಳಲಿ
ಹಲವು ವೈಶಿಷ್ಟತೆಗಳು ತಲೆಯೆತ್ತಿವೆ ಪುಟಗಳಲಿ
ಅನುದಿನ ಸತತವಾಗಿ ಶ್ರೀಕೃಷ್ಣನ ಕೀರ್ತನೆಯು
ನಾಡಿನೆಲ್ಲೆಡೆ ಹಬ್ಬಿದೆ ಕನಕದಾಸರ ಕೀರ್ತಿಯು
ಎತ್ತ ನೋಡಿದರೆತ್ತ ಸ್ಥಾಪಿಸಲಾಗಿದೆ ಅವರ ಮೂರ್ತಿಯು
ಹುಟ್ಟಿ ಬರಲಿ ಕನಕದಾಸರು ಮನೆ ಮನೆಯಲ್ಲಿಯು

ಶ್ರೀ ಮುತ್ತು ಯ.ವಡ್ಡರ
ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿ
ಬಾಗಲಕೋಟ -9845568484