ಸಂಕ್ರಾಂತಿಯ ಸಡಗರ
ಮಕರ ಸಂಕ್ರಾಂತಿಯ ಸಡಗರ ಸಂಭ್ರಮವು
ಓಂಕಾರವಾಯಿತು ವರ್ಷದ ಮೊದಲ ಹಬ್ಬವು
ಮರೆತು ಹೋಗಲಿ ನೋವು ದುಃಖವು
ಸೂರ್ಯನ ಕಿರಣಗಳಂತೆ ನಿತ್ಯ ಬರಲಿ ಸಂತಸವು
ಹರ್ಷವ ಹೊತ್ತು ಸಂಕ್ರಾಂತಿಯು ಬಂದಿತು
ಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸಿತು
ರೈತರ ಮೊಗದಲಿ ನಗುವಿನ ಗೆರೆ ಮೂಡಿತು
ಪುಣ್ಯ ನದಿಯ ಸ್ನಾನ ಬದುಕು ಪಾವನಗೊಳಿಸಿತು
ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನ
ಸೂರ್ಯನ ಉತ್ತರ ದಿಕ್ಕಿನ ಪಯಣದ ಆರಂಭದ ದಿನ
ಎಳ್ಳು ಬೆಲ್ಲವನ್ನು ಹಂಚುವ ಖುಷಿಯ ದಿನ
ಹಣ್ಣು, ಸಕ್ಕರೆ, ಕಬ್ಬಿನ ರಸವ ಸವಿಯುವ ದಿನ
ಸುಗ್ಗಿಯ ಹಬ್ಬ ಕರುನಾಡ ರೈತರಿಗೆ ಗಾಳಿಪಟವ ಹಾರಿಸುವ ಎತ್ತರದ ಬಾನಿಗೆ
ಗುಂಪು ಗುಂಪಾಗಿ ರಂಗೋಲಿ ಬಿಡಿಸಿ ದಾರಿಗೆ
ಸಕ್ಕರೆಯ ತಿಂದು ಅಕ್ಕರೆಯ ಬೀರುವ ನಾಡಿಗೆ
ಕುಟುಂಬದ ಎಲ್ಲರೂ ಸೇರುವ ಸಂಕ್ರಮಣ
ಎತ್ತುಗಳ ಸಿಂಗರಿಸಿ ಕಿಚ್ಚು ಹಾಯಿಸುವ ಕ್ಷಣ
ಮಕರ ಜ್ಯೋತಿಯನ್ನು ಕಣ್ತುಂಬಿಸಿಕೊಳ್ಳುವ ಈ ದಿನ
ಸಡಗರದ ಸಂಕ್ರಾಂತಿ ಸಂಭ್ರಮದಿ ಆಚರಿಸೋಣ

ಶ್ರೀ ಮುತ್ತು ಯ. ವಡ್ಡರ
ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,
ಹಿರೇಮಳಗಾವಿ
ಮೊಬೈಲ್ : 9845568484