ಸಂಗೀತ ಸಂಜೆ – ಸ್ವರಸಿರಿ
ಕೊಬಾಲ್ಟ್ ಕಲಾ ಸಂಸ್ಥೆ ದಿನಾಂಕ 3ರ ಆಗಸ್ಟ್ ಭಾನುವಾರ 2025 ರಾಜರಾಜೇಶ್ವರಿ ನಗರದ ಕೊಬಾಲ್ಟ್ ಕಲಾ ಗ್ಯಾಲರಿಯಲ್ಲಿ “ಸ್ವರಸಿರಿ” ಹೆಸರಿನಲ್ಲಿ ಹಿಂದೂಸ್ತಾನಿ ಸಂಗೀತ ಸಂಜೆ ಹಮ್ಮಿಕೊಂಡಿತ್ತು.

ಶ್ರೀಮತಿ ರೇಷ್ಮಾ ಭಟ್ಟ ಅವರು ಹಿಂದೂಸ್ತಾನಿ ಸಂಗೀತದಲ್ಲಿ ಮಾಡಿರುವ ಸಾಧನೆಯಿಂದಾಗಿ, ತಮ್ಮ ಧ್ವನಿಸಂಪತ್ತಿನಿಂದಾಗಿ ಬೇರೆ ಬೇರೆ ರಾಗಗಳ ಮೂಲಕ ಶ್ರೋತೃಗಳ ಮನತಣಿಸುವುದರಲ್ಲಿ ಸಫಲರಾದರು. ಮೊದಲಿಗೆ ರಾಗ ಮುಲ್ತಾನಿಯಲ್ಲಿ ವಿಲಂಬಿತ್ ಲಯದಲ್ಲಿ ಪ್ರಾರಂಭಿಸಿ ದೃತ್ ತೀನ್ ತಾಲದಲ್ಲಿ ಪ್ರಸ್ತುತ ಪಡಿಸಿದರು. ತಮ್ಮ ಸ್ವರ ಸಾಧನೆ, ರಾಗದಲ್ಲಿಯ ಹಿಡಿತದಿಂದಾಗಿ, ಶ್ರೇಷ್ಠ ಗಾಯಕಿ ಎಂಬುದನ್ನು ಸಾಬೀತು ಪಡಿಸಿದರು. ನಂತರ ಪ್ರಸ್ತುತ ಋತುವಿಗೆ ಸಂಭಂಧಿಸಿದಂತೆ ರಾಗ “ಸುರ್ ಮಲ್ಹಾರ್’ ಹಾಡಿ ಕೇಳುಗರನ್ನು ರಂಜಿಸಿದರು.

ನಾಟ್ಯ ಗೀತೆ, ಭಾವಗೀತೆ, ಭಕ್ತಿಗೀತೆ ಹಾಡಿ ಭೈರವಿಯಲ್ಲಿ ತಂಬೂರಿ ಮೀಟಿದವ ದಾಸರ ಪದ ಹಾಡನ್ನು ಭಾವಪೂರ್ಣವಾಗಿ ಹಾಡಿ ಶ್ರೋತೃಗಳ ಮನಗೆದ್ದರು. ಸ್ವರ, ಭಾವ ಗೆಲ್ಲುವುದರ ಮೂಲಕ ರೇಷ್ಮಾ ಭಟ್ಟ ಸಮರ್ಥ ಗಾಯಕಿಯಾಗಿ ಸಂಗೀತ ಸಂಜೆ ಸ್ವರ ಸಿರಿಯಾಗಿತ್ತು.
ತಬಲಾದಲ್ಲಿ ಶ್ರೀ ಉದಯರಾಜ್ ಕರ್ಪೂರ್, ಹಾರ್ಮೋನಿಯಂನಲ್ಲಿ ತೇಜಸ್ ಕಾಟೋಟಿ, ತಂಬೂರದಲ್ಲಿ ದಿವ್ಯಾ ಅವರು ಸಮರ್ಥವಾಗಿ ಸಾಥ್ ನೀಡಿದರು. ಎಜಿಡಿಪಿ ಶ್ರೀ ಎಸ್ ಮುರುಗನ್, ಕೇಂದ್ರ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷರಾದ ಚಿ.ಸು. ಕೃಷ್ಣಸೆಟ್ಟಿ, ಉಪಸ್ಥಿತರಿದ್ದರು. ಕೊಬಾಲ್ಟ ಅಧ್ಯಕ್ಷರಾದ ಗಣಪತಿ ಎಸ್ ಹೆಗಡೆ ಎಲ್ಲರನ್ನೂ ವಂದಿಸಿದರು. ಅಶ್ವಿನಿ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಸಾಹಿತ್ಯಮೈತ್ರಿ