ಸುರಕ್ಷಾ ಜಾಗೃತಿ – 6

ಸುರಕ್ಷಾ ಜಾಗೃತಿ – 6
ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದಂತಹ ಅಂಶಗಳು

ಕಳೆದ ಕೆಲವಾರು ಅಂಕಣಗಳಿಂದ ಸುರಕ್ಷಾ ಜಾಗೃತಿಯ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡು ಬಂದಿರುವೆ. ಇನ್ನು ಮುಂದಿನ ಕೆಲವಾರು ಸಂಚಿಕೆಗಳಲ್ಲಿ ಈ ಸುರಕ್ಷೆಯ ತಾಂತ್ರಿಕ ಅಂಶಗಳನ್ನು ತಿಳಿಯಲು ಪ್ರಯತ್ನಿಸೋಣವೇ? ಹಾಗಾದರೆ ಮೊದಲಿಗೆ SAFE ಎಂಬ ಪದದ ಅರ್ಥವನ್ನು ತಿಳಿದುಕೊಳ್ಳೋಣ. SAFE ಇದನ್ನು ನಾನು Staying Accident Free Everywhere ಅಂತ ಹೇಳ ಬಯಸುತ್ತೇನೆ. ಅಂದರೆ ಯಾವುದೇ ಸಂದರ್ಭದಲ್ಲಿಯೂ ಯಾವುದೇ ಜಾಗದಲ್ಲಿರುವಾಗಲೂ ಅಪಘಾತಗಳಿಂದ ಮುಕ್ತ ವಾಗಿರುವುದೇ ನಿಜವಾದ ಸುರಕ್ಷೆ ಅಂತ ಆಗಿದೆ. ಹಾಗಾದರೆ SAFETY ( ಸುರಕ್ಷೆ) ಇದನ್ನು ಹೇಗೆ ಬಣ್ಣಿಸಬಹುದು? ನನ್ನ ದೃಷ್ಟಿಕೋನದಲ್ಲಿ ನಾನು ಈ SAFETY ಇದನ್ನು ಈ ಕೆಳಗಿನಂತೆ ತಿಳಿಯಪಡಿಸುತ್ತೇನೆ:

೧) S= See & Study ಅಂದರೆ ನಿನ್ನ ಸುತ್ತಮುತ್ತಲಿನ ಪರಿಸರ, ಆಗು ಹೋಗುಗಳನ್ನು ಸೂಕ್ಷ್ಮ ವಾಗಿ ನೋಡುತ್ತ / ಗಮನಿಸುತ್ತಾ ಅದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನಮಾಡು. ಅಥವಾ ನಿನ್ನ ಸುತ್ತಮುತ್ತಲಿನ ಜಾಗದ ಬಗ್ಗೆ, ಜನರ ಬಗ್ಗೆ ಆದಷ್ಟು ತಿಳಿದುಕೊಂಡು ಅದರಿಂದಾಗುವ ಆಪತ್ತನ್ನು ಅಂದಾಜು ಮಾಡು ಎಂದು.

೨) A= Analyze & Adapt ಅಂದರೆ ಯಾವುದು ಸರಿ ಯಾವುದು ತಪ್ಪು ಎಂಬುವುದರ ಬಗ್ಗೆ ಸರಿಯಾದ ತುಲನೆಯನ್ನು ಕೈಗೊಂಡು ಸರಿಯಾದ ಮಾರ್ಗವನ್ನು ನಿನ್ನ ಜೀವನದಲ್ಲಿ / ಆ ಕ್ಷಣದಲ್ಲಿ ಅಳವಡಿಸಿಕೊಳ್ಳುವುದೆಂದು.

೩) F= Familiarise & Finalise ಅಂದರೆ ನೀನು ತುಲನೆ ಮಾಡಿ ಸರಿ ಎಂಬ ಮಾರ್ಗವನ್ನು ನಿನ್ನ ಜೀವನದಲ್ಲಿ / ಕೆಲವೊಂದು ಸಂದರ್ಭಗಳಿಗೆ ಅಳವಡಿಸಿಕೊಳ್ಳುವುದಕ್ಕಿಂತ ಮುಂಚೆ ಆ ವಿಚಾರವನ್ನು,ಆ ಸೂತ್ರವನ್ನು, ಆ ಮಾರ್ಗವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಸರಿಯಾಗಿ ಮಾರ್ಗದ / ದಾರಿಯ ಪರಿಚಯದ ನಂತರ ಆ ಮಾರ್ಗವನ್ನು/ಸೂತ್ರವನ್ನು ಆ ಸಂದರ್ಭಕ್ಕೆ ಅಂತಿಮ ಸೂತ್ರವೆಂದು ಪರಿಗಣಿಸಿ ಅದನ್ನು ಅಂತಿಮಗೊಳಿಸಿ ಆಯ್ಕೆ ಮಾಡಿಟ್ಟುಕೊಳ್ಳಬೇಕು.

೪) Educate & Execute ಅಂದರೆ ನಿನ್ನನ್ನು ನೀನು / ಅಥವಾ ನಿನ್ನ ಸಂಗಡಿಗರಲ್ಲಿ ಸರಿಯಾದ ಜ್ಞಾನವನ್ನು / ತಿಳುವಳಿಕೆಯನ್ನು ಮೂಡಿಸಿ ಸರಿಯಾದ ಶಿಕ್ಷಣವನ್ನು ಕೊಟ್ಟು ಆಪತ್ತಿನ ಸಂದರ್ಭಗಳಲ್ಲಿ ಹೇಗೆ ಕಾರ್ಯಪ್ರವೃತ್ತರಾಗಬೇಕು ಅಂತ ತಿಳುವಳಿಕೆಯನ್ನು ಮೂಡಿಸಿ ಸದಾ ಜಾಗೃತಿಯಲ್ಲಿರುವಂತೆ ಮಾಡುವಂತದ್ದಾಗಿದೆ.

೫) Test & Teach ಅಂದರೆ ನೀನು ಸಂದರ್ಭಕ್ಕನುಗುಣವಾಗಿ ಕಂಡುಕೊಂಡಿರುವಂತದ್ದನ್ನು / ನಿನ್ನ ಅನುಭವಕ್ಕೆ ಬಂದಿರುವಂತಹದ್ದನ್ನು / ನೀನು ಸರಿಯಾಗಿ ಅರ್ಥೈಸಿಕೊಂಡಿರುವುದನ್ನು ಸರಿಯಾಗಿ ಪರೀಕ್ಷೆಗೊಳಪಡಿಸಿ ಅದರ ಸಾಧಕ ಭಾದಕಗಳನ್ನು ಅರಿತುಕೊಂಡು ಸರಿಯಾದ ಪರಿಣಾಮವು ಅದರಿಂದ ಸಿಗುವಂತದಾಗಿದ್ದರೆ ಅದನ್ನು ಇತರರಿಗೂ ತಿಳಿಸಿಕೊಡು ಅಂತ. ನಿನ್ನ ಅನುಭವವನ್ನು ಇತರರೊಂದಿಗೆ ಹಂಚಿಕೊಂಡು ಅವರನ್ನು ಜಾಗೃತಗೊಳಿಸು ಎಂದು.

೬) Y= yourself ಅಂದರೆ ಈ ಮೇಲಿನ ೫ ಶಬ್ದಗಳನ್ನು ನಿನ್ನ ಮೇಲೆ ನೀನು ಪ್ರಯೋಗಿಸಿಕೊಂಡು ಒದಗಿ ಬರುವ ಆಪತ್ತಿನಿಂದ ನಿನ್ನನ್ನು ನೀನು ರಕ್ಷಿಸಿಕೊಳ್ಳುವ ಹೊಣೆ ನಿನ್ನದೇ ಆಗಿರುತ್ತದೆ ಎಂದು. ಅಂದರೆ YOUR SAFETY IS IN YOUR HAND ಅಂತ ಅರ್ಥೈಸಿಕೊಳ್ಳಬಹುದು. ಅಂದರೆ ನಿನ್ನ ಸುರಕ್ಷೆಯ ಹೊಣೆ ನಿನ್ನದೇ ಎಂದು…

ಮೇಲೆ ತಿಳಿಸಿದ ಎಲ್ಲವನ್ನೂ ಮೊದಲಿಗೆ ನಿನ್ನ ಮೇಲೆ ನೀನೇ ಪ್ರಯೋಗಿಸಿಕೊಂಡು ನಿನ್ನನ್ನು ಸುರಕ್ಷಾ ದೃಷ್ಟಿಯಿಂದ ಬಲಪಡಿಸಿಕೊಳ್ಳಬೇಕು. ಸುರಕ್ಷೆ ಎನ್ನುವುದು ಆಯಾ ಸಂದರ್ಭಕ್ಕೆ ಅನುಗುಣವಾಗಿ / ಆಯಾ ಜಾಗಕ್ಕೆ ಅನುಗುಣವಾಗಿ / ಪ್ರತಿಯೊಂದು ಕಾಲಮಾನಕ್ಕೂ ಬೇರೆ ಬೇರೆ ಯಾಗಿರುತ್ತದೆ ಎಂದು ಗಮನದಲ್ಲಿಟ್ಟುಕೊಂಡಿರಬೇಕು. ಒಂದು ಸಂದರ್ಭದಲ್ಲಿ ಸರಿಯಾಗಿ ಪರಿಣಮಿಸಿದ ಸೂತ್ರವೇ ಇನ್ನೊಂದು ಸಂದರ್ಭದಲ್ಲಿ ಸರಿಯಾದ ಪರಿಣಾಮವನ್ನು ಬೀರದೆಯೇ ಇರಬಹುದು. ಹಾಗಾಗಿ ಈ ಸುರಕ್ಷೆಯ ಬಗ್ಗೆ ಎಷ್ಟು ಎಚ್ಚರದಿಂದ ಇದ್ದರೂ ಸಾಲದು ಎಷ್ಟು ತಿಳಿದುಕೊಂಡರೂ ಕಮ್ಮಿಯೇ ಅಂತ ನನ್ನ ಅನಿಸಿಕೆ…

ಹಾಗಾದರೆ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸೋಣವೇ….?

ಮುಂದುವರೆಯುವುದು….

ಶ್ರೀನಿಧಿ ಹೊಸಬೆಟ್ಟು

Related post