ಸೌರವ್ಯೂಹ – 4 – ಶುಕ್ರ ಗ್ರಹ

ಇದು ಸೂರ್ಯನಿಗೆ ಎರಡನೇ ಅತೀ ಸಮೀಪದ ಗ್ರಹ. 4.6 ಗೋಚರ ಪ್ರಮಾಣವಿರುವ ಶುಕ್ರವು ಚಂದ್ರನ ನಂತರ ರಾತ್ರಿಯ ಆಗಸದಲ್ಲಿ ಅತ್ಯಂತ ಪ್ರಕಾಶಮಾನವಾದ ಕಾಯ. 42. ಲ್ ಗರಿಷ್ಠ ನೀಳತೆಯನ್ನು ಹೊಂದಿರುವ ಶುಕ್ರಗ್ರಹವು ಮುಂಜಾನೆ ಮುಸ್ಸಂಜೆಗಳಲ್ಲೂ ಚೆನ್ನಾಗಿ ಕಾಣುತ್ತದೆ. ಇದನ್ನು ‘ಹಗಲು ನಕ್ಷತ್ರ’ ಮತ್ತು ಸಂಜೆ ನಕ್ಷತ್ರ ಎಂದು ಕರೆಯಲಾಗುತ್ತದೆ.

ಶುಕ್ರ ಗಾತ್ರದಲ್ಲಿ ಸುಮಾರು ಭೂಮಿಯಷ್ಟೇ ಇದೆ. ತನ್ನ ಅಕ್ಷದ ಮೇಲೆ ಬುಧ ಗ್ರಹಕ್ಕಿಂತ ನಿದಾನವಾಗಿ ಸುತ್ತುವ ಇದರ 1 ದಿನ ಭೂಮಿಯ 243 ದಿನಕ್ಕೆ ಸಮ. ಇದು ಭೂಮಿಯ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತದೆ. ಇದರ ವಾತಾವರಣದಲ್ಲಿ ಇಂಗಾಲಾಮ್ಲ ಹೆಚ್ಚಾಗಿರುವುದರಿಂದ ಈ ಗ್ರಹದಲ್ಲಿ ಜೀವಿಗಳು ಇಲ್ಲ. ಇದರ ಮೇಲ್ಮೈ ಸೀಸವನ್ನು ಕರಗಿಸಬಲ್ಲಷ್ಟು ಶಾಖದಿಂದ ಕೂಡಿದೆ.

ಘನರೂಪಿಯಾದ ಶುಕ್ರವು ಭೂಮಿಯ ಗಾತ್ರ ಮತ್ತು ರಚನೆಯನ್ನು ಹೋಲುವುದರಿಂದ ಇದನ್ನು ಭೂಮಿಯ ‘ಸಹೋದರ ಗ್ರಹ’ ವೆಂದು ಕರೆಯಲಾಗುತ್ತದೆ. ಶುಕ್ರವು ಚೆನ್ನಾಗಿ ಬೆಳಕನ್ನು ಪ್ರತಿಫಲಿಸುವ ಮೋಡಗಳಿಂದ ಅಮೃತವಾಗಿದ್ದು ಅದರ ಮೇಲ್ಮೈ ಸೂರ್ಯನ ಬೆಳಕಿರುವಾಗ ಕಾಣುವುದಿಲ್ಲ. 20 ನೇ ಶತಮಾನದಲ್ಲಿ ಗ್ರಹ ವಿಜ್ಞಾನವು ಶುಕ್ರದ ಕೆಲವು ರಹಸ್ಯಗಳನ್ನು ಬಯಲುಮಾಡುವ ಮುನ್ನ ಅದರ ಬಗ್ಗೆ ಹಲವಾರು ವದಂತಿಗಳು ಅನುಮಾನಗಳು ಹುಟ್ಟಿಕೊಂಡಿದ್ದವು. ಮುಖ್ಯವಾಗಿ ಇಂಗಾಲದ ಡೈ ಆಕ್ಸೈಡ್ ಅನ್ನು ಒಳಗೊಂಡ ಶುಕ್ರದ ವಾಯುಮಂಡಲವು ಘನರೂಪಿ ಗ್ರಹಗಲ್ಲಿ ಅತೀ ದಟ್ಟವಾಗಿದೆ. ಶುಕ್ರದ ಮೇಲ್ಮೈ ನಲ್ಲಿ ವಾಯು ಒತ್ತಡವು ಭೂಮಿಯ ಮೇಲಿನ ಒತ್ತಡಕ್ಕಿಂತ 90 ಪಟ್ಟು ಅಧಿಕ.

ಶುಕ್ರ ಗ್ರಹದ ಮೇಲ್ಮೈನ ವಿವರವಾದ ನಕ್ಷೆಯನ್ನು ಕಳೆದ 30 ವರ್ಷಗಳಲ್ಲಿ ಮಾತ್ರ ತಯಾರಿಸಲಾಗಿದೆ. ವ್ಯಾಪಕವಾಗಿ ಜ್ವಾಲಾಮುಖಿಗಳು ಕಂಡುಬರುವ ಈ ಮೇಲ್ಮೈನಲ್ಲಿ ಇಂದಿಗೂ ಕೆಲವು ಜ್ವಾಲಾಮುಖಿಗಳು ಜೀವಂತವಾಗಿರಬಹುದು. ಶುಕ್ರಗ್ರಹದ ವ್ಯಾಸ 12,400 ಕಿಲೋಮೀಟರ್. ಸೂರ್ಯನ ಸುತ್ತ ಒಂದು ಬಾರಿ ಪ್ರದಕ್ಷಿಣೆ ಹಾಕಲು ತೆಗೆದುಕೊಳ್ಳುವ ಕಾಲ 224. 7 ದಿನಗಳು. ಸೂರ್ಯನಿಗೆ 108,000,000 ಕಿಲೋಮೀಟರ್.

ಭಾರತದ ಜ್ಯೋತ್ಯಿಷ್ಯ ಶಾಸ್ತ್ರದಲ್ಲಿ ಹಿಂದಿನ ಕಾಲದಿಂದಲೂ ಶುಕ್ರನನ್ನೇ ನವಗ್ರಹಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು. ಆದರೆ ಪಾಶ್ಚ್ಯಾತ್ಯ ದೇಶಗಳಲ್ಲಿ ದೂರದರ್ಶಕದ ಅವಿಷ್ಕಾರಕ್ಕೆ ಮುನ್ನ ಶುಕ್ರವನ್ನು ‘ಅಲೆದಾಡುವ ನಕ್ಷತ್ರ’ ಎಂದು ಮಾತ್ರ ತಿಳಿಯಲಾಗಿತ್ತು. ಶುಕ್ರನು ಬೆಳಿಗ್ಗೆ ಮತ್ತು ಸಂಜೆ ಗೋಚರಿಸುತ್ತಿರುವುದರಿಂದ ಇವೆರಡೂ ಬೇರೆ ಬೇರೆ ಕಾಯಗಳೆಂದು ಹಲವು ಸಂಸ್ಕೃತಿಗಳಲ್ಲಿ ನಂಬಲಾಗಿತ್ತು. ಶುಕ್ರವು ಭೂಮಿಯ ಸುತ್ತ ಸುತ್ತುತಿರುವುದರಿಂದ ಪೈಥಾಗೋರಸನು ನಂಬಿದ್ದರು, 6 ನೇ ಶತಮಾನದಲ್ಲಿ ಗೆಲಿಲಿಯೋ ಮೊದಲ ಬಾರಿಗೆ ಶುಕ್ರದ ಅವಲೋಕನೆ ಮಾಡಿದಾಗ ಶುಕ್ರನು ಚಂದ್ರನಂತೆಯೇ ಪಕ್ಷಗಳನ್ನು ಪ್ರದರ್ಶಿಸಿ, ಸಣ್ಣ ಚಂದ್ರಾಕಾರದಿಂದ ಅರ್ಧ ಚಂದ್ರ, ಪೂರ್ಣಚಂದ್ರನ ಆಕಾರಗಳನ್ನು ತಳೆಯುತ್ತಾನೆಂದು ತಿಳಿದುಕೊಂಡನು.

ಶುಕ್ರನು ಸೂರ್ಯನ ಸುತ್ತಾ ಪರಿಭ್ರಮಿಸುತ್ತಿದ್ದರೆ ಮಾತ್ರ ಈ ರೀತಿಯ ಪಕ್ಷಗಳು ಉಂಟಾಗಲು ಸಾಧ್ಯ. ಸೂರ್ಯನು ಸೇರಿದಂತೆ ಸೌರಮಂಡಲದ ಗ್ರಹಗಳು ಭೂಮಿಯ ಸುತ್ತ ಪರಿಭ್ರಮಿಸುತ್ತವೆ ಎಂದು ಪ್ರತಿಪಾದಿಸಿದ್ದ ಟಾಲೆಮಿಯ ವಾದವನ್ನು ಅಲ್ಲಗೆಳೆಯಲು ಗೆಲೆಲಿಯೋ ಮಾಡಿದ ಅವಲೋಕನೆಯು ಬಹಳ ಉಪಯುಕ್ತವಾಯಿತು.

ಕನಸು

Related post

1 Comment

  • Fine

Leave a Reply

Your email address will not be published. Required fields are marked *