ಸೌರವ್ಯೂಹ – 7 – ಗುರು ಗ್ರಹ

–ಗುರು ಗ್ರಹ–

ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಂ I
ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂII

ಗುರು ಗ್ರಹ ಸೂರ್ಯನಿಂದ 5 ನೇ ಗ್ರಹ ಮತ್ತು ಸೌರಮಂಡಲದಲ್ಲಿ ಅತೀ ದೊಡ್ಡ ಗ್ರಹ, ಸೂರ್ಯ, ಚಂದ್ರ ಮತ್ತು ಶುಕ್ರ ಗ್ರಹಗಳ ನಂತರ ಗುರು ಗ್ರಹವು ಸಾಮಾನ್ಯವಾಗಿ ಆಗಸದಲ್ಲಿ ನಾಲ್ಕನೇ ಅತಿ ಹೆಚ್ಚು ಪ್ರಕಾಶಮಾನವಾದ ಕಾಯ. ಆದರೆ ವರ್ಷದ ಕೆಲವು ದಿನಗಳಲ್ಲಿ ಮಂಗಳ ಗ್ರಹವು ಗುರುವಿಗಿಂತ ಹೆಚ್ಚು ಪ್ರಕಾಶಮಾನವಾಗಿ ಕಂಡು ಬರುತ್ತದೆ.

ಸೌರಮಂಡಲದ ಬೇರೆಲ್ಲಾ ಗ್ರಹಗಳ ಒಟ್ಟು ದ್ರವ್ಯರಾಶಿಗಿಂತಲೂ 2.5 ಪಟ್ಟು ಹೆಚ್ಚು ದ್ರವ್ಯರಾಶಿಯನ್ನು ಗುರುವು ಹೊಂದಿದೆ. ಗುರುವು ಬರಿಗಣ್ಣಿಗೆ ಗೋಚರಿಸುವುದರಿಂದ ಪ್ರಾಚೀನ ಕಾಲದಿಂದಲೂ ಇದು ಪರಿಚಿತವಾದ ಗ್ರಹ. ಪ್ರಾಚೀನ ರೋಮನ್ನರು ಈ ಗ್ರಹಕ್ಕೆ ರೋಮನ್ ದೇವತೆಯಾದ ಜ್ಯೂಪಿಟರ್ ನ ಹೆಸರಿಟ್ಟರು.

ಚೀನಾ, ಕೊರಿಯಾ, ಜಪಾನ್ ಮತ್ತು ವಿಯೆಟ್ನಾಂ ದೇಶಗಳಲ್ಲಿ ಚೀನಿಯರ ಪಂಚಭೂತಗಳ ಆಧಾರದ ಮೇಲೆ ಈ ಗ್ರಹವನ್ನು “ಮರ ಗ್ರಹ” ಎಂದು ಕರೆಯಲಾಗುತ್ತದೆ. ವೇದಕಾಲದ ಜ್ಯೋತಿಷ್ಯದಲ್ಲಿ ಜ್ಯೋತ್ಯಿಷ್ಯರು ಈ ಗ್ರಹವನ್ನು ಬ್ರಹಸ್ಪತಿ, ಅಥವಾ ಗುರು ಎಂದು ಕರೆಯುತ್ತಾರೆ. ಇಂದಿಗೂ ಭಾರತದ ಹಲವು ಭಾಷೆಗಳಲ್ಲಿ ಒಂದು ದಿನವನ್ನು ಗುರುವಾರ (ಗುರು ಗ್ರಹದ ದಿನ) ವೆಂದು ಕರೆಯಾಲಾಗುತ್ತದೆ. ಆಂಗ್ಲ ಭಾಷೆಯಲ್ಲಿ Thursday ಅಥವಾ Thor’s day (ಥೋರ್ ನ ದಿನ) ಎಂದು ಕರೆಯುತ್ತಾರೆ. ಥೋರ್ ನನ್ನು ರೋಮನ್ ದೇವತೆಯಾದ ಜ್ಯೂಪಿಟರ್ ನೊಂದಿಗೆ ಗುರುತಿಸಲಾಗುತ್ತದೆ.

ಗುರುಗ್ರಹವು ಕಡೆ ಪಕ್ಷ 63 ಉಪಗ್ರಹಗಳನ್ನು ಹೊಂದಿದೆ. 1610 ರಲ್ಲಿ ಗೆಲೆಲಿಯೋ ತನ್ನ ದೂರದರ್ಶಕದ ಸಹಾಯದಿಂದ ಗುರುಗ್ರಹದ ನಾಲ್ಕು ದೊಡ್ಡ ನೈಸರ್ಗಿಕ ಉಪಗ್ರಹಗಳಾದ ಐಓ, ಯುರೋಪ್, ಗ್ಯಾನಿಮಿಡ್, ಮತ್ತು ಕ್ಯಾಲಿಸ್ಟೊಗಳನ್ನೂ (ಈಗ ಇವುಗಳನ್ನ ಗೆಲಿಲಿಯೋನ ಉಪಗ್ರಹಗಳೆಂದು ಕರೆಯಲಾಗುತ್ತದೆ) ಕಂಡುಹಿಡಿದನು. ಇದು ಭೂಮಿಯ ಚಂದ್ರನನ್ನು ಹೊರತುಪಡಿಸಿ ಉಪಗ್ರಹದ ಮೊತ್ತ ಮೊದಲ ವೀಕ್ಷಣೆ. ಇದು ಭೂಮಿಯ ಚಂದ್ರನನ್ನು ಹೊರತುಪಡಿಸಿ ಉಪಗ್ರಹದ ಬಾಹ್ಯಾಕಾಶ ಚಲನೆಯ ಪ್ರಪ್ರಥಮ ಆವಿಷ್ಕಾರವು ಆಗಿದೆ. ಇದರಿಂದ ಗ್ರಹಗಳ ಚಲನೆಯ ಬಗ್ಗೆ ಕೋಪರ್ನಿಕಸ್ ಮಂಡಿಸಿದ ಸೌರ ಕೇಂದ್ರಿತ ವಾದಕ್ಕೆ ಸಾಕಷ್ಟು ಬೆಂಬಲ ಸಿಕ್ಕಂತಾಯಿತು. ಗೆಲೆಲಿಯೋ ಮುಚ್ಚುಮರೆಯಿಲ್ಲದೆ ಕೋಪರ್ನಿಕಸ್ ನ ವಾದಕ್ಕೆ ಬೆಂಬಲ ತೋರಿಸಿದ್ದರಿಂದ ಅವನು ಧಾರ್ಮಿಕ ನಾಯಕರಿಂದ ತನಿಖೆಯ ಭಯದಲ್ಲಿ ಇರುವಂತಾಯಿತು.

ಗ್ರಹದ ರಚನೆ

ಸಣ್ಣ ಶಿಲೆಗಳಿಂದ ರಚಿತವಾಗಿರುವ ಗುರುವಿನ ಒಳಭಾಗವು ಲೋಹರೂಪಿ ಜಲಜನಕದ ಒಂದು ಪದರದಿಂದ ಆವೃತವಾಗಿದ್ದು ಇದರ ಹೊರಗಭಾಗದಲ್ಲಿ ದ್ರವರೂಪಿ ಜಲಜನಕದ ಮತ್ತು ಪದರಗಳು ಕಂಡುಬರುತ್ತವೆ. ಜಲಜನಕದ ಈ ವಿವಿಧ ರೂಪದ ವಲಯಗಳನ್ನು ಸ್ಪಷ್ಟವಾದ ಯಾವುದೇ ರೇಖೆಯಾಗಲಿ ಮೇಲ್ಮೈಯಾಗಲಿ ಬೇರ್ಪಡಿಸುವುದಿಲ್ಲ. ಬದಲಿಗೆ ಗ್ರಹದ ಒಳಗೆ ಹೋಗುತ್ತಾ ಕ್ರಮೇಣವಾಗಿ ಜಲಜನಕದ ರೂಪವು ಒಂದರಿಂದ ಇನ್ನೊಂದಕ್ಕೆ ಮಾರ್ಪಡುತ್ತದೆ.

ಆಕಾರ

ಗುರುಗ್ರಹವು ಭೂಮಿಯಂತೆಯೇ ಮೇಲ್ಭಾಗ ಮತ್ತು ಕೆಲಭಾಗಗಳಲ್ಲಿ ಸ್ವಲ್ಪ ಚಪ್ಪಟೆಯಾದ ಗೋಳಾಕಾರದಲ್ಲಿದೆ ಅಂದರೆ ಸಮಭಾಜಕದ ಮೂಲಕ ವ್ಯಾಸವು ಧ್ರುವಗಳ ಮೂಲಕದ ವ್ಯಾಸಕ್ಕಿಂತ ಅಧಿಕವಾಗಿದೆ. ಗುರುಗ್ರಹದ ಈ ಎರಡು ವ್ಯಾಸಗಳ ನಡುವೆ 9275 ಕಿ.ಮೀ ನಷ್ಟು ವ್ಯತ್ಯಾಸವಿದೆ. ಗುರುವಿನ ಕ್ಷಿಪ್ರವಾದ ಅಕ್ಷೀಯ ಪರಿಭ್ರಮಣ ಕಾರಣದಿಂದ ಅದರ ಸಮಭಾಜಕವು ಹೊರ ಉಬ್ಬುತ್ತದೆ.

ಬೃಹತ್ ಕೆಂಪು ಚುಕ್ಕೆ

ಬೃಹತ್ ಕೆಂಪು ಚುಕ್ಕೆಯು ಗುರುಗ್ರಹದ ಮೇಲೆ ಶಾಶ್ವತವಾಗಿರುವ ಒಂದು ಪ್ರತಿಗಾಮಿ ಚಂಡಮಾರುತ. ಇದು ಸಮಭಾಜಕದಿಂದ 22 ಡಿಗ್ರಿ ದಕ್ಷಿಣದಲ್ಲಿದ್ದು ಕಡೇಪಕ್ಷ ಕಳೆದ 340 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಇದು ಭೂಮಿಯಲ್ಲಿನ ದೂರದರ್ಶಕಗಳಿಂದಲೂ ಗೋಚರಿಸುವಷ್ಟು ದೊಡ್ಡದಾಗಿದೆ. 1665 ರಲ್ಲಿ ಈ ಚಂಡಮಾರುತವನ್ನು ವಿವರಿಸಿದ ಜಿಯೋವಾಸಿ ಡಾಮಿನಿಕೋ ಕ್ಯಾಸಿನಿ ಅವರೇ ಇದನ್ನು ಕಂಡುಹಿಡಿದರೆಂದು ನಂಬಿಕೆ.

ಗುರುವಿನ ಮೇಲೆ ಜೀವರಾಶಿ

ಗುರುವಿನ ವಾಯುಮಂಡಲದಲ್ಲಿ ನೀರಿನ ಅಂಶವು ಬಹಳ ಕಡಿಮೆ. ಇದಲ್ಲದೆ ಗುರುಗ್ರಹದಲ್ಲಿ ಘನವಾದ ಮೇಲ್ಮೈ ಇದ್ದರೂ ಅದು ಗ್ರಹದ ಒಳಭಾಗದಲ್ಲಿದ್ದು ಅಪಾರವಾದ ಒತ್ತಡಕೊಳಪಟ್ಟಿರುತ್ತದೆ. ಈ ಕಾರಣಗಳಿಂದಾಗಿ ಅಲ್ಲಿ ಭೂಮಿಯಂತೆ ಜೀವಿಗಳಿರುವುದು ಅಸಂಭವನೀಯ.

ಕನಸು

Related post

Leave a Reply

Your email address will not be published. Required fields are marked *