ಸೌರವ್ಯೂಹ – 9 – ಯುರೇನಸ್

–ಯುರೇನಸ್–

ಯುರೇನಸ್ ಸೌರಮಂಡಲದ ದೂರದ ಗ್ರಹ, ಸೂರ್ಯನಿಂದ ಏಳನೆಯದು. 1781 ರಲ್ಲಿ ವಿಲಿಯಂ ಹರ್ಷಲ್ ಅದರ ಇರುವಿಕೆಯನ್ನು ಕಂಡುಹಿಡಿದದ್ದು. ಅನಿಲ ರೂಪಿಯಾದ ಯುರೇನಸ್ ಗ್ರಹವು ವ್ಯಾಸದಲ್ಲಿ ಮೂರನೇ ಅತಿ ದೊಡ್ಡ ಹಾಗು ದ್ರವ್ಯರಾಶಿಯಲ್ಲಿ 4 ನೇ ಅತಿ ದೊಡ್ಡ ಗ್ರಹವಾಗಿದೆ. ಇದಕ್ಕೆ ಆಕಾಶದ ದೇವತೆ ಹಾಗು ಇತರೆ ದೇವತೆಗಳ ಪೂರ್ವಜನಾದ ಗ್ರೀಕ್ ದೇವತೆಯ “ಯುರೇನಸ್” ಎಂಬ ಹೆಸರನ್ನು ಇಡಲಾಗಿದೆ. ಆಧುನಿಕ ಕಾಲದಲ್ಲಿ ಕಂಡುಹಿಡಿಯಲಾದ ಮೊದಲ ಗ್ರಹ ಇದು. ಈ ಗ್ರಹವನ್ನು ಔಪಚಾರಿಕವಾಗಿ ಕಂಡುಹಿಡಿದದ್ದು. ಬೇರೆ ಗ್ರಹಗಳು (ಬುಧ ದಿಂದ ಶನಿಯವರೆಗೆ) ಹಿಂದಿನ ಕಾಲದಿಂದಲೇ ಪರಿಚಿತವಾಗಿದುದ್ದರಿಂದ ಯುರೇನಸ್ ನ ಆವಿಷ್ಕಾರವು ಆಧುನಿಕ ಮಾನವನ ಇತಿಹಾಸದಲ್ಲಿ ಮೊದಲ ಬಾರಿಗೆ ಸೌರಮಂಡಲದ ಎಲ್ಲೆಯನ್ನು ವಿಸ್ತರಿಸಿತು. ಬರಿಗಣ್ಣಿನಿಂದಲ್ಲದೆ ದೂರದರ್ಶಕವನ್ನು ಉಪಯೋಗಿಸಿ ಕಂಡುಹಿಡಿಯಲಾದ ಮೊಟ್ಟಮೊದಲ ಗ್ರಹ. ಇದನ್ನು ಮುಂಚೆ ಹಲವು ಬಾರಿ ವೀಕ್ಷಿಸಲಾಗಿದ್ದರು ಇದನ್ನು ತಪ್ಪಾಗಿ ನಕ್ಷತ್ರವೆಂದು ಭಾವಿಸಲಾಗಿತ್ತು.

ವಿಲಿಯಂ ಹರ್ಷಲ್ ಮಾರ್ಚ್ 13, 1781 ರಲ್ಲಿ ಕಂಡುಹಿಡಿದರೂ ಏಪ್ರಿಲ್ 26,1781 ರಂದು ಅದನ್ನು ಒಂದು ಧೂಮಕೇತು ಎಂದು ವರದಿ ಸಲ್ಲಿಸಿದನು. ಮಾರ್ಚ್ 13, 1781 ರ ರಾತ್ರಿಯಂದು ಏಳು ಅಡಿ ಉದ್ದದ ಮತ್ತು 227 ಪಟ್ಟು ಧೃಷ್ಟಿವರ್ಧನೆಯನ್ನು ಹೊಂದಿದ್ದ ದೂರದರ್ಶಕವನ್ನು ಉಪಯೋಗಿಸಿ ಸಮೀಪದಲ್ಲಿ ಸಣ್ಣ ನಕ್ಷತ್ರಗಳನ್ನು ಪರಿಶೀಲಿಸುತಿದ್ದನು. ಹೀಗೆ ಪರಿಶೀಲಿಸುವಾಗ ಈ ನಕ್ಷತ್ರಗಳಲ್ಲೊಂದು ಅಸಾಮಾನ್ಯವಾದ ವ್ಯಾಸವನ್ನು ಹೊಂದಿರುವಂತೆ ಕಂಡಿತು. ಈ ಕಾರಣದಿಂದ ಆ ನಕ್ಷತ್ರವನ್ನು ಧೂಮಕೇತುವೆಂದು ಪರಿಗಣಿಸಿ ಲಂಡನ್ ನ ರಾಯಲ್ ಸೊಸೈಟಿಯಲ್ಲಿ ಚರ್ಚಿಸಲಾಯಿತು. ಆದರೆ ಇದರ ನಂತರ ಇದರ ಕಕ್ಷೆಯು ವೃತ್ತಾಕಾರದಲ್ಲಿ ಇದೆಯಂದು ಹರ್ಷಲ್ ಮತ್ತು ಲ್ಯಾಪ್ಲೇಸ್ ರ ಸಂಶೋದನೆಗಳು ಸಾಧಿಸಿದ್ದರಿಂದ ಯುರೇನಸ್ ಒಂದು ಗ್ರಹವೆಂದು ಘೋಷಿಸಲಾಯಿತು.

ಭೌತಿಕ ಲಕ್ಷಣಗಳು

ಯುರೇನಸ್ ಮುಖ್ಯವಾಗಿ ಅನಿಲ ಮತ್ತು ವಿವಿಧ ಹಿಮಗಳಿಂದ ಕೂಡಿದೆ. ವಾಯು ಮಂಡಲವು 83% ಜಲಜನಕ, 15% ಹೀಲಿಯಂ, 2 % ಮಿಥೇನ್ ಮತ್ತು ಸ್ವಲ್ಪ ಅಸಿಟಲೀನ್ ಗಳನ್ನೂ ಹೊಂದಿದೆ. ಒಳಭಾಗವು ಆಮ್ಲಜನಕ, ಇಂಗಾಲ, ಸಾರಜನಕ, ಮತ್ತು ಶಿಲೆಗಳಂಥ ಬಾರವಾದ ವಸ್ತುಗಳಿಂದ ಹೆಚ್ಚು ಸಮೃದ್ಧವಾಗಿದೆ. ಹೋಲಿಕೆಯಲ್ಲಿ ಗುರು ಮತ್ತು ಶನಿ ಗ್ರಹಗಳು ಬಹುತೇಕ ಜಲಜನಕ ಮತ್ತು ಹೀಲಿಯಂ ಗಳಿಂದ ರಚಿತವಾಗಿದೆ. ವಾಯುಮಂಡಲದಲ್ಲಿರುವ ಮಿಥೇನ್ ಅನಿಲವು ಕೆಂಪು ಬೆಳಕನ್ನು ಹೀರಿಕೊಳ್ಳುವುದರಿಂದ ಗ್ರಹವು ನೀಲಿ – ಹಳದಿ ಬಣ್ಣದಲ್ಲಿ ಕಾಣುತ್ತದೆ. ಯುರೇನಸ್ ನ ಮೋಡದ ಪದರದ ತಾಪಮಾನವು ಸುಮಾರು 55ಕ್ಕೆ.(218 ಸೆ. ಅಥವಾ 360 ಫ್ಯಾರನೇಟ್) ನಷ್ಟು ಇರುತ್ತದೆ.

ಯುರೇನಸ್ ಗ್ರಹವು ಮಂದವಾದ ಉಂಗುರ ವ್ಯವಸ್ಥೆಯನ್ನು ಹೊಂದಿದೆ. ಈ ಉಂಗುರಗಳು ಹತ್ತು ಮೀಟರ್ ಗಳವರೆಗೂ ವ್ಯಾಸವುಳ್ಳ ತುಣುಕುಗಳಿಂದ ಕೂಡಿದೆ. ಜೇಮ್ಸ್ ಎಲಿಯಟ್, ಎಡ್ವರ್ಡ್ ಮತ್ತು ಡಗ್ಲಸ್ ಮಿಂಕ್ ಅವರುಗಳು 1977 ರಲ್ಲಿ ಕೈಪರ್ ವೀಕ್ಷಣಾಲಯವನ್ನು ಉಪಯೋಗಿಸುತಿದ್ದಾಗ ಆಕಸ್ಮಿಕವಾಗಿ ಕಂಡುಹಿಡಿದರು.

ಉಪಗ್ರಹಗಳು

ಯುರೇನಸ್ ಗೊತ್ತಿರುವಂತೆ 21 ನೈಸರ್ಗಿಕ ಉಪಗ್ರಹಗಳನ್ನು ಹೊಂದಿದೆ. ಶೇಕ್ಸ್ಪಿಯರ್ ಮತ್ತು ಅಲೆಕ್ಸಾಂಡರ್ ಪೋಪ್ ರ ಸಾಹಿತ್ಯಗಳಲ್ಲಿ ಕಂಡುಬರುವ ಪಾತ್ರಗಳ ಹೆಸರುಗಳನ್ನೂ ಈ ಉಪಗ್ರಹಗಳಿಗೆ ಇಡಲಾಗಿದೆ. 5 ಮುಖ್ಯ ಉಪಗ್ರಹಗಳೆಂದರೆ “ಮಿರಾನ್ಹಾ, ಏರಿಯಲ್, ಅಂಬ್ರಿಯಲ್, ಟೈಟೇನಿಯ, ಮತ್ತು ಒಬೆರಾನ್”.

ಗೋಚರತೆ

ಯುರೇನಸ್ ನ ಗೋಚರ ಪ್ರಮಾಣವು 55 ರಿಂದ 60 ರವರೆಗೆ ಇರುವುದರಿಂದ ಚೆನ್ನಾಗಿ ಕತ್ತಲಿರುವ ಆಗಸದಲ್ಲಿ ಬರಿಗಣ್ಣಿಗೆ ಮಂದವಾದ ನಕ್ಷತ್ರದಂತೆ ಕಾಣುತ್ತದೆ. ಇದರ ಗೋಚರ ತುಂಬಾ ಕಷ್ಟ ದುರ್ಭೀನಿನ ಸಹಾಯದಿಂದ ಸುಲಭವಾಗಿ ನೋಡಬಹುದು. ಭೂಮಿಯಿಂದ ನೋಡಿದಾಗ ಆರ್ಕ್ಕ್ಷಕ್ಪಣಗಳ ವ್ಯಾಸವಿರುವಂತೆ ಕಂಡುಬರುತ್ತದೆ. 12 ಅಂಗುಲಕ್ಕಿಂತ ಹೆಚ್ಚು ವ್ಯಾಸದ ಮತ್ತು ಕಾಚಕವನ್ನು ಹೊಂದಿರುವ ಹವ್ಯಾಸಿ ದೂರದರ್ಶದಲ್ಲಿ ಬಿಳಿಚಿಕೊಂಡ ನೀಲಿ ತಟ್ಟೆಯಂತೆ ಕಾಣುತ್ತದೆ. ಇದರ ಎರಡು ದೊಡ್ಡ ಉಪಗ್ರಹಗಳಾದ ಟೈಟೇನಿಯ ಮತ್ತು ಒಬೆರಾನ್ ಗಳು ಕಾಣಬಹುದು. ಇದಕ್ಕಿಂತ ದೊಡ್ಡ ದೂರದರ್ಶಕಗಳಲ್ಲೂ ಮೇಲ್ಮೈ ವಿವರಗಳು ಕಾಣುವುದಿಲ್ಲ, ಆದರೆ ವಾಯೇಜರ್ ಯಾತ್ರೆಯ ನಂತರದ ವರ್ಷಗಳಲ್ಲಿ ನಸುಗೆಂಪು ಕಿರಣಾದ್ಯಯನಗಳು ವಾಯುಮಂಡಲದ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ಕಂಡುಕೊಟ್ಟಿದೆ.

ಕನಸು

Related post

Leave a Reply

Your email address will not be published. Required fields are marked *