ಪ್ರಿಯೆ!
ನೀನೇ ನನ್ನ ಬೆಳ್ಳಿ ಚುಕ್ಕಿ.
ನೀನೇ ನನ್ನ ಪ್ರೀತಿಯ ಹಕ್ಕಿ.
ಕುಡಿದುಬಂದವನಿಗೆ ಬೈದಳು.
ಪಾತ್ರೆಯನ್ನು ಕುಕ್ಕಿ ಕುಕ್ಕಿ.
ಬಳೆ
ಮಕ್ಕಳಿಗೆ ಇಷ್ಟ
ಕೋಡಬಳೆ.
IT ಮಿಕಗಳಿಗೆ
“Code”ಬಳೆ.
ಅಳಿಯ
ಕರಾವಳಿಯ ಅಳಿಯನಿಗೆ ಮಾವ ಕೊಡದಿದ್ದರೂ ಓಕೆ
ಮನೆ, ಸೈಟ್,
ಜಮೀನು.
ಆಗಾಗ ಕಳಿಸಿಕೂಟ್ಟರೆ ಸಾಕು ತರತರದ
ಮೀನು.
ಬಲೆ
ಒಪ್ಪಿಕೊಳ್ಳಲು
ಹೀಗೇಕೆ ಕಾಡುವೆ
ಓ ನನ್ನ
ನಲ್ಲೆ.
ನನ್ನ ಪಾಲಿಗೆ
ನೀನೇನು
ಸಿಲ್ಕ್ ಬೋರ್ಡ್
ಸಿಗ್ನಲ್ಲೆ.
ಶ್ರೀಧರ ಕಾಡ್ಲೂರು