ಹೂವು – ಮುಳ್ಳು
ಅವಳೊಂದು
ಘಮ – ಘಮಿಸುವ
ಸುಂದರ ಹೂವು!
ಒಲವ ಪಡೆದು
ಅವಳ ರಕ್ಷಣೆಗೆ ನಿಂತ
ಚೂಪಾದ
ಮುಳ್ಳು ನಾನು!!
ಜೀವ ಗೀತೆಗಳು
ಕನಸಿನ
ಕನ್ನಿಕೆಯೊಂದಿಗೆ
ಕಳೆದ ಕ್ಷಣಗಳು
ಮಧುರ ಅತಿ ಮಧುರ
ಸುಂದರ ಸುಮಧುರ!
ಅವು ಭಾವಗೀತೆಗಳು
ಪ್ರೇಮ ಗೀತೆಗಳು
ಜೀವ ಗೀತೆಗಳು!!
ವೈಯಾರ
ರಂಗು ರಂಗಿನ ನಿನ್ನ
ಉಡುಪು
ಅದಕ್ಕೊಪ್ಪುವಂತಿದೆ ನಿನ್ನ
ಒನಪು
ಅದನ್ನು ಮೀರಿಸುವಂತಿದೆ ನಿನ್ನ
ವೈಯಾರ
ಮುದ್ದಿಸಬೇಕೆನಿಸುತಿದೆ ನಿನ್ನ
ಮನಸಾರ!!
ಸುಹಾಸಿನಿ
ಅವಳು ನಕ್ಕ ರೀತಿ
ನಗುವಿಗೆ ನಾ ಬಿದ್ದ ರೀತಿ
ಮನಸಿಂದ ಮಾಸಲು
ಸಾಧ್ಯವೇ ಇಲ್ಲ!
ಮತ್ತೆ ಎಂದು ಅಂತಹ
ನಗುವಿನ ಚೆಲುವೆಯನ್ನು
ಕಾಣಲೇ ಇಲ್ಲ
ಸುಹಾಸಿನಿ ಅವಳು!!
ಡಾII ಪರಮೇಶ್ವರಪ್ಪ ಕುದರಿ