ಜಾಗವಿಲ್ಲ
ಕೊನೆಯಿಲ್ಲ
ನಮ್ಮ ಪ್ರೀತಿಗೆ
ಸರಿಸಾಟಿಯಿಲ್ಲ ಅದರ
ವಿವಿಧ ರೀತಿಗೆ
ನಿಜವಾದ ಪ್ರೀತಿಯಲ್ಲಿ
ಜಾಗವಿಲ್ಲ ಭೀತಿಗೆ
ಒಲಿದು ಬರುತ್ತದೆ ಪ್ರೀತಿ
ಬಲವಾದ ಛಾತಿಗೆ!!
ಪವಿತ್ರ ಪ್ರೀತಿ
ಹಾಲಿನಂತೆ ನಿಷ್ಕಲ್ಮಶ
ಜೇನಿನಂತೆ ಸಿಹಿ
ನೆನಪಿನಂತೆ
ಮಧುರವಾಗಿರುತ್ತದೆ
ಪವಿತ್ರವಾದ ಪ್ರೀತಿ!
ಮತ್ತೆ ಮತ್ತೆ
ಮನಸು
ಬಯಸುವಂತಿರುತ್ತದೆ!!!
ಧನ್ಯ
ಗೆಳತಿ
ನಿನ್ನ ಕೋಮಲ
ಪಾದ ಸ್ಪರ್ಶ
ಮಾಡಿದ
ಆ ಮುಳ್ಳುಗಳೆಷ್ಟು
ಧನ್ಯ
ಸಿಕ್ಕಿಲ್ಲ
ಅವಳ
ಸಹಜ
ಸೌಂದರ್ಯದ
ಗುಟ್ಟೇನು
ಎಂಬ ಪ್ರಶ್ನೆ
ಸದಾ ಕಾಡುತ್ತಿದೆ!
ಇನ್ನೂ
ಉತ್ತರವೇ
ಸಿಕ್ಕಿಲ್ಲ!!