ಹಿಂದೂಸ್ತಾನದ ಮಹಿಮೆ

ಹಿಂದೂಸ್ತಾನದ ಮಹಿಮೆ

ನಮ್ಮ ದೇಶವು ನಮ್ಮ ಹೆಮ್ಮೆಯು
ಸದಾ ಚಿಗುರಲಿ ಇಲ್ಲಿ ಶಾಂತಿಯು!
ಜಗವರಿಯಲಿ ಹಿಂದೂಸ್ತಾನದ ಮಹಿಮೆ..
ನಮಗೆಂದಿಗೂ ಇದು ಗೌರವದ ಗರಿಮೆ!!

ದ್ವೇಷ -ಹಿಂಸೆಯ ಅನಾಚಾರವಳಿದು
ಸಕಲೆಡೆ ನೆಮ್ಮದಿ ಉಳಿಯಲಿ!
ಸರ್ವಜನಾಂಗದ ಸದಾಚಾರವುಳಿದು..
ಸಮೃದ್ಧತೆಯು ಸದಾ ಬೆಳೆಯಲಿ!!

ವಿಶ್ವದೆಲ್ಲೆಡೆ ನಮ್ಮ ಹಿಂದೂಸ್ತಾನದ
ಕೀರ್ತಿ ಪತಾಕೆಯು ಹಾರಾಡಲಿ!
ಸೈನಿಕರ ರಕ್ಷಣೆಯಿರುವ ನಾಡಿನಲಿ..
ಭೀತಿ ಶಂಕೆಯು ಕಾಡದಿರಲಿ!!

ಸುಮನಾ ರಮಾನಂದ

Related post