ಹೂಮಾಲೆಯಾದ ಆಂಡಾಳು – ನೀಳ್ಗತೆ
ಪುಸ್ತಕದ ಹೆಸರು: ಹೂಮಾಲೆಯಾದ ಆಂಡಾಳು
ಪ್ರಕಾರ: ನೀಳ್ಗತೆ
ಲೇಖಕರು: ಆಶಾ ರಘು
ಮುದ್ರಣ: 1
ಪ್ರಕಾಶನ: ಉಪಾಸನ ಬುಕ್ಸ್
ಪುಟಗಳು: 64
ಬೆಲೆ: 120/-
ಮೊಬೈಲ್: 9008122991
ಸುಮಾರು ಏಳನೇ ಶತಮಾನದಲ್ಲಿ ಜೀವಿಸಿದ್ದ ಆಂಡಾಳು, ಹನ್ನೆರಡು ಜನ ಆಳ್ವಾರುಗಳಲ್ಲಿ ಒಬ್ಬಳು. ಇವಳ ಇನ್ನೊಂದು ಹೆಸರು ಗೋದಾದೇವಿ.

ಇವಳು ಪೆರಿಯಾಳ್ವಾರರ ಸಾಕುಮಗಳು. ಇವಳು ಶ್ರೀರಂಗನಾಥನನ್ನೇ ವಿವಾಹವಾಗಬೇಕೆಂದು ಮೊದಲೇ ಸಂಕಲ್ಪಿಸಿಕೊಂಡಿದ್ದು, ತಾನೇ ರಚಿಸಿದ ತಿರುಪ್ಪಾವೈಯನ್ನು ದಿನಕ್ಕೊಂದರಂತೆ ಭಗವಂತನಿಗಾಗಿ ಹಾಡಿ, ತನ್ನ ಸಖಿಯರೊಡನೆ ಮಾರ್ಗಶಿರ ಮಾಸದ ವ್ರತವನ್ನು ಆಚರಿಸುತ್ತಾಳೆ. ಕಡೆಗೆ ಪೆರಿಯಾಳ್ವಾರರೇ ಮುಂದೆ ನಿಂತು ಆಂಡಾಳುವಿಗೆ ಶ್ರೀರಂಗದ ಶ್ರೀರಂಗನಾಥನೊಂದಿಗೆ ವಿಜೃಂಭಣೆಯಿಂದ ಮದುವೆ ಮಾಡಿಸುತ್ತಾರೆ. ಹೂಮಾಲೆಯನ್ನು ಶ್ರೀರಂಗನಾಥನಿಗೆ ಅರ್ಪಿಸಿ, ತಾನೂ ಅವನಲ್ಲಿ ಐಕ್ಯಳಾಗಿಬಿಡುತ್ತಾಳೆ. ಇವಳ ಕುರಿತಾದ ಆಶಾ ರಘು ಅವರ ರಚನೆಯ ನೀಳ್ಗತೆಯು, ಆಂಡಾಳುವಿನ ರಚನೆಯಾದ ತಿರುಪ್ಪಾವೈ ಸಹಿತವಾಗಿ ಈ ಕೃತಿಯಲ್ಲಿದೆ.
ಈ ಪುಸ್ತಕ ಕೊಳ್ಳಲು ಇಚ್ಛಿಸುವವರು upasanabooks.com ಅಥವಾ ವಾಟ್ಸಪ್ಪ್ ಮೊಬೈಲ್ ಸಂಖ್ಯೆ 9008122991 ಗೆ ಸಂಪರ್ಕಿಸಬಹುದು.
ಸಾಹಿತ್ಯಮೈತ್ರಿ