ಹೆಣ್ಣು ಮತ್ತು ಆರೋಗ್ಯ ಭಾಗ -3
ಆಗಮನದ ನಿರೀಕ್ಷೆ – 3 ನೇ ಹಂತ
7 8 9 ನೇ ತಿಂಗಳು ಗರ್ಭಿಣಿಯಲ್ಲಾ ಆಗುವ ವ್ಯತ್ಯಾಸಗಳು, ಮಗುವಿನ ಬೆಳವಣಿಗೆಯಲಾಗುವ ವ್ಯತ್ಯಾಸಗಳನ್ನು ಈ ಕಂತಿನಲ್ಲಿ ತಿಳಿಸಿಕೊಡುತ್ತೇನೆ.
1-ಏಳು ಎಂಟು ಒಂಬತ್ತು ನೇ ತಿಂಗಳು ಮಗುವಿನ ಉದ್ದ ಹಾಗೂ ತೂಕದಲ್ಲಿ ಹೆಚ್ಚುವಿಕೆಯನ್ನು ಕಾಣಬಹುದು ಅದಕ್ಕೆ ತಾಯಿಯ ದೇಹದಲ್ಲೂ ವ್ಯತ್ಯಾಸಗಳು ಕಾಣುತ್ತದೆ. ಮಗುವಿನ ಬೆಳವಣಿಗೆಗೆ ಪೂರಕವಾಗುವಂತೆ ಹೆಚ್ಚಿನ ಪುಷ್ಟಿದಾಯಕವಾದ ಆಹಾರವನ್ನು ಸೇವಿಸಬೇಕು.
2-ಮಗು ದೊಡ್ಡದಾಗಿ ಹೊಟ್ಟೆಯಲ್ಲಿನ ಎಲ್ಲಾ ಅಂಗಗಳನ್ನು ಒತ್ತುವುದರಿಂದ ತಾಯಿಗೆ ಒಂದು ರೀತಿಯ ಅಸ್ವಸ್ಥತೆ ಉಂಟಾಗುತ್ತದೆ. ಇದಕ್ಕೆ ಪರಿಹಾರವಾಗಿ ತಾಯಿ ಆಗುವಳು ಸಡಿಲವಾದ ಉಡುಪು ಧರಿಸಿ, ಆರಾಮದಾಯಕವಾಗಿ ಕುಳಿತುಕೊಳ್ಳುವುದನ್ನು, ಮಲಗುವುದನ್ನು ರೂಢಿಸಿಕೊಳ್ಳಬೇಕು
3- ಗರ್ಭಾಶಯ ಭಾಗ ಮೇಲೆ ಬರುವುದರಿಂದ ಎದೆಗೆ ಹಾಗೂ ಶ್ವಾಸಕೋಶಗಳಿಗೆ ಒತ್ತಿದಂತಾಗಿ ತೊಂದರೆಯಾಗುತ್ತದೆ
4- ನೀರು ಹಿಡಿದಿಡುವಿಕೆಯಿಂದ ಮುಖ ಕೈ ಕಾಲುಗಳಲ್ಲಿ ಊತ ಬರುತ್ತದೆ ಇದಕ್ಕೆ ಪರಿಹಾರವಾಗಿ ಉಪ್ಪನ್ನು ಕಮ್ಮಿ ಸೇವಿಸಿ ಕಾಲುಗಳನ್ನು ಆದಷ್ಟು ಸಣ್ಣ ಸ್ಟೂಲಿನ ಮೇಲೆ ಇಟ್ಟುಕೊಂಡು ಕೂತುಕೊಳ್ಳಬೇಕು ಮಲಗುವಾಗ ಕಾಲ ಕೆಳಗಡೆ ಒಂದು ದಿಂಬನ್ನು ಇಟ್ಟುಕೊಳ್ಳಬಹುದು
5- ದೇಹದಲ್ಲಿಜನನ ಪ್ರಕ್ರಿಯೆಗೆ ಅನುಕೂಲವಾಗುವಂತೆ ಮಾರ್ಪಾಡಾಗುವುದರಿಂದ ನಡಿಗೆಯಲ್ಲಿ ಏರುಪೇರು ಆಗುತ್ತದೆ
6-ಸ್ವಲ್ಪ ತಿಂದರು ಎದೆಯಲ್ಲಿ ಒತ್ತಿದಂತಾಗಿ, ಉರಿ ಸಂಕಟ ಆಗುತ್ತದೆ ಇದರ ಪರಿಹಾರವಾಗಿ ಗರ್ಭಿಣಿಯು ಸ್ವಲ್ಪ ಸ್ವಲ್ಪ ಆಹಾರವನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು ಖಾರ ಹಾಗೂ ಸಿಹಿ ಇರುವಂತಹ ಆಹಾರವನ್ನು ಸೇವಿಸಬಾರದು.
7- ಬೆಳೆಯುತ್ತಿರುವ ಶಿಶುವು ಮೂತ್ರ ನಾಳಗಳ ಮೇಲೆ ಒತ್ತುವುದರಿಂದ ಪದೇಪದೇ ಮೂತ್ರ ಮಾಡಬೇಕಾಗಿ ಬರುತ್ತದೆ.
8- ನಿದ್ರೆಯಲ್ಲಿ ಏರುಪೇರಾಗಿ ನಿದ್ರಾಹೀನತೆಯು ಕಾಡಬಹುದು ಆದ್ದರಿಂದ ರಾತ್ರಿ ಮಲಗುವ ಮುನ್ನ 5 ನಿಮಿಷ ಮೌನವಾಗಿ ದೀರ್ಘ ಉಸಿರಾಟವನ್ನು ಮಾಡುವುದರಿಂದ ಧ್ಯಾನ ಮಾಡುವುದರಿಂದ ಬಿಸಿ ಹಾಲು ಕುಡಿಯುವುದರಿಂದ ನಿದ್ರಾಹೀನತೆಯನ್ನು ತಡೆಗಟ್ಟಬಹುದು
9- ನಿದ್ದೆಯಲ್ಲಿ ಮೀನ ಕಂಡ ಸ್ನಾಯುಗಳು ಗಟ್ಟಿಯಾಗಿ ಹಿಡಿದುಕೊಂಡು ಕ್ರ್ಯಾಂಪ್ಸ್ ಆಗಬಹುದು ಇದು ಮಾರನೇ ದಿವಸ ನೋವನ್ನುಂಟು ಮಾಡುತ್ತದೆ ಆಗ ಸ್ವಲ್ಪ ಎಣ್ಣೆಯಲ್ಲಿ ಮಸಾಜ್ ಮಾಡಿಸಿಕೊಂಡು ವೈಟಮಿನ್ ಇ ಟ್ಯಾಬ್ಲೆಟ್ ಗಳನ್ನು ತೆಗೆದುಕೊಳ್ಳುವುದರಿಂದ ಇದು ಕಮ್ಮಿಯಾಗುತ್ತದೆ
10- ಮಗುವಿನ ತೂಕ ಹಾಗೂ ತನ್ನ ತೂಕದಲ್ಲಿ ಹೆಚ್ಚುವಿಕೆಯಿಂದ ಬೆನ್ನು ನೋವು ಬರಬಹುದು, ಬೆನ್ನಿಗೆ ಮಸಾಜ್ ಮಾಡಿಕೊಳ್ಳುವುದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ ಇದೇ ಕಾರಣಕ್ಕಾಗಿ ಹಿಂದಿನ ಕಾಲದಲ್ಲಿ ವಾರಕ್ಕೆ ಎರಡು ದಿನ ಗರ್ಭಿಣಿಗೆ ಎಣ್ಣೆ ಹಚ್ಚಿ ಮೆಸೇಜ್ ಮಾಡಿ ಬಿಸಿ ಬಿಸಿ ಸ್ನಾನವನ್ನು ಮಾಡಿಸುತ್ತಿದ್ದರು
11-ಮಗುವಿನಲ್ಲಿ ಶಾಖ ಉತ್ಪತ್ತಿಯಾಗುತ್ತಿರುವುದರಿಂದ ತಾಯಿಗೂ ಕೂಡ ಹೆಚ್ಚು ಸೆಖೆ ಆಗುತ್ತದೆ
12-ಹಾರ್ಮೋನ್ಸ್ ಗಳ ಉತ್ಪತ್ತಿ ಹೆಚ್ಚಿರುವುದರಿಂದ ಕೂದಲು ಉದುರುವಿಕೆ ಅಥವಾ ಬೇಡದ ಕಡೆ ಕೂದಲು ಬರುವಿಕೆ ಹಾಗೂ ಕೂದಲು ಒರಟಾಗುವಿಕೆಯನ್ನು ಕಾಣಬಹುದು.
13-ಚರ್ಮದಲ್ಲೂ ಕೂಡ ಬದಲಾವಣೆಗಳಾಗಿ ಹೊಟ್ಟೆಯ ತೊಡೆಯ ಭಾಗದಲ್ಲಿ ಸ್ಟ್ರೆಚ್ ಮಾರ್ಕ್ ಗಳು ಬರಬಹುದು ಚರ್ಮ ಒರಟಾಗಬಹುದು, ಕಪ್ಪಗಾಗಬಹುದು ಚರ್ಮದಲ್ಲಿ ನವೆಯಾಗಬಹುದು ಪರಿಹಾರಕ್ಕೆ ಪ್ರತಿನಿತ್ಯ ಎಣ್ಣೆಯಲ್ಲಿ ಮಸಾಜ್ ಮಾಡುವುದರಿಂದ ಈ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು
14-ಹೆಚ್ಚಾಗಿ ಬಿಳಿ ಮುಟ್ಟು ಹೋಗಬಹುದು
15-ಕೆಲವರಿಗೆ ವೆರಿಕೋಸ್ ವೇನ್ಸ್ ಆಗಬಹುದು
ಹೆಚ್ಚು ನಿಲ್ಲದಂತ ಆಯಾಸವಾಗದಂತ ಕೆಲಸಗಳನ್ನು ಮಾಡಬೇಕು
16-ಹೆಮರಾಯಿಡ್ಸ್ ಕೂಡ ಆಗಬಹುದು
ಹಾಗೂ ಹೆಚ್ಚು ನೀರು ಹಾಗೂ ತರಕಾರಿಯನ್ನು ತೆಗೆದು ಕೊಳ್ಳಬೇಕು, ಏಳನೇ ತಿಂಗಳು ಶುರುವಾಗುತ್ತಿದ್ದಂತೆ ವೈದ್ಯರಲ್ಲಿ ತಪಾಸಣೆಗೆ ಹೋಗುವ ಅವಧಿ 15 ದಿನಕ್ಕೊಮ್ಮೆ ಬದಲಾಗುತ್ತದೆ
9 ನೆ ತಿಂಗಳಲ್ಲಿ ತಪಾಸಣೆಗೆ ಹೋಗುವ ಅವಧಿ ವಾರಕ್ಕೊಮ್ಮೆ ಆಗುತ್ತದೆ
ಆಗ ಗರ್ಭಿಣಿಯ ತೂಕ, ರಕ್ತದೊತ್ತಡ, ರಕ್ತ ಪರೀಕ್ಷೆ,ಮೂತ್ರ ಪರೀಕ್ಷೆ,ಹೊಟ್ಟೆಯ ಮೇಲ್ಭಾಗ ಬಂದಿರುವ ಅಳತೆ, ಮಗುವಿನ ಚಲನೆ ಹಾಗೂ ಸ್ಥಾನ ಎಲ್ಲವನ್ನು ಮಗುವಿನ ಎದೆಯ ಬಡಿತವನ್ನು ಪರೀಕ್ಷಿಸುತ್ತಾರೆ. ತಾಯಿಯೂ ದಿನವೂ ಮಗುವಿನ ಚಲನೆಯ ಕಡೆ ಗಮನ ಕೊಟ್ಟಿರಬೇಕು. ರಕ್ತ ಪರೀಕ್ಷೆಯಲ್ಲಿ ಸಕ್ಕರೆ ಕಾಯಿಲೆ ಇದ್ದರೆ ಅದಕ್ಕೆ ಸರಿಯಾದ ಔಷಧಿಯನ್ನು ತೆಗೆದುಕೊಳ್ಳಬೇಕಾಗುತ್ತದೆ
ಇಲ್ಲದಿದ್ದರೆ ಮಗು ಹೆಚ್ಚು ಬೆಳೆದು, ಪ್ರಸವಕ್ಕೆ ತೊಂದರೆಯಾಗುತ್ತದೆ
ಥೈರಾಯಿಡ್ ಸಮಸ್ಯೆ ಇದ್ದವರು ಪರೀಕ್ಷೆ ಮಾಡಿಸಿ ಅನುಗುಣವಾಗಿ ಥೈರಾಯಿಡ್ ಮಾತ್ರೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ತ್ತಾಯಿ ಮಗು ಇಬ್ಬರಿಗೂ ತೊಂದರೆಯಾಗುತ್ತದೆ. ರಕ್ತದೋತ್ತಡ ಇದ್ದು albumin ಜಾಸ್ತಿ ಇದ್ದಾರೆ pre eclampsia ಅನ್ನು ಖಾಯಿಲೆಯಾಗಿ ಪ್ರಸವದ ಸಮಯದಲ್ಲಿ ತುಂಬಾ ತೊಂದರೆಯಾಗುತ್ತದೆ. ಕಬ್ಬಿಣ ಹಾಗೂ ಕ್ಯಾಲ್ಸಿಯಂ ನಿಯಮಿತವಾಗಿ ಸೇವಿಸಬೇಕಾಗುತ್ತದೆ
ಮೂತ್ರ ಪರೀಕ್ಷೆಯಲ್ಲಿ ಆಲ್ಬಮಿನ್ ಎಂಬ ಅತಿ ಮುಖ್ಯವಾದ ಪ್ರೊಟೀನ್ ಒಂದನ್ನು ಪತ್ತೆ ಮಾಡುತ್ತಾರೆ
ಅದು ಇದ್ದರೆ ಪ್ರಿ ಎಕ್ಲೆಮ್ಸಿಯ ಎನ್ನುವ ಪರಿಸ್ಥಿತಿಯನ್ನು ಸೂಚಿಸುತ್ತದೆ
ಅದಕ್ಕೆ ತುಂಬಾ ಜಾಗೃತೆವಹಿಸಿ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ
9 ನೆ ತಿಂಗಳಲ್ಲಿ ಸ್ಕ್ಯಾನ್ ಮಾಡಿ ಮಗುವಿನ ಬೆಳವಣಿಗೆ ಬಗ್ಗೆ ತಿಳಿದುಕೊಳ್ತಾರೆ. ಗರ್ಭಿಣಿ ಹೆಂಗಸು 9 ತಿಂಗಳು ತನ್ನ ಸ್ಥಾನಕ್ಕೆ ಕೊಬ್ಬರಿ ಎಣ್ಣೆಯಲ್ಲಿ ಮಸಾಜ್ ಮಾಡಿಕೊಂಡು ಮಗುವಿನ ಸ್ಥನ್ಯಪಾನಕ್ಕೆ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕು. ಈಗ ಮಗುವಿನ ಜನನಕ್ಕೆ ಸಹಾಯವಾಗುವಂತ ವ್ಯಾಯಾಮಗಳನ್ನು ಕಲಿತು ಅಭ್ಯಾಸ ಮಾಡುವುದು ಮಗುವಿನ ಜನನಕ್ಕೆ ಸಹಾಯವಾಗುತ್ತದೆ.
ಜನನಕ್ಕೆ ಎರಡು ವಾರ ಇರುವಾಗ pelvic ಎಕ್ಸಾಮ್ ಮಾಡಿ ಗರ್ಭಕೋಶ ಜನನ ಪ್ರಕ್ರಿಯೆಗೆ ಹೇಗೆ ಸಜ್ಜುಗೊಳ್ಳುತ್ತಿದೆ ಎಂಬುದನ್ನು ಪರೀಕ್ಷಿಸುತ್ತಾರೆ
ಎಂಟು ಒಂಬತ್ತನೇ ತಿಂಗಳಲ್ಲಿ false pain-Braxton-Hicks contractions ಅಥವಾ ಸುಳ್ಳು ನೋವು ಬರುತ್ತದೆ ಹೆರಿಗೆಯ ನೋವಿನ ತರವೇ ಇರುವ ಈ ನೋವನ್ನು ಹೇಗೆ ಕಂಡುಹಿಡಿಯುವುದು ಎಂದು ತಿಳಿಸಿಕೊಡುತ್ತಾರೆ
ಈ ಸಮಯದಲ್ಲಿ ಹೆರಿಗೆ ಯಾವ ರೀತಿಯಲ್ಲಿ ಆಗಬೇಕು ಎಂಬುದರ ಬಗ್ಗೆ ಏನಾದರೂ ಆದ್ಯತೆ ಇದ್ದರೆ ಅದನ್ನು ಹೇಳಿ ವೈದ್ಯರೊಂದಿಗೆ ಅದರ ತಯಾರಿ ಮಾಡಿಕೊಳ್ಳಬಹುದು.
ಮುಂದಿನ ಸಂಚಿಕೆಯಲ್ಲಿ ಇನ್ನೂ ಕೆಲವು ವಿಚಾರ ಪ್ರಸ್ತಾಪಿಸಿ ಪ್ರಸವದ ಬಗ್ಗೆ ಬರೆಯುತ್ತೀನಿ.
ಡಾ ರುಕ್ಮಿಣಿ ವ್ಯಾಸರಾಜ🩺
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು