2 ದಿನಗಳ ಸಿರಿಕಲಾ ಕನ್ನಡ ಸಂಸ್ಕೃತಿ ಯಕ್ಷೋತ್ಸವ

ಸಿರಿಕಲಾಪುರಸ್ಕಾರ ಮತ್ತು ಸಿರಿಕಲಾಪೋಷಕ ಪುರಸ್ಕಾರ ಸಮಾರಂಭ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮೆ, ಕರ್ನಾಟಕ ಬ್ಯಾಂಕ್ ಹಾಗೂ ಕಲಾಭಿಮಾನಿಗಳ ಸಹಕಾರದೊಂದಿಗೆ 2021 ಡಿಸೆಂಬರ್ ತಿಂಗಳ 4 ಮತ್ತು 5 ಬೆಂಗಳೂರಿನಲ್ಲಿ 2 ದಿನಗಳ ಯಕ್ಷೋತ್ಸವ ಕಾರ್ಯಕ್ರಮವನ್ನು ಸಿರಿಕಲಾ ಕನ್ನಡ ಸಂಸ್ಕೃತಿ ಹಮ್ಮಿಕೊಂಡಿದೆ.

ಹವ್ಯಾಸಿ ಮಹಿಳಾ ಕಲಾವಿದರ ಒತ್ತಾಸೆಯ ಮೇರೆಗೆ ಯಕ್ಷಗಾನ ಯೋಗಕ್ಷೇಮ ಅಭಿಯಾನದ ರೂವಾರಿ ದಿವಂಗತ ವಿ ಆರ್ ಹೆಗಡೆ (ಹೆಗಡೆಮನೆ) ಯವರ ಪರಿಕಲ್ಪನೆಯಲ್ಲಿ 2010 ರಲ್ಲಿ ಪ್ರಾರಂಭವಾದ ಸಂಸ್ಥೆ ಸಿರಿಕಲಾಮೇಳ (ರಿ) ಬೆಂಗಳೂರು.
ನಮ್ಮ ನಾಡಿನ ಹೆಮ್ಮೆಯ ಕಲೆ ಯಕ್ಷಗಾನವನ್ನು ಬೆಳೆಸುವ ಉದ್ದೇಶದಿಂದ ಬೆಂಗಳೂರು ಮಹಾನಗರದಲ್ಲಿ ಆರಂಭವಾದ ಈ ಸಂಸ್ಥೆ ಕರ್ನಾಟಕದ ಉದ್ದಗಲಕ್ಕೂ ಪ್ರದರ್ಶನಗಳನ್ನು ನೀಡಿದೆ. ಅಮೆರಿಕಾದ ಅಕ್ಕ ಸಮ್ಮೇಳನ, ಚೀನಾದಲ್ಲಿ ನೆಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಯೂ ಕೂಡ ಭಾಗವಹಿಸಿದೆ. ಹೈದರಾಬಾದ್, ಮುಂಬೈ, ಪುಣೆ, ಚೆನ್ನೈ, ದೆಹಲಿಗಳಲ್ಲಿಯೂ ಯಕ್ಷಗಾನ ಪ್ರದರ್ಶನ ಕೊಟ್ಟಿದೆ.
ಯಕ್ಷಸಪ್ತಾಹ, ಯಕ್ಷಪಂಚಮಿ, ಯಕ್ಷದಶಾಹಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. 2014 ರ ಜನವರಿ ತಿಂಗಳಿನಲ್ಲಿ ಕುಮುಟದ ಡಾII ಜಿ.ಎಲ್. ಹೆಗಡೆಯವರ ನೇತೃತ್ವದ ರಾಜ್ಯಮಟ್ಟದ ಮಹಿಳಾ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಹಂಚಿಕೊಂಡಿದೆ. ಸಿದ್ದ ಪ್ರೇಕ್ಷಕರ ಜೊತೆಗೆ ಹೊಸ ಹೊಸ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಪ್ರಯತ್ನಗಳು ಸಾಗಿವೆ.
ಶ್ರೀಯುತ ಎ.ಪಿ. ಘಾಟಕ್ ಮತ್ತು ಶ್ರೀಮತಿ ಅರ್ಪಿತಾ ಹೆಗಡೆ ನಿರ್ದೇಶನದಲ್ಲಿ ಯಕ್ಷಗಾನ ತರಗತಿಗಳನ್ನು ಉಚಿತವಾಗಿ ನೆಡೆಸುತಿದ್ದು ಈಗಾಗಲೇ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಕ್ಷಗಾನವನ್ನು ಕಲಿತಿದ್ದು ಯಶಸ್ವಿಯಾಗಿ ಪ್ರದರ್ಶನ ಕೊಡುತ್ತಿದ್ದಾರೆ.

ಯಕ್ಷಗಾನ ಯೋಗಕ್ಷೇಮ ಅಭಿಯಾನದಡಿಯಲ್ಲಿ ಯಕ್ಷಗಾನವನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಸಂಸ್ಥೆ ಬೆಂಗಳೂರಿನ ಸಿರಿಕಲಾಮೇಳ. ಪ್ರತಿ ವರ್ಷ ಆಯ್ದ ಕಲಾವಿದರನ್ನು ಗುರುತಿಸಿ ಹಮ್ಮಿಣಿಯೊಂದಿಗೆ ಗೌರವಿಸುತ್ತಿದೆ. ಯಕ್ಷರಥದ ಮೂಲಕ ಉಚಿತವಾಗಿ ಯಕ್ಷಗಾನ ತರಗತಿಗಳನ್ನು ನಡೆಸಿ ಮಕ್ಕಳಿಗೆ ಯಕ್ಷಗಾನ ಕಲಿಸುತ್ತಿದೆ.

ಮೊದಲ ದಿನ – 04-12-2021

ಗವಿಪುರಂನ ಉದಯಭಾನು ಕಲಾಸಂಘದಲ್ಲಿ ಡಿಸೆಂಬರ್ 4 ಶನಿವಾರ ಮಧ್ಯಾಹ್ನ 3.30ರಿಂದ ಸಿರಿಕಲಾಮೇಳದ ಯಕ್ಷರಥದ ವಿದ್ಯಾರ್ಥಿಗಳಿಂದ ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನ, ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮ 6.30ರಿಂದ ಸಿರಿಕಲಾಮೇಳ ಮತ್ತು ಅತಿಥಿ ಕಲಾವಿದರಿಂದ ಅಭಿಮನ್ಯು ಕಾಳಗ ಯಕ್ಷಗಾನ ಪ್ರದರ್ಶನಗಳಿವೆ.
ಅಂದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ|| ಸಂತೋಷ ಹಾನಗಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ|| ಸಿ.ಎ.ಕಿಶೋರ್, ಕರ್ನಾಟಕ ಬ್ಯಾಂಕ್‍ನ ಡಿಜಿಎಂ ನಾಗರಾಜ ಐತಾಳ್, ಬೃಹತ್ ಬೆಂಗಳೂರು ಹೊಟೇಲುಗಳ ಸಂಘದ ಅಧ್ಯಕ್ಷರಾದ ಪಿ.ಸಿ.ರಾವ್, ಕೋಟೇಶ್ವರ ಸಹಕಾರ ಬ್ಯಾಂಕ್‍ನ ಅಧ್ಯಕ್ಷರಾದ ಮಂಜುನಾಥ ಹತ್ವಾರ್, ಕಲಾಪ್ರೋತ್ಸಾಹಕರಾದ, ಎಂ.ಆರ್.ಭಟ್, ಯಕ್ಷದೇಗುಲದ ನಿರ್ದೇಶಕರಾದ ಕೆ. ಮೋಹನ ಹೊಳ್ಳ, ಕಗ್ಗೀಸ್ ಬೇಕರಿಯ ರಾಘವೇಂದ್ರ ಹತ್ವಾರ್ ಭಾಗವಹಿಸಲಿದ್ದಾರೆ.

ಎರಡನೇ ದಿನ – 05-12-2021

ಡಿಸೆಂಬರ 5 ಭಾನುವಾರ ನಯನ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಕುಮಾರಿ ಚಿನ್ಮಯಿ ತಂಡದವರಿಂದ ಕೊಳಲು ವಾದನ, 3.30ಕ್ಕೆ ಶ್ರೀಮತಿ ಗೀತಾ ಭಟ್ ಮತ್ತು ಶ್ರೀಮತಿ ಜಯ ಹೆಗಡೆ ತಂಡದವರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ, 4 ಗಂಟೆಗೆ ಸಿರಿಕಲಾಮೇಳದ ಯಕ್ಷರಥದ ವಿದ್ಯಾರ್ಥಿಗಳಿಂದ ಕಂಸ ವಧೆ ಯಕ್ಷಗಾನ ಪ್ರದರ್ಶನವಿದೆ.

ಸಂಜೆ 6 ಗಂಟೆಗೆ ಸನ್ಮಾನ ಕಾರ್ಯಕ್ರಮ. ಹಿರಿಯ ಯಕ್ಷಗಾನ ಕಲಾವಿದರಾದ ತಿಮ್ಮಪ್ಪ ಹೆಗಡೆ ಶಿರಳಗಿ ಮತ್ತು ಹಿರಿಯ ಮದ್ದಲೆ ವಾದಕರಾದ ರಮೇಶ ಭಂಡಾರಿ ಕಡತೋಕ ಇವರಿಗೆ 25 ಸಾವಿರ ಹಮ್ಮಿಣಿ, ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ, ಶಾಲು, ಹಾರಗಳೊಂದಿಗೆ ಸಿರಿಕಲಾಪುರಸ್ಕಾರ ನೀಡಿ ಗೌರವಿಸಲಾಗುವುದು.

ಕಲೆ ಹಾಗೂ ಕಲಾವಿದರಿಗೆ ಸದಾ ಬೆಂಬಲಿಸುತ್ತಿರುವ ಹಳದೀಪುರ ವಾಸುದೇವ ರಾವ್ ಮತ್ತು ದೀಪಕ್ ಬಿ.ಎಚ್.ಬಾರ್ಕೂರು ಇವರನ್ನು ಸಿರಿಕಲಾಪೋಷಕ ಪುರಸ್ಕಾರದೊಂದಿಗೆ ಗೌರವಿಸಲಾಗುವುದು.

ಅಂದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ಎಸ್.ರಂಗಪ್ಪ, ಕರ್ನಾಟಕ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಹೆಬ್ಬಾರ್, ಕನ್ನಡ ಪ್ರಭ ಪತ್ರಿಕೆಯ ಸಂಪಾದಕರಾದ ರವಿ ಹೆಗಡೆ, ಸಾಕ್ಷಿ ಸಂಸ್ಥೆಯ ಆಡಳಿತ ಟ್ರಸ್ಟಿ ಡಾ|| ರ.ವಿ.ಜಹಾಗೀರದಾರ, ಸ್ಮಾರ್ಟ್ ಲೈನರ್ರ್ಸ್ ಇಂಡಿಯಾ ಪ್ರೈ,ಲಿನ ನಿರ್ದೇಶಕರಾದ ಮಂದಾರ್ತಿ ಅಮರನಾಥ ಶೆಟ್ಟಿ, ಬಂಟರ ಸಂಘದ ಸಾಂಸ್ಕøತಿಕ ಸಮಿತಿಯ ಅಧ್ಯಕ್ಷರಾದ ಹಾಲಾಡಿ ವಿಜಯ ಶೆಟ್ಟಿ, ಉದ್ಯಮಿಗಳಾದ ಆನಗಳ್ಳಿ ಕರುಣಾಕರ ಹೆಗಡೆ, ಯು.ಎಸ್.ಎನಲ್ಲಿ ಖ್ಯಾತ ವೈದ್ಯರಾದ ಹಳದೀಪುರ ಡಾ|| ಹೆಚ್.ವಿ.ಜನಾರ್ಧನ , ಕಲಾಪ್ರೋತ್ಸಾಹಕರಾದ ಎನ್.ಆರ್.ಹೆಗಡೆ, ಹೊಟೇಲ್ ಹಳ್ಳೀಮನೆಯ ನೀಲಾವರ ಸಂಜೀವ ರಾವ್, ಹಿರಿಯ ವಕೀಲರಾದ ಸುಧಾಕರ ಪೈ, ಉದ್ಯಮಿ ದಿನೇಶ ವೈದ್ಯ ಅಂಪಾರು ಭಾಗವಹಿಸಲಿದ್ದಾರೆ.

ಸಂಜೆ 7 ಗಂಟೆಗೆ ಸಿರಿಕಲಾಮೇಳ ಮತ್ತು ಅತಿಥಿಕಲಾವಿದರಿಂದ ಪಾಂಚಜನ್ಯ ಯಕ್ಷಗಾನ ಪ್ರದರ್ಶನವಿದೆ. ಕಲಾವಿದರಾಗಿ ಸರ್ವೇಶ್ವರ ಹೆಗಡೆ ಮೂರೂರು, ಸುಬ್ರಾಯ ಹೆಬ್ಬಾರ, ಎ.ಪಿ. ಫಾಟಕ್, ರಾಜೇಶ ಆಚಾರ್ಯ, ವೆಂಕಟೇಶ ಹೆಗಡೆ, ಅಮೃತ ದೇವ ಕಟ್ಟಿನಕೆರೆ, ಕಾರ್ತೀಕ ಧಾರೇಶ್ವರ, ಅರ್ಪಿತಾ ಹೆಗಡೆ, ನಾಗಶ್ರೀ, ನೀಹಾರಿಕಾ ಭಟ್, ಶ್ರೀಧರ ಭಟ್ ಕಾಸರಕೋಡು, ಪ್ರಶಾಂತ ವರ್ಧನ, ವಿನಯ್ ಹೊಸ್ತೋಟ ಮುಂತಾದವರಿದ್ದಾರೆ. ಎರಡೂ ದಿನಗಳ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳು ಭಾಗವಹಿಸಿ ಪ್ರೋತ್ಸಾಹಿಸಲು ಕೋರಿದೆ.

ಸಂಪರ್ಕ: 9986509511, 9341839075

ಪ್ರಕಟಣೆ: ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *