ಮುಖಾಮುಖಿ – ಮಂಜುನಾಥ ಅಜ್ಜಂಪುರ ಪುಸ್ತಕ ಬಿಡುಗಡೆ
ಕೃತಿ : ನಿಜ-ಇತಿಹಾಸದೊಂದಿಗೆ – ಮುಖಾಮುಖಿ
ಲೇಖಕರು : ಮಂಜುನಾಥ ಅಜ್ಜಂಪುರ
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ “ವಾಡಿಯಾ ಸಭಾಂಗಣ”,
6 ಬಿ.ಪಿ.ವಾಡಿಯಾ ರೋಡ್, ಬಸವನಗುಡಿ, ಬೆಂಗಳೂರು 560004
ಸಮಯ: ಬೆಳಗ್ಗೆ 10.00ಕ್ಕೆ
ಇತಿಹಾಸ ಅಂದಕೂಡಲೇ ಅದೊಂದು ಬೋರಿಂಗ್ ಸಬ್ಜೆಕ್ಟ್ ಅನ್ನುವ ಮಾತೇ ಹೆಚ್ಚಾಗಿ ಕೇಳಿಬರುತ್ತದೆ. ನಾವು ಪಠ್ಯ ಪುಸ್ತಕಗಳಲ್ಲಿ ಓದುವ ಇತಿಹಾಸ ನಮ್ಮ ಮನಸ್ಸನ್ನು ತಟ್ಟದೇ ಇರುವುದೇ ಇಂಥದ್ದೊಂದು ಅಭಿಪ್ರಾಯ ಮೂಡಲು ಮುಖ್ಯ ಕಾರಣವಿರಬಹುದು. ದೇಶಾಭಿಮಾನವನ್ನು ಜಾಗೃತಗೊಳಿಸದ, ನಮ್ಮವರ ಸುದ್ದಿಯನ್ನು ಹೇಳದ, ವಿದೇಶಿಗರ ಪಾರಮ್ಯವನ್ನು ಮೆರೆಸುತ್ತಾ, ನಮ್ಮ ಸಂಸ್ಕೃತಿ ಅಂದರೆ ಅದೊಂದು ಮೌಢ್ಯಗಳ ಆಗರ ಎನ್ನುವ ಭಾವನೆಗಳನ್ನೇ ಬಿತ್ತುವ ಇತಿಹಾಸದ ಪುಸ್ತಕಗಳೆಡೆಗೆ ಒಂದು ರೀತಿಯ ತಾತ್ಸಾರ ಬೆಳೆಯುವುದು ಸಹಜವೇ ಆಗಿದೆ.
ಇಂಥದ್ದೊಂದು ಮನೋಭಾವವನ್ನು ಮರೆಸಿ, ಮನೋಧಾರ್ಡ್ಯವನ್ನು ಹೆಚ್ಚಿಸುವ, ನಮ್ಮ ದೇಶದ ಇತಿಹಾಸವನ್ನು ಕುರಿತು ನಮ್ಮೊಳಗೊಂದು ಅಭಿಮಾನವನ್ನು ಮೂಡಿಸುವ, ‘ನನ್ನ ದೇಶದ ಇತಿಹಾಸ ಇದು’ ಎಂದು ಪುರಾವೆಗಳೊಂದಿಗೆ ಹೇಳುವ ಪುಸ್ತಕವೇ ‘ನಿಜ-ಇತಿಹಾಸದೊಂದಿಗೆ ಮುಖಾಮುಖಿ’.
ನಮ್ಮ ದೇಶದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೃತಿಯಾದ “ನಿಜ-ಇತಿಹಾಸದೊಂದಿಗೆ ಮುಖಾಮುಖಿ” ಯನ್ನು ಮನು ಮನೆ ಪ್ರಕಾಶನ ಹೊರತಂದಿದ್ದಾರೆ. ಈ ಕೃತಿಯ ಬಿಡುಗಡೆ ಮಾರ್ಚ್ 19 ಬೆಳಿಗ್ಗೆ 10 ಕ್ಕೆ ಬಸವನಗುಡಿಯ “ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ “ವಾಡಿಯಾ ಸಭಾಂಗಣ” ದಲ್ಲಿ ಬಿಡುಗಡೆಯಾಗಲಿದೆ.
ಮುಖ್ಯ ಅಭ್ಯಾಗತರು:
ನಾಡೋಜ ಡಾ।। ಎಸ್.ಆರ್.ರಾಮಸ್ವಾಮಿ
(ಸಂಪಾದಕರು, ಪತ್ರಕರ್ತರು, ಪಂಪ ಪ್ರಶಸ್ತಿ ಪುರಸ್ಕೃತರು)
ಡಾ।। ಎಸ್.ಆರ್.ಲೀಲಾ
(ಕಾಳಿದಾಸ ರಾಷ್ಟ್ರೀಯ ಪುರಸ್ಕಾರ ಸನ್ಮಾನಿತರು,
ವಿಧಾನ ಪರಿಷತ್ ಮಾಜಿ ಸದಸ್ಯರು)
ಶ್ರೀ ಹರಿಪ್ರಕಾಶ್ ಕೋಣೆಮನೆ
(ವಿಸ್ತಾರ ನ್ಯೂಸ್ ಸಿಇಓ ಮತ್ತು ಪ್ರಧಾನ ಸಂಪಾದಕರು)
ಗ್ರಂಥ ಪರಿಚಯ:
ಡಾ।। ಜಿ.ಬಿ.ಹರೀಶ
(ಸಾಹಿತಿ ಮತ್ತು ಇತಿಹಾಸಕಾರರು)
ಅಧ್ಯಕ್ಷತೆ:
ಪ್ರೊ|| ಮಲ್ಲೇಪುರಂ ಜಿ.ವೆಂಕಟೇಶ
(ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು)
ಲೋಕಾರ್ಪಣೆಯಾದ ನಂತರ ರಿಯಾಯಿತಿ ದರದಲ್ಲಿ ಕೃತಿಯು ಸ್ಥಳದಲ್ಲೇ ಓದುಗರಿಗೆ ದೊರಕಲಿದೆ. ಎಲ್ಲರೂ ಬನ್ನಿ ಸಮಾರಂಭವನ್ನು ಯಶಸ್ವಿಗೊಳಿಸಿ.
ಸಾಹಿತ್ಯಮೈತ್ರಿ ತಂಡ