ಮನಸ್ಸು

ಮನಸ್ಸು

ನಾಲಿಗೆಯ ತೊದಲಾಗಿ,
ಕೊರಳಿನ ಬಿಕ್ಕಾಗಿ,
ಅರಿಯದ ತಳಮಳವಾಗಿದ್ದ
ಅವನೂ ಬೆಳೆದಿದ್ದಾನೆ !

ಸ್ನೇಹದ ಎಳೆಯಾಗಿ,
ಪ್ರೀತಿಯ ಬೆಸುಗೆಯಾಗಿ,
ಮೌನದ ಭಾವಾರ್ಥವಾಗಿದ್ದ
ಅವನೂ ಬೆಳೆದಿದ್ದಾನೆ !

ಚಂಚಲತೆಯೊಡನೆ,
ಏಳುಬೀಳುಗಳೊಡನೆ,
ಹುಚ್ಚು ಭಾವನೆಯೊಡನೆ
ಅವನೂ ಬೆಳೆದಿದ್ದಾನೆ !

ನನ್ನ ವಯಸ್ಸಿನೊಡನೆ,
ಪ್ರಭುದ್ಧತೆಯೊಡನೆ,
ಬದುಕಿನಾಟದೊಡನೆ
ಅವನೂ ಬೆಳೆದಿದ್ದಾನೆ !!

ಶ್ರೀವಲ್ಲಿ ಮಂಜುನಾಥ
ಬೆಂಗಳೂರು

Related post

Leave a Reply

Your email address will not be published. Required fields are marked *