ಒಲವೆಂಬ ಹಣತೆಯ ಮೆರುಗು
ಬದುಕೆಂಬ ಮನೆಯಂಗಳದಿ
ಬೆಳಗಲಿ ಒಲವಿನ ಹಣತೆ!
ಆಡುವ ಪ್ರತಿಮಾತುನಂತರಾಳದಿ..
ಎಣಿಸದಿರಲು ಕುಂದುಕೊರತೆ!!
ದಿನದಿನವೂ ಶುಭ್ರ ದಿಗಂತದಿ
ಬೆಳಗುವಂತೆ ದಿನಪನ ಹಣತೆ!
ಮನಗಳಿರಲು ಸವಿಭಾವದಿ…
ಕಾಣುವುದು ಬಾಳಲಿ ಧನ್ಯತೆ!!
ಸಂಕಟಗಳ ಅಂಧಕಾರ ನೀಗಿಸಲು
ಬೆಳಗುತಿರಲಿ ಸಂತಸದ ಹಣತೆ!
ಇರಲು ಈ ಭಾವ ಪ್ರತಿಮನದಲು…
ಬದುಕಲಿರದು ಜಡತೆಯ ನಡತೆ!!
ಬದುಕಿನ ಸಾಗರದಿ ತೇಲಾಡುತಿರಲಿ
ನಗುವೆಂಬ ದೋಣಿಯ ಹಣತೆ!
ಕಾಡುವ ನೋವಿನಲೆಗಳಲದು ಓಲಾಡದೆ…
ನೆಮ್ಮದಿಯ ದಡ ಮುಟ್ಟಲು ಸಾರ್ಥಕತೆ!!
ಸುಮನಾ ರಮಾನಂದ