ಸಾಹಿತ್ಯ
ಭೂತಕಾಲದಿಂದ
ವರ್ತಮಾನದಲ್ಲಿನ
ಬತ್ತದ ಕಣಜವೀ ಸಾಹಿತ್ಯ!
ಪ್ರಚಲಿತ ವಿದ್ಯಮಾನವ
ರೋಚಕವಾಗಿಸುವ
ಕಥೆ, ಕಾದಂಬರಿ ಸಾಹಿತ್ಯ!
ಉತ್ತಮೋತ್ತಮರ
ಜೀವನ ಗಾಥೆಯ
ಅರುಹುವ ಚರಿತ್ರೆ ಸಾಹಿತ್ಯ!
ಜನಪದರ ಜೀವನ
ಶೈಲಿಯ ತಿಳಿಸುವ
ಜಾನಪದ ಸಾಹಿತ್ಯ!
ನಗಿಸುತ್ತಲೇ, ಲೋಕದ
ಡೊಂಕನ್ನು ತಿದ್ದುವ
ವಿಡಂಬನಾ ಸಾಹಿತ್ಯ!
ರವಿ ಕಾಣದ್ದನ್ನು ಕಂಡ ಕವಿ,
ತಾನಿತರರಿಗುಣಿಸುವ
ರಮ್ಯ ಕಾವ್ಯವೀ ಸಾಹಿತ್ಯ!
ತಾ ನೋಡಿದ ಜಾಗಗಳ
ಕಣ್ಣೆದುರಿಗೆ ಬಿಚ್ಚಿಡುವ
ಪ್ರವಾಸ ಸಾಹಿತ್ಯ!
ಚಿಣ್ಣರ ಲೋಕವನು
ಬಣ್ಣ ಬಣ್ಣಗೊಳಿಸುವ
ಮಕ್ಕಳ ಸಾಹಿತ್ಯ!
ಎಲ್ಲರ ಕುತೂಹಲವ
ತಣಿಸಲೆಂದೇ ರಚಿಸುವ
ವೈಜ್ಞಾನಿಕ ಸಾಹಿತ್ಯ!
ಆಯಾ ಭಾಷೆಯ
ಆಯಾ ಜನಾಂಗದ
ಅಭಿವ್ಯಕ್ತಿ ಈ ಸಾಹಿತ್ಯ!
ಶ್ರೀವಲ್ಲಿ ಮಂಜುನಾಥ