ಕಾಡುವ ದಿನಗಳು
ಹುಲ್ಲು ಛಾಪೆಯ ಮೇಲೆ ಮೈಚಾಚಿ
ಆಗಸವ ದಿಟ್ಟಿಸಿ ಚಂದ್ರನ ಕರೆಯುತ್ತಾ
ನಕ್ಷತ್ರಗಳ ಜೊತೆ ಮಾತಾಡಿ
ಅದೆಷ್ಟು ವರುಷಗಳಾಯಿತು
ಹಸಿದೊಡಲು ಕಾಡುವಾಗ ಹಾದು
ಹೋದ ವಿಮಾನದ ಹಾರಾಟ
ಅದೆಷ್ಟು ಹಿತವೆನಿಸಿತ್ತಾಗ..
ಕತ್ತಲಲಿ ಕಾದ ಆಗಂತುಕನ
ಆಗಮನಕ್ಕಾಗಿ ಕಾಯುವ ಘಳಿಗೆಗಳು
ಇನ್ನಿಲ್ಲವಾಗಿ ಅದೆಷ್ಟು ವರುಷಗಳಾಯಿತು.
ಮೈ ಕೈ ತಾಗಿಸುತ್ತಾ ಪರಚುತ್ತಾ
ಕಿಚಾಯಿಸಿ ರಾತ್ರಿಯೆಲ್ಲಾ ಹರಟುತ್ತಾ
ಅಣ್ಣ ತಮ್ಮಂದಿರು ಹಾವಳಿಮಾಡಿ
ಬೈಸಿಕೊಂಡು ಗಪ್ ಛುಪ್ ಆಗಿ
ಮುಸಿ ಮುಸಿ ನಕ್ಕು ನಲಿದಾಡಿ
ಅದೆಷ್ಟು ವರುಷಗಳಾಯಿತು
ಮನೆಯಂಗಳದ ಸೆಗಣಿಯ ಘಮಲು
ತುಳಸಿಕಟ್ಟೆಯ ದೀಪದ ಸೊಬಗು
ಪುಟ್ಟ ತಂಗಿಯ ಅಕ್ಕನ
ಅಂಗಳದ ರಂಗವಲ್ಲಿಯ ಕಂಡು
ಅದೆಷ್ಟು ವರುಷಗಳಾಯಿತು
ಹೊ.. ಬಡತನವೇ ಸೊಗಸು
ಅದೆಂತಹ ಸಂಭಂದಗಳು
ದಿನವೂ ಸಂಭ್ರಮದ ದಿನಗಳವು..
ಇಂದಿಗೂ ಕಾಯುತ್ತಿದ್ದೇನೆ
ಒಮ್ಮೆ ಬರಬಾರದೇ ಆ ದಿನಗಳು
ಪವನ ಕುಮಾರ ಕೆ. ವಿ.
ಬಳ್ಳಾರಿ 9663346949