ಚಂದಿರನ ಹೊಂಬೆಳಕು
ಬಂದಿಹನು ಚಂದಿರ ಚೆಂದದಿ
ಆ ಕತ್ತಲ ಇರುಳಿನಲಿ !
ತಂದಿಹನು ನಗುವನು ಸೊಗದಿ..
ತನ್ನ ದಿವ್ಯ ಬೆಳದಿಂಗಳಲಿ!!
ತನ್ನೊಳು ಕರಗದ ಕಲೆಯಿದ್ದರೂ
ನೀಡುವಾ ಬೆಳಕಿಗೆ ರಾಜಿಯಿಲ್ಲ!
ರಜನಿಯ ಆ ನೀರವತೆಯಲಿ..
ಇಳೆಗೆ ಸುಂದರ ಬೆಳಕಾಯಿತಲ್ಲ !!
ಕೌಸಲ್ಯ ರಾಮನಿಗೆ ತೋರಿದ
ಮುದ್ದು ಚಂದಿರನಿವನು!
ಗಣಪನ ಹೊಟ್ಟೆಯ ಕಂಡು ನಕ್ಕು
ಶಾಪಕೊಳಗಾದ ಶಶಾಂಕನಿವನು!!
ದಿನದ ತಾಪವನು ನೀಗಿ
ದಿನಕರ ತಂಪನು ತಂದಿಹನು!
ಕೊಡುವ ಮನಸ್ಸಿರದ ಸ್ವಾರ್ಥ
ಜನರ ನೋಡುತಾ ನಗುತಿಹನು!!

ಸುಮನಾ ರಮಾನಂದ