Post Views: 78 ಮೌನ ಕಲಹ ಮನೆಯೊಳಗೆಸದ್ದು ಗದ್ದಲಗಳಿಲ್ಲ,ಮನದಿ ಮುಗಿಯದಶಂಕೆ, ಕೋಲಾಹಲ. ಕದ ತಟ್ಟಿದರೆಮರುತ್ತರವಿಲ್ಲ,ಬೀಗ ಬಿಗಿದ ಮನೆಎಲ್ಲರ ಮನವೀಗ. ಕತ್ತಿಯಂಚಿನ,ಬಂದೂಕದ ಸದ್ದಿನಯುದ್ಧವೊಂದನ್ನೇಯುದ್ದವೆನ್ನಲಾಗದು. ದುಃಖ ಹೆಪ್ಪುಗಟ್ಟಿಸದ್ದಿಲ್ಲದೆಯೂನಡೆಯುತ್ತಲಿದೆಎಲ್ಲೆಡೆ ಮೌನಕಲಹ ! ಶ್ರೀವಲ್ಲಿ ಮಂಜುನಾಥ