ವಕ್ಷಸ್ಥಲ – ಪೌರಾಣಿಕ ಹಾಗೂ ಸಾಮಾಜಿಕ ಕಾದಂಬರಿ
ಪುಸ್ತಕದ ಹೆಸರು: ವಕ್ಷಸ್ಥಲ
ಪ್ರಕಾರ: ಕಾದಂಬರಿ
ಲೇಖಕರು: ಆಶಾ ರಘು
ಮುದ್ರಣ: 1
ಪ್ರಕಾಶನ: ಉಪಾಸನ ಬುಕ್ಸ್
ಪುಟಗಳು: 208
ಬೆಲೆ: 270/-
ಮೊಬೈಲ್: 9008122991
ಪೌರಾಣಿಕ ಹಾಗೂ ಸಾಮಾಜಿಕ ಎರಡು ವರ್ಗಕ್ಕೂ ಸಲ್ಲುವ ಕಾದಂಬರಿ ’ವಕ್ಷಸ್ಥಲ’. ಶ್ರೀನಿವಾಸ ಕಲ್ಯಾಣದೊಂದಿಗೆ, ವೆಂಕಟೇಶ್ವರ ಮಹಾತ್ಮೆಯನ್ನೂ, ಮೀರಾ, ರಾಧೆ, ಆಂಡಾಳು, ಬೀಬಿ ನಾಚಿಯಾರ್, ವೆಂಕಮಾಂಬ ಮೊದಲಾದ ವಿಷ್ಣು ಭಕ್ತೆಯರ ಕಥೆಗಳನ್ನೂ ಈ ಕಾದಂಬರಿ ಒಳಗೊಂಡಿದೆ. ಈ ಎಲ್ಲ ಭಕ್ತೆಯರೂ ಬಯಸಿದ್ದು ಶ್ರೀಹರಿಯ ವಕ್ಷಸ್ಥಲದಲ್ಲಿ ಸಣ್ಣ ಜಾಗವನ್ನು… ಪದತಲದಲ್ಲಿಯೇ ಇರುವೆನೆಂದು ಕೋರಿಕೊಂಡರೂ, ಒಂದೇ ಒಂದು ಕ್ಷಣವಾದರೂ ಶ್ರೀಹರಿಯ ಹೃದಯದಲ್ಲಿ ತಮ್ಮ ಕಡೆಗೆ ಒಂದು ಪರಿಗಣನೆ ಸಿಗುವುದೋ ಎಂದು ದೈನ್ಯ, ಕಾತರಗಳಿಂದ ಜೀವತವಿಡೀ ಕಾದವರು ಅವರು.

ಈ ಪೌರಾಣಿಕ ಕಥೆಗಳೊಂದಿಗೆ ಕಾದಂಬರಿಯಲ್ಲಿ ಜಾನಕಿ ಹಾಗೂ ರಾಘವ್ ಎಂಬ ದಂಪತಿಗಳ ಸಾಮಾಜಿಕ ಕಥೆಯನ್ನು ಹೆಣೆಯಲಾಗಿದೆ. ಪುರಾಣ ಕಥೆಯ ಎಲ್ಲ ಹೆಣ್ಣುಗಳೂ ತಮ್ಮ ವಲ್ಲಭನ ವಕ್ಷಸ್ಥಲದಲ್ಲಿಯೇ ನೆಲೆಸಲು ಬಯಸುವಂತೆ, ಜಾನಕಿಯೆಂಬ ಕಥಾನಾಯಕಿಯೂ ಕಾಣೆಯಾದ ತನ್ನ ವಲ್ಲಭ ರಾಘವನ ವಕ್ಷಸ್ಥಳವನ್ನೇ ಬಯಸುತ್ತಾಳೆ. ಅವನಿಗಾಗಿ ಹುಡುಕುತ್ತಾ, ತಿರುಪತಿಯ ವೆಂಕಟೇಶ್ವರನಲ್ಲಿ ಮೊರೆಯಿಡುತ್ತಾಳೆ.
ಪುಸ್ತಕ ಕೊಳ್ಳಲು ಆಸಕ್ತಿ ಉಳ್ಳವರು ಮೊಬೈಲ್ ಸಂಖ್ಯೆ 9008122991 ಕ್ಕೆ ಸಂಪರ್ಕಿಸಿ.
ಸಾಹಿತ್ಯಮೈತ್ರಿ ತಂಡ