ಪೂತನಿ ಮತ್ತಿತರ ನಾಟಕಗಳು
ಪುಸ್ತಕ: ಪೂತನಿ ಮತ್ತಿತರ ನಾಟಕಗಳು
ಪ್ರಕಾರ: ನಾಟಕಗಳ ಸಂಕಲನ
ಲೇಖಕರು: ಆಶಾ ರಘು
ಮುದ್ರಣ: 1
ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಶನ್ಸ್
ಪುಟಗಳು: 296
ಬೆಲೆ: 300/-
ಮೊಬೈಲ್: 9008122991
ಮೂಲತಃ ರಂಗಭೂಮಿಯ ಹಿನ್ನೆಲೆಯಿಂದ ಬಂದವರಾದ ಈ ಲೇಖಕಿ ಕಾಲಕಾಲಕ್ಕೆ ಕೆಲವಾರು ನಾಟಕಗಳನ್ನೂ ರಚಿಸಿದ್ದಾರೆ. ಈ ‘ಪೂತನಿ ಮತ್ತಿತರ ನಾಟಕಗಳು’ ಸಂಕಲನದಲ್ಲಿ ಒಂಬತ್ತು ನಾಟಕಗಳಿದ್ದು, ಅದರಲ್ಲಿ ‘ಪೂತನಿ’ ಏಕವ್ಯಕ್ತಿ ರಂಗಪ್ರಸ್ತುತಿಯು ಪ್ರಮುಖವಾದುದು. ಆದ್ದರಿಂದಲೇ ಸಂಕಲನ ಆ ಶೀರ್ಷಿಕೆಯನ್ನೇ ಹೊತ್ತಿದೆ.

ಲೇಖಕಿಯ ಕಲ್ಪನೆಯ ಪೂತನಿ ರಕ್ಕಸಿಯಲ್ಲ. ಸಾಧಾರಣ ಮುಗ್ಧ ಹೆಂಗಸೊಬ್ಬಳು, ತನ್ನ ಸುತ್ತಲಿನ ವಾತಾವರಣದಿಂದ ಧೂರ್ತಳಾಗಿ ಪರಿವರ್ತನೆಯಾಗುವ ಪರಿಯನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಚಿತ್ರಿಸಲಾಗಿದೆ. ‘ಪಟಾಚಾರ’ ನಾಟಕವು ಬೌದ್ಧ ಭಿಕ್ಷುಣಿಯೊಬ್ಬಳ ಕಥೆಯನ್ನು ಆಧರಿಸಿದ್ದು. ‘ಚೂಡಾಮಣಿ’ ನಾಟಕವು ರಾಮಾಯಣವನ್ನು ಆಧರಿಸಿದ ರಾಮಸೀತೆಯರ ಪ್ರೇಮಕಥೆಯಾಗಿದ್ದು, ಇದಾಗಲೇ ಪ್ರತ್ಯೇಕವಾದ ಕೃತಿಯಾಗಿ ಪ್ರಕಟಗೊಂಡಿತ್ತು. ಆದರಿಲ್ಲಿ ಒಂದಷ್ಟು ತಿದ್ದುಪಡಿಗಳೊಂದಿಗೆ ಸೇರಿಕೊಂಡಿದೆ. ಕ್ಷಮಾದಾನ, ಬಂಗಾರದ ಪಂಜರ, ಎಣ್ಣೆಗಾಯ್, ಕೃಷ್ಣ ಸುಧಾಮ, ಒನಕೆ ಪೂಜೆ, ಚಿನ್ನದ ಮಾವಿನಹಣ್ಣು ಮೊದಲಾದ ಇನ್ನಿತರ ನಾಟಕಗಳೂ ಸಂಕಲನದಲ್ಲಿದೆ. ಹೀಗೆ ಈ ಸಂಕಲನದಲ್ಲಿ ದೊಡ್ಡ ನಾಟಕಗಳೂ ಇವೆ, ಕಿರು ನಾಟಕಗಳೂ ಇವೆ, ಹಿರಿಯರದೂ ಇವೆ, ಮಕ್ಕಳದೂ ಇವೆ.
ಪುಸ್ತಕ ಕೊಳ್ಳಲು ಆಸಕ್ತಿ ಉಳ್ಳವರು ಮೊಬೈಲ್ ಸಂಖ್ಯೆ 9008122991 ಕ್ಕೆ ಸಂಪರ್ಕಿಸಿ.
ಸಾಹಿತ್ಯಮೈತ್ರಿ