ಭೈರಪ್ಪನವರೆಡೆಗೆ ಭಾವತಂತು – ವಿವಿಧ ಲೇಖಕರ ನುಡಿ ನಮನ

ಭೈರಪ್ಪನವರೆಡೆಗೆ ಭಾವತಂತು – ವಿವಿಧ ಲೇಖಕರ ನುಡಿ ನಮನ

ಪುಸ್ತಕದ ಹೆಸರು: ಭೈರಪ್ಪನವರೆಡೆಗೆ ಭಾವತಂತು
ಪ್ರಕಾರ: ಲೇಖನಗಳ ಸಂಗ್ರಹ
ಸಂಪಾದಕರು: ಆಶಾ ರಘು
ಮುದ್ರಣ: 1
ಪ್ರಕಾಶನ: ಉಪಾಸನ ಬುಕ್ಸ್
ಪುಟಗಳು: 120
ಬೆಲೆ: 210/-
ಮೊಬೈಲ್ : 9008122991

ನಮ್ಮನ್ನು ಅಗಲಿದ ಹೆಸರಾಂತ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರಿಗೆ ವಿವಿಧ ಲೇಖಕರು ಬರೆದಿರುವ ನುಡಿನಮನಗಳು ಈ ’ಭೈರಪ್ಪನವರೆಡೆಗೆ ಭಾವತಂತು’ ಕೃತಿಯಲ್ಲಿದೆ.

ಈ ಕೃತಿಯನ್ನು ಶ್ರೀಮತಿ ಆಶಾ ರಘು ಅವರು ಸಂಪಾದಿಸಿದ್ದಾರೆ. ಡಾ. ಬರಗೂರು ರಾಮಚಂದ್ರಪ್ಪ, ಡಾ.ಬಿ.ಆರ್.ಲಕ್ಷ್ಮಣರಾವ್, ಡಾ. ಬಿ. ಜನಾರ್ದನ ಭಟ್, ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ, ಶ್ರೀಮತಿ ಜಯಶ್ರೀ ದೇಶಪಾಂಡೆ, ಶ್ರೀ ಶಶಾಂಕ ಪರಾಶರ, ಪ್ರೊ. ಜಿ. ಎನ್. ಉಪಾಧ್ಯ, ಶ್ರೀಮತಿ ವಿದ್ಯಾ ರೆಡ್ಡಿ, ಶ್ರೀ ಉದಯಕುಮಾರ ಹಬ್ಬು, ಶ್ರೀಮತಿ ಗಾಯತ್ರಿ ರಾಜ್, ಶ್ರೀ ಸ. ಹರೀಶ್, ಶ್ರೀಮತಿ ಕಲಾ ಭಾಗ್ವತ್, ಶ್ರೀಮತಿ ಗಿರಿಜಾ ರಾಜ್, ಶ್ರೀಮತಿ ಮಾಲತಿ ಮುದಕವಿ, ಶ್ರೀಮತಿ ಶೈಲಜಾ ಕೇಕಣಾಜೆ ಹಾಗೂ ಆಶಾ ರಘು ಅವರ ಬರಹಗಳು ಈ ನುಡಿನಮನದ ಕೃತಿಯಲ್ಲಿದೆ.

’ತಂತು’ ಎಂದರೆ ದೇಹದ ಯಾವುದೇ ಭಾಗದಿಂದ ಮಿದುಳಿಗಾಗಲಿ, ಬೆನ್ನುಹುರಿಗಾಗಲಿ ಸಂವೇದನೆಯನ್ನು ಸಾಗಿಸಬಲ್ಲ ತಂತು ಅಥವಾ ತಂತುಗಳ ಕಂತೆ ಅಥವಾ ಅವುಗಳನ್ನು ರೂಪಿಸುವ ಪದಾರ್ಥ ಎಂಬ ಅರ್ಥವು ನಿಘಂಟಿನಲ್ಲಿದೆ. ಅಂತೆಯೇ ಕಾಣದ ಲೋಕಕ್ಕೆ ಪಯಣಿಸಿದ ಭೈರಪ್ಪನವರೆಡೆಗೆ ಈ ಸಂಗ್ರಹದಲ್ಲಿನ ಎಲ್ಲಾ ಲೇಖಕರ ನುಡಿನಮನದ ಕಡೆಯ ಭಾವತಂತು ತಲುಪೀತೆಂಬ ಭಾವನೆ ಸಂಪಾದಕರದು.

ಈ ಪುಸ್ತಕ ಕೊಳ್ಳಲು ಇಚ್ಛಿಸುವವರು upasanabooks.com ಅಥವಾ ವಾಟ್ಸಪ್ಪ್ ಮೊಬೈಲ್ ಸಂಖ್ಯೆ 9008122991 ಗೆ ಸಂಪರ್ಕಿಸಬಹುದು.

ಸಾಹಿತ್ಯಮೈತ್ರಿ

Related post