ಸುಡೋಕು – ಕಥಾ ಸಂಕಲನ

ಸುಡೋಕು – ಕಥಾ ಸಂಕಲನ

ಪುಸ್ತಕದ ಹೆಸರು: ಸುಡೋಕು
ಪ್ರಕಾರ: ಕಥಾ ಸಂಕಲನ
ಲೇಖಕರು: ಡಾ. ಪ್ರದೀಪ್ ಬೇಲೂರ್
ಮುದ್ರಣ: 1
ಪ್ರಕಾಶನ: ಉಪಾಸನ ಬುಕ್ಸ್
ಪುಟಗಳು: 80
ಬೆಲೆ: 130/-
ಮೊಬೈಲ್: 9008122991

ಬದುಕಿನ ಬೇರೆ ಬೇರೆ ರಂಗಗಳಲ್ಲಿ, ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಕೂಡ ತುಸು ಪರಿಶ್ರಮ ಪಟ್ಟರೆ ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಮುದವಾಗಿ ಕನ್ನಡವನ್ನು ಬಳಸಿ ಕಥೆ ಕಟ್ಟಲು ಸಾಧ್ಯ ಎಂಬುದು ಅತ್ಯಂತ ಸಂತಸದ ಸಂಗತಿ. ಪ್ರದೀಪ್ ಬೇಲೂರು ಅವರು ತಮ್ಮ ಸ್ವಪ್ರಯತ್ನದಿಂದ ಕಥೆ ಬರೆಯುವುದನ್ನು ರೂಢಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆದರೂ ಬರವಣಿಗೆ ಅವರ ಹವ್ಯಾಸ. “ಸುಡೋಕು” ಪ್ರದೀಪ್ ಅವರ ಹೊಸಾ ಕಥಾ ಸಂಕಲನ. ಇದರಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ವೈವಿಧ್ಯಮಯ ಕಥಾವಸ್ತು ಮತ್ತು ಪ್ರಸ್ತುತಿ ತಂತ್ರವನ್ನು ಇವರು ಈ ಕಥಾ ಸಂಕಲನದಲ್ಲಿ ಬಳಸಿದ್ದಾರೆ.

ಸಂಕಲದ ಪ್ರಮುಖ ಕಥೆ “ಸುಡೋಕು” ಶೀರ್ಷಿಕೆಯಿಂದ ಗಮನ ಸೆಳೆಯುತ್ತದೆ. ಇದೊಂದು ಪತ್ತೆದಾರಿ ಕತೆ ಎನ್ನಬಹುದು. ಒಂದು ಕೊಲೆಯ ಜಾಡು ಹಿಡಿದು ಹೋದಾಗ ಕೊಲೆಗಾರ ಸಿಕ್ಕಿದರೂ ಪೋಲಿಸಿಗೆ ಸಮಾಧಾನ ಸಿಗದು. ಕೊನೆಯಲ್ಲಿ ಯಾರು ಯಾಕೆ ಕೊಲೆಯನ್ನು ಮಾಡಿರುತ್ತಾರೆ ಎಂದು ಕೊಟ್ಟಿರುವ ತಿರುವು ಓದುಗರನ್ನು ರಂಜಿಸುತ್ತದೆ.

ಈ ಪುಸ್ತಕ ಕೊಳ್ಳಲು ಇಚ್ಛಿಸುವವರು upasanabooks.com ಅಥವಾ ವಾಟ್ಸಪ್ಪ್ ಮೊಬೈಲ್ ಸಂಖ್ಯೆ 9008122991 ಗೆ ಸಂಪರ್ಕಿಸಬಹುದು.

ಸಾಹಿತ್ಯಮೈತ್ರಿ

Related post