ಮೇಣದ ಬತ್ತಿ ಹಚ್ಚಿದ್ದಾನೆ ದೇವರು
ಉರಿಯುತ್ತಿದೆ ಮೆಲ್ಲಗೆ
ಹೋರಾಡುತ್ತಾ ಗಾಳಿಯೊಂದಿಗೆ
ಆರಿಹೋಗುವುದಿಲ್ಲ ಬೇಗನೆ
ತನ್ನ ಶಕ್ತಿಯ ಮೇಲೆ ನಂಬಿಕೆ
ಬೀಸುವ ಗಾಳಿ ಎಷ್ಟೇ ರಭಸವಾಗಿರಲಿ
ಅಂಜುವುದಿಲ್ಲ ಬದುಕುವ ಛಲವದಕೆ
ಸಂಘರ್ಷ ಸಹಜ.
ಅಪೇಕ್ಷಿತವಿಲ್ಲ ಇಲ್ಲಿ ಏನೂ
ಬಂದಿದ್ದು ಸ್ವೀಕರಿಸುವ ಇರಾದೆ.
ಒಲಿದಂತೆ ನಡೆಯುವ ಖಯಾಲಿ..
ಪ್ರಕೃತಿಯೂ ಸಹಕಾರಿ..
ನಂಬಿಕೆಯೇ ಜೀವ.
ಮೇಣದ ಬತ್ತಿ ಉರಿದರೂ
ಅದರ ಅಸ್ತಿತ್ವವೇ ಸಾಕ್ಷಿ