ಸೂರ್ಯದೇವನಿಗಿಂತ ಇನ್ನು ದೇವರು ಇಲ್ಲ
ಸೂರ್ಯನೇ ಈ ಜಗದ ಆಧಾರ ಭೂತ |
ಸೂರ್ಯನಿಂದಲೆ ಸಕಲ ಜೀವಿಗಳ ಉತ್ಪತ್ತಿ
ಸೂರ್ಯನಿಗೆ ಶರಣೆನ್ನು – || ಪ್ರತ್ಯಗಾತ್ಮ ||
ಸೃಷ್ಟಿ ಮೇಣ್ ಸ್ಥಿತಿ, ಲಯಕೆ ಸೂರ್ಯ ಕಾರಣ
ಸೃಷ್ಟಿಕರ್ತನು ಇವನೆ; ಸಸ್ಯಗಳ ಪ್ರಾಣ |
ದೃಷ್ಟಿಗೋಚರವಪ್ಪ ಭಗವಂತನಿವನೆ ದಿಟ
ಇಷ್ಟಾರ್ಥದಾಯಕನು- || ಪ್ರತ್ಯಗಾತ್ಮ ||
ನವಗ್ರಹಗಳೆಲ್ಲವು ಇನವ ಅಂಕೆಗೊಳಪಟ್ಟಿಹವು
ಮಹನೀಯನಿವನೊಬ್ಬ ವಿಶ್ವಕ್ಕೆ ಒಡೆಯ |
ಇಹಪರದ ಸೌಖ್ಯಕ್ಕೆ ಇವನ ಬಿಟ್ಟರೆ ಇಲ್ಲ
ವಿಹಿತದಲಿ ಶರಣಾಗು- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ ‘ನೇನಂಶಿ’
ವಾಚನ – ಗೌರಿ ದತ್ತ ಏನ್ ಜಿ
1 Comment
The world’s expressed regarding god is exemplary ..great lines
Rendered by Gouri Datta .. amazing