ಅನುಭವದ
ಜೊತೆ ಅಧ್ಯಯನವೂ
ಬೇಕು ಕವಿಗೆ
ಮನದೊಳಗೆ
ಅಡಗಿ ಕೂತಿದ್ದಾವೆ
ನೂರೆಂಟು ಮಾತು
ಹುಡುಕುತ್ತೇನೆ,
ನಾಳೆಗೆ ಬರೆಯಲು
ಹೊಸ ಕವನ
ಮನಕೊಪ್ಪುವ
ಸೀರೆ ಹುಡುಕೋದಕ್ಕೆ
ದಿನ ಸಾಲದು
ಕಾಲನೊಂದಿಗೆ
ನೋವು ಮರೆಯಾಗಲಿ,
ಪುಟ್ಟ ಬೇಡಿಕೆ
ಕನ್ನಡಿ ಮುಂದೆ
ತಿದ್ದಿ ತೀಡಿ ಬಾಚಿದ್ದು
ಹಿಡಿಸಲಿಲ್ಲ (ಮನಮೋಹಕ)
ಕತ್ತಲಿನಲ್ಲೇ
ಅರಳಿ ನಿಲ್ಲುತ್ತಿವೆ
ಬ್ರಹ್ಮ ಕಮಲ
ಕತ್ತಲು ಅಲ್ಲ
ಅನಿಷ್ಟ, ದುಃಖ. ಉದಾ..
ಬ್ರಹ್ಮ ಕಮಲ
ಅರಳಿ ನಿಂತು
ಕಂಗೊಳಿಸುತ್ತಲಿದೆ,
ಒಲವ ಹೂವು
ತಡವದರೆ
ಬಡಬಡಿಸುತ್ತಾಳೆ
ಹುಬ್ಬು ಗಂಟಿಕ್ಕಿ
ಎಲ್ಲಕ್ಕಿಂತಲೂ
ಸಂಸಾರ ಸಾಗರವೇ
ವಿಸ್ಮಯಕಾರಿ
ಬಡತನವು
ಕಸಿದು ತಿನ್ನುತ್ತಿದೆ
ಉದರವನ್ನೇ
ದಿನಕ್ಕೊಂದ್ರಂತೆ
ಹೈಕು ಬರೆಯದಿದ್ರೆ
ನಿದ್ದೇ ಬರಲ್ಲ
ಕಣ್ಣಂಚಿನಲಿ
ತುಂಬಿ ಬಂದಿರುವುದು
ಒಲವಧಾರೆ
ದ್ರಾಕ್ಷಿಯ ಹುಳಿ
ರಸಗಳಲ್ಲಿ, ತೇಲಿ
ಬಂದಿವ ನಾನು
ಬರಬಹುದು
ನೆಂಟರು, ಕಾಗೆ ಕಾ ಕಾ
ಕಿರುಚುತಿದೆ
ಕಾದು ಕುಳಿತ
ಆಕೆಗೆ, ಬಿಗಿದಿತ್ತು
ಸಾವಿನ ಗಂಟೆ
ವರ್ತಮಾನಕೆ
ಭೂತ ಭವಿಷ್ಯಗಳೇ
ತೊಡರುಗಳು
ಶ್ರೀಧರ ಕಾಡ್ಲೂರು