ಪ್ರಕಸಂ ರಿಫ್ರೆಶ್ ಟಿ20 ರಂಗ ಸ್ಪರ್ಧೆ
ದಿನಾಂಕ: ಮಾರ್ಚ್ 12 ಮತ್ತು 13, 2022,
ಸ್ಥಳ: ಸುಚಿತ್ರಾ, ಪೂರ್ವಾಂಕರ ಸಭಾಂಗಣ, ಬೆಂಗಳೂರು
‘ಪ್ರಕಸಂ’ ತಂಡ ಕ್ಕೆ 20 ವರ್ಷ ತುಂಬಿದೆ. ಕಳೆದ 21 ವರ್ಷಗಳಿಂದ ತಂಡವು ಹಲವಾರು ನಾಟಕಗಳನ್ನು ಪ್ರದರ್ಶಿಸಿವೆ. ಕಲಾಸೌಧದ ಕಾಲದಲ್ಲಿ ಈ ತಂಡದ ಕಾರ್ಯಕ್ರಮಗಳನ್ನು ರಂಗಾಸಕ್ತರು ಮರೆತಿಲ್ಲ.
ಪ್ರಕಸಂಗೆ ಇಪ್ಪತ್ತು ತುಂಬಿದ ಸಂಧರ್ಭದಲ್ಲಿ ಕೋವಿಡ್ ಕಾಲದಲ್ಲಿ ಕಾಣೆಯಾಗಿದ್ದ ನಾಟಕ ಚಟುವಟಿಕೆಗಳನ್ನು ಹುರುದುಂಬಿಸಲು ರಿಫ್ರೆಶ್ ಟಿ20 ಅನ್ನೋ ಸ್ಪರ್ಧೆಯನ್ನು ಏರ್ಪಡಿಸಿದೆ.
ಈ ಸ್ಫರ್ಧೆಯಲ್ಲಿ ಇಪ್ಪತ್ತು ತಂಡಗಳು ಇಪ್ಪತ್ತು ನಿಮಿಷದ ಇಪ್ಪತ್ತು ನಾಟಕಗಳನ್ನು ಎರಡು ದಿವಸಗಳಲ್ಲಿ ಪ್ರದರ್ಶನ ನೀಡುತ್ತಿವೆ. ಪ್ರಕಾಸಂ ಇದನ್ನು ಆಯೋಜಿಸಿದೆ.
ನಾಟಕ ಸ್ಫರ್ಧೆಯ ಒಟ್ಟು ಬಹುಮಾನದ ಮೊತ್ತ 35000, ಮೊದಲ ಬಹುಮಾನ 20000, ಎರಡನೇ ಬಹುಮಾನ 10000 ಮತ್ತು ಮೂರನೇ ಬಹುಮಾನ 5000 ರೂಪಾಯಿಗಳು. ಸ್ಪರ್ಧೆಯ ತೀರ್ಪುಗಾರರರಲ್ಲದೇ ಪ್ರೇಕ್ಷಕರೂ ಕೂಡ ತಮ್ಮ ವೋಟ್ ಹಾಕುವ ಅವಕಾಶವಿದೆ.
ಪ್ರೇಕ್ಷಕರು ತಮ್ಮ ಟಿಕೇಟಿನ ಜೊತೆ ಸಿಗುವ ಮತಪತ್ರದೊಂದಿಗೆ ತಮ್ಮ ಮತ ಚಲಾಯಿಸಬಹುದಾಗಿದೆ.
ಈ ಸ್ಫರ್ಧೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ನಾಟಕಗಳಿವೆ.
ಕೆಳಕಂಡ ವೇಳಾಪಟ್ಟಿಯಂತೆ ಸ್ಪರ್ಧೆ ಜರುಗಲಿದೆ, ಮತ್ತು ಮಿಕ್ಕ ವಿವರಗಳಿಗಾಗಿ ಈ ವಿಳಾಸಕ್ಕೆ ಭೇಟಿ ನೀಡಿ – www.prakasamtrust.org/rt20
ಮೊದಲನೇ ದಿನ – ಶನಿವಾರ (ಮಾರ್ಚ್ 12, 2022)
1 – ಬೆಳಗ್ಗೆ 10-00 – ಮುಖಾ-ಮುಖಿ – ಯೂನಿವರ್ಸ್
2 – ಮಧ್ಯಾಹ್ನ 11-20 – ಗಾಜು ಮತ್ತು ಮಸಿ – ಅಂತರಂಗ ಬಹಿರಂಗ
3 – ಮಧ್ಯಾಹ್ನ 12-40 – ವೃದ್ದಾಶ್ರಯ – ಭಾವರಂಗ
5 – ಮಧ್ಯಾಹ್ನ 2-00 – ಕೃತ – ಬೆಂಗಳೂರ್ ಪ್ಲೇಯರ್ಸ್
6 – ಮಧ್ಯಾಹ್ನ 3-20 – ಒಂದು ವಿಲಯ ಕಥೆ – ಯೂ ಅಂಡ್ ಮೀ
7 – ಮಧ್ಯಾಹ್ನ 4-40 – ಆ್ಯಬ್ಸಿಂಥ್ – ರಂಗರಥ
8 – ಸಂಜೆ 5-20 – ಎ ಬ್ಯಾಡ್ ಡ್ರೀಮ್ – ಫೈಲಿಂಗ್ ತಮರ
9 – ಸಂಜೆ 18-00 – ನಗರ ಪೂಜೆ – ರಂಗಾಚಿರಂತನ
ಎರಡನೆಯ ದಿನ ಭಾನುವಾರ – (ಮಾರ್ಚ್ 13, 2022)
10 – ಬೆಳಗ್ಗೆ 10-00 – ನೆಕ್ಷ್ಟ್ ಮಾರ್ನಿಂಗ್ – ಬ್ಲಾಕ್ ಕೋಟ್
11 – ಬೆಳಗ್ಗೆ 10-40 – ಸಂಕಲ್ಪ – ನೆನಪು
12 – ಬೆಳಗ್ಗೆ 11-20 – ಸಿಕ್ದೋರ್ಗಾ ಸೀರುಂಡೆ? – ವ್ಯೋಮ
13 – ಮಧ್ಯಾಹ್ನ 12-00 – ಸಿದ್ಧತೆ – ರಂಗಸ್ಮಿತ
14 – ಮಧ್ಯಾಹ್ನ 12-40 – ಬೃಹನ್ಮಠ – ಶುದ್ಧಿರಂಗ
15 – ಮಧ್ಯಾಹ್ನ 2-00 – ಆತಂಕ – ಕಲಾಕದಂಬ
16 – ಮಧ್ಯಾಹ್ನ 2- 40 – ಒಂದರೊಳಗಿನ್ನೆರಡು – ಪ್ರವರ ಥಿಯೇಟರ್
17 – ಮಧ್ಯಾಹ್ನ 3- 20 – ಬೂದು – ಬೆಂಗಳೂರು ಥಿಯೇಟರ್ ಎನ್ಸೆಬಲ್
18 – ಸಂಜೆ 4.00 – ಅದ್ ಇದ್ರೆ ಸಾಕು ..! – ಏನ್ಮಾಡೋದು
19 – ಸಂಜೆ 4-40 – ಗುಂಪ್ಸ್ & ಹಂಪ್ಸ್ – ಅಂತರಂಗ
20 – ಸಂಜೆ 5-20 – ಮಿಸ್ಸಿಂಗ್ ಡಾಲ್ – ತಂಡ ಕೋಡೆಕ್ಸ್
ಈ ನಾಟಕ ಸ್ಫರ್ಧೆಯ ಎಲ್ಲಾ ಖರ್ಚು ಮತ್ತು ಬಹುಮಾನದ ಹಣವನ್ನು ಅರೋಗ್ಯ ಸೇವಾ ಸಂಸ್ಥೆಯು ವಹಿಸಿಕೊಂಡಿದೆ. ಈ ಸಂಸ್ಥೆ ಅಂತರರಾಷ್ಟ್ರೀಯ ವಲಯದಲ್ಲಿ ಹೆಸರು ಮಾಡಿದೆ.
ನ್ಯೂಸ್ 1st ಸಂಸ್ಥೆಯು ನಮ್ಮ ಎಲ್ಲಾ ನಾಟಕಗಳ ರೆಕಾರ್ಡಿಂಗ್ ಮಾಡಿ ಕೊಡುವುದಲ್ಲದೇ ಕಾರ್ಯಕ್ರಮದ ಕವರೇಜ್ ಮಾಡುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಬಳಸಿ http://www.prakasamtrust.org/rt20
ಸಾಹಿತ್ಯಮೈತ್ರಿ ತಂಡ