ಧರ್ಮದ ಕೊಡಲಿ
ದುಡಿಯುವ ಕೈಗಳ ಕತ್ತರಿಸಿದರು
ಹರಿಸಿದರು ನೆತ್ತರು
ಕಣ್ಣೀರು ಕಡಲಾಗಿಸಿದರು ಹೃದಯಕ್ಕೆ.
ಶವವಾಯಿತು, ತಾಯಿ ಜೀವ. ಜೀವ ಇದ್ದೂ….
ಧರ್ಮಾಂದತೆಯ ಕೈಗಳಿಗೆ ಕೊಡಲಿ ಕೊಟ್ಟವರಾರು?
ಯಾರೋ ಅದ್ಯಾರದೋ ಜೀವ ಹೊತ್ತೊಯ್ಯುತಿದ್ದಾರೆ
ತಡೆಯುವವರಾರಿಲ್ಲ. ಬದುಕು ಭಯದ ಕೂಪ.
ಕುರಾನು ಶಾಂತಿ ಬೋದಿಸುತ್ತಿದೆ.
ಬೈಬಲ್ಲೂ ಶಾಂತಿ ಸಾರುತ್ತಿದೆ.
ಗೀತೆಯೂ ಶಾಂತಿ ಹಾಡುತ್ತಿದೆ.
ಮೌಡ್ಯ ತೊಲಗುತ್ತಿಲ್ಲ ಆದರೂ…
ಜಳಪಿಸಿದ ತಲವಾರು
ತೊಳೆಯಬೇಕಿದೆ ಶಾಂತಿ ಮಂತ್ರದಿಂದ
ಹೊಗೆಯಾಡುತ್ತಿರುವ ಬಂದೂಕಿನ,
ನಳಿಕೆ ಮುಚ್ಚಬೇಕಿದೆ ಮಾನವತ್ವದಿಂದ
ಭ್ರಾತೃತ್ವದ ಧರ್ಮದಿಂದ
ಇದ್ದು ಎದ್ದು ಒಮ್ಮೆ ಬಿದ್ದುಹೋಗುವಾಗ ತಿಳಿಸಬೇಕಿದೆ
ಭಾರತಾಂಬೆಗೆ ನಾವೆಲ್ಲ ಒಂದೇ ಎಂಬ ಹೆಮ್ಮೆಯಿಂದ
ಪವನ್ ಕುಮಾರ್ ಕೆ.ವಿ.
1 Comment
Super pavan sir