ಮೂರು ಕೃತಿಗಳ ಲೋಕಾರ್ಪಣೆ – ಸಾಹಿತ್ಯಲೋಕ ಪಬ್ಲಿಕೇಷನ್ಸ್

ಕಥಾಭರಣ – SOMEದರ್ಶನ – ಅಡ್ಡಿತುಷ ಬಕ್ಕಜಬಿನ್ನಿ
ಕೃತಿಗಳ ಬಿಡುಗಡೆ ದಿನಾಂಕ: 16-10-2022
ಸ್ಥಳ: ಅಕ್ಕಮಹಾದೇವಿ ಸಭಾಂಗಣ
ಕನ್ನಡ ಸಾಹಿತ್ಯ ಪರಿಷತ್ತು,ಚಾಮರಾಜಪೇಟೆ,
ಬೆಂಗಳೂರು- 560018

ಕನ್ನಡ ಸಾಹಿತ್ಯಲೋಕಕ್ಕೆ ಸದಾ ಸದಭಿರುಚಿಯ ಪುಸ್ತಕಗಳನ್ನು ಪರಿಚಯಿಸುತ್ತಿರುವ ಸಾಹಿತ್ಯಲೋಕ ಪಬ್ಲಿಕೇಷನ್ಸ್ ಈ ಭಾರಿ ಮೂರೂ ವಿಭಿನ್ನ ಕೃತಿಗಳನ್ನು ಲೋಕಾರ್ಪಣೆ ಮಾಡುತ್ತಿದೆ.

ಕಥಾಭರಣವಿವಿಧ ಲೇಖಕರ ಕಥಾಸಂಕಲನ

ಡಾ. ಅಜಿತ್ ಹರೀಶಿ ಹಾಗು ವಿಠ್ಠಲ್ ಶೆಣೈ ರವರು ಕನ್ನಡ ಸಾಹಿತ್ಯಲೋಕದ ಇಪ್ಪತೆಂಟು ವಿಭಿನ್ನ ಲೇಖಕರ ಕಥೆಗಳನ್ನು ಸಂಪಾದಿಸಿದ್ದಾರೆ. ಈ ಪುಸ್ತಕದಲ್ಲಿರುವ ಕಥೆಗಳು ಹೆಸರೇ ಹೇಳುವಂತೆ ವಿಭಿನ್ನ ಭಾವಗಳ ಹೂರಣ. ನಾಗೇಶ್ ಕುಮಾರ್ ಸಿ ಎಸ್, ಪೂರ್ಣಿಮಾ ಮಾಳಗಿಮನಿ, ಅಂಜನಾ ಹೆಗಡೆ, ಆಶಾ ಜಗದೀಶ್, ಪ್ರೊ ರಾಜು ಹೆಗಡೆ, ಪ್ರದೀಪ್ ಬೇಲೂರು ಮುಂತಾದ ಇಪ್ಪತೆಂಟು ಲೇಖಕರ ವಿಭಿನ್ನ ಭಾವಗಳ ಕಥೆಗಳನ್ನು ಕಥಾಭರಣ ಸಂಕಲನವು ಒಳಗೊಂಡಿದೆ.

SOMEದರ್ಶನವ್ಯಕ್ತಿ ಚಿತ್ರಗಳು

ವಸಂತ್ ಕಲ್ ಬಾಗಲ್ ರವರು ವ್ಯಕ್ತಿಚಿತ್ರಗಳ ಕುರಿತು ರಚಿಸಲಾಗಿರುವ SOMEದರ್ಶನ ಕೃತಿಯು ಡಾ. ರಾಜಕುಮಾರ್, ಮಾಸ್ತಿ ವೆಂಕಟೇಶ್ ಐಯಂಗಾರ್, ಕವಿ ನಿಸ್ಸಾರ್ ಅಹ್ಮದ್, ಕಮಲಹಾಸನ್, ಜಾವಗಲ್ ಶ್ರೀನಾಥ್, ಸಿ.ಆರ್. ಸಿಂಹ ಮುಂತಾದ ಪ್ರಸಿದ್ಧ ವ್ಯಕ್ತಿಗಳ ಕುರಿತ ಲೇಖನಗಳನ್ನು ಒಳಗೊಂಡಿದೆ.

ಅಡ್ಡಿತುಷ ಬಕ್ಕಜಬಿನ್ನಿಲಲಿತ ಪ್ರಭಂದಗಳು

ವಸಂತ್ ಕಲ್ ಬಾಗಲ್ ರವರ ಈ ಸಂಕಲನದಲ್ಲಿ ಸಾಕಷ್ಟು ದುಷ್ಟಾಂತಗಳಿವೆ. ದೇಶ ವಿದೇಶಗಳನ್ನು ಸುತ್ತಿ ತನ್ನ ಅಪೂರ್ವ ಅನುಭವಗಳನ್ನು ಪ್ರಭಂದ ರೂಪದಲ್ಲಿ ಅಡ್ಡಿತುಷ ಬಕ್ಕಜಬಿನ್ನಿ ಪುಸ್ತಕದಲ್ಲಿ ಓದಬಹುದಾಗಿದೆ.

ಈ ಮೂರೂ ಕೃತಿಗಳು ಬೆಂಗಳೂರಿನ ಚಾಮರಾಜಪೇಟೆಯ “ಅಕ್ಕಮಹಾದೇವಿ ಸಭಾಂಗಣದಲ್ಲಿ ಶ್ರೀಯುತ ಕ್ಯಾಪ್ಟನ್ ಗೋಪಿನಾಥ್ ರವರು ಬಿಡುಗಡೆ ಮಾಡಲಿದ್ದಾರೆ. ಶ್ರೀಯುತ ಅಲಕಾ ತೀರ್ಥಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಯಿಯಸಲಿದ್ದಾರೆ.

ಶ್ರೀಮತಿ ಪೂರ್ಣಿಮಾ ಮಾಳಗಿಮನಿ, ಶ್ರೀ ಅಗ್ರಹಾರ ಕೃಷ್ಣಮೂರ್ತಿ, ಶ್ರೀ ಮಹಾಬಲಮೂರ್ತಿ ಕೊಡ್ಲೆಕೆರೆ ರವರು ಈ ಮೂರೂ ಪುಸ್ತಕಗಳ ಪರಿಚಯ ಮಾಡಿಕೊಡಲಿದ್ದಾರೆ. ಶ್ರೀಮತಿ ಆಶಾ ಜಗದೀಶ್ ನಿರೂಪಣೆಯಲ್ಲಿ ಶ್ರೀ ಅನಂತ್ ಕುಣಿಗಲ್ ರವರು ಕಾರ್ಯಕ್ರಮ ನೆಡೆಸಿಕೊಡಲಿದ್ದಾರೆ.

ಸಾಹಿತ್ಯಾಸಕ್ತರು ಪುಸ್ತಕಗಳ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸಬೇಕೆಂದು ಸಾಹಿತ್ಯಲೋಕ ಪಬ್ಲಿಕೇಷನ್ಸ್ ಹಾಗು ಸಾಹಿತ್ಯಮೈತ್ರಿ ತಂಡ ಕೋರುತ್ತದೆ.

ತಮ್ಮೆಲ್ಲರ ಆಗಮನದ ನೀರಿಕ್ಷೆಯಲ್ಲಿ
ಸಾಹಿತ್ಯಲೋಕ ಪಬ್ಲಿಕೇಷನ್ಸ್
ಹಾಗು
ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *