ಅವನ ಕಾಲಿಗೆ ಕಚ್ಚಿದವರು!
‘ನಾಯಿಗಳಿವೆ ಎಚ್ಚರ’ ಎಂದು ಬೋರ್ಡ್ ಇದ್ದರೆ ಅತ್ತ ಕಡೆ ತಲೆ ಹಾಕುತ್ತಿರಲಿಲ್ಲ.
ನಾಯಿಯನ್ನಲ್ಲ ನಾಯಿಯ ಪೋಸ್ಟರ್ ಕಂಡರೂ ಹೆದರಿ ಕಾಲು ಕೀಳುತ್ತಿದ್ದ. ಕಚ್ಚಿಸಿಕೊಂಡರೆ ಏನು ಗತಿ ಎಂಬ ಭಯ.
ರಾತ್ರಿ 8ರ ನಂತರ ಹೊರಗೆ ತಲೆ ಹಾಕುತ್ತಿರಲಿಲ್ಲ. ನಾಯಿಗಳು ಊಳಿಟ್ಟರೂ ಚಿಂತೆಯಿಲ್ಲ,
ಬೊಗಳಿದರೂ ತೊಂದರೆ ಇಲ್ಲ. ಯಾಕೆಂದರೆ ಬೊಗೊಳೋ ನಾಯಿ ಕಚ್ಚೋದಿಲ್ಲವಂತೆ ಅನ್ನೋ ನಂಬಿಕೆ.
ಹೀಗಿದ್ದವನಿಗೆ ಕಡೆಗೂ ಕಾಲಿಗೆ ಕಚ್ಚಿತು.
ನಾಯಿ ಅಲ್ಲ. ತಾನೇ ಕೊಂಡು ತಂದ ಚರ್ಮದ ಚಪ್ಪಲಿ!
– ಸಂಕೇತದತ್ತ!