Post Views: 239 ಮಣ್ಣು – ಮುತ್ತು ಒಂದೊಂದೇ ಮುತ್ತುಗಳು ಕಳೆದು ಹೋಗುತಿಹುವು ಅರಿಯೆ ಕಾಪಿಡಲು ನಾನೋ ಬರಿಯ ಮಣ್ಣು ನೆನಪುಗಳು ಮಾತ್ರ ಹಸಿ ಸಂಬಂಧಗಳು ಬರಿ ಹುಸಿ ಮರು ಹುಟ್ಟುವವೇ ಸುಂದರ ಕ್ಷಣಗಳು? ಉರುಳುವವೇ ಅಹಮಿನ ಗೋಡೆಗಳು? ಅರಿಯೆ ಮರುಸೃಷ್ಟಿಯ ಅರಿಯೆ ಗೋಡೆ ಕೆಡವಲು ನಾನೋ ಬರಿಯ ಮಣ್ಣು – ನಿಖಿತಾ ಅಡವೀಶಯ್ಯ