ಗಿಳಿ ಗೊರವಂಕಗಳಂತೆ ಬಾಳಿದರು ಎಂದು ನಾವು ಸಾಮಾನ್ಯವಾಗಿ ಹಿಂದಿನ ಸಾಹಿತ್ಯದಲ್ಲಿ ನೋಡುತ್ತೇವೆ. ಇದು ಗಿಳಿಗಳು ಹಾಗೂ ಗೊರವಂಕಗಳು ಒಟ್ಟಿಗೆ ಜೀವಿಸುವುದನ್ನು ನೋಡಿ ಬೆಳೆದುಬಂದಿರುವ ನುಡಿಗಟ್ಟು. ಈ ಎರಡೂ ಪ್ರಭೇದದ ಹಕ್ಕಿಗಳು ಸಾಮಾನ್ಯವಾಗಿ ಒಟ್ಟೊಟ್ಟಾಗಿರುವುದರಿಂದಲೂ ಹಾಗೂ ಒಂದೇ ಸಂಗಾತಿಗೆ ಅಂಟಿಕೊಂಡಿರುವುದರಿಂದಲೂ ಈ ಮಾತು ಬಂದಿರಬೇಕು. ಇಂದಿನ ಅಂಕಣದಲ್ಲಿ ಕೇವಲ ಗೊರವಂಕಗಳನ್ನು ಮಾತ್ರ ಪರಿಗಣಿಸಲಾಗಿದೆ. ಗೊರವಂಕಗಳನ್ನು ಮೈನಾಗಳೆಂದೂ ಕರೆಯುತ್ತಾರೆ ಮತ್ತು ಈ ಹೆಸರೇ ನಗರ ಪ್ರದೇಶಗಳಲ್ಲಿ ಹಾಗೂ ನಗರ ಪ್ರದೇಶಗಳಿಂದ ಬಂದ ಜನರಲ್ಲಿ ಹೆಚ್ಚು ಪ್ರಚಲಿತವಾಗಿದೆ. ಇವುಗಳಲ್ಲಿಯೂ ಅನೇಕ ಪ್ರಭೇದಗಳಿವೆ. […]Read More
ಸುಧೀರ್ ಪ್ರಭು ಆಸ್ಟ್ರೇಲಿಯಾ ಖಂಡದ ಪಶ್ಚಿಮ ಆಸ್ಟ್ರೇಲಿಯಾ ರಾಜ್ಯದ (Western Australia), ದಕ್ಷಿಣ ಪ್ರಾಂತ್ಯದಲ್ಲಿ, ಅಂದಾಜು 1,54,000 ಚದರ ಕಿಲೋಮೀಟರ್ ಪ್ರದೇಶವನ್ನು, ಗೋಧಿ ಬೆಳೆಯುವ ಪ್ರದೇಶ (“ಗೋಧಿಪ್ರಾಂತ್ಯ”) ಅಂತ ಅಲ್ಲಿನ ಸರ್ಕಾರ ಗುರುತಿಸಿದೆ. ಈ ಭಾಗದ ದೊಡ್ಡ ನಗರ ಮತ್ತು ಆಸ್ಟ್ರೇಲಿಯಾದ ರಾಜಧಾನಿ ನಗರ ಪರ್ತ್. ಈ ಪ್ರಾಂತ್ಯದ ಸಮುದ್ರ ತೀರ ಪ್ರದೇಶದಲ್ಲಿ, ವರ್ಷಕ್ಕೆ 150 ಸೆಂಟಿಮೀಟರುಗಳಷ್ಟು ಮಳೆಯಾಗುತ್ತದೆ. ಕೊಂಚ ಒಳನಾಡಿಗೆ ಜರುಗುತ್ತಿದ್ದಂತೆಯೇ, ವಾತಾವರಣವು ರೂಕ್ಷವಾಗುತ್ತಾ ಹೋಗುತ್ತದೆ. ಆ ತೀರಾ ಅಹಿತಕರ ಒಣ ವಾತಾವರಣದ ಆಚಿನ ಅಂಚಲ್ಲಿ […]Read More
ಪುನಃ ಪುನಃ ಬುದ್ಧ ನೆನಪಾಗುತ್ತಾನೆ. ಅವನು ಕಲಿಸಿದ ಸಾಸಿವೆಯ ಪಾಠಕ್ಕೆ ಸಾಸಿವೆಯಷ್ಟೇ ಕಹಿಯಾದ ಸತ್ಯಕ್ಕೆ.. ಈಗ ಎಲ್ಲರ ಮನೆಯಲ್ಲೂ ಓರ್ವ ಕಿಸಗೌತಮಿ ಇದ್ದಾಳೆ.. ದುರಂತದ ಸಾಕ್ಷಿಯಾಗಿ.. ಸಾವಿನ ಭಾದೆಗೆ ಎಲ್ಲರೂ ಅರ್ಹರು.. ಕಣ್ಣು ತೆರೆಸಿದನು ಬುದ್ಧ.. ಗೌತಮಿ ನಕ್ಕಳಾಗ.. ಈಗ ನಾವೂ ಕಣ್ಣು ತೆರೆಯಬೇಕಿದೆ.. ಬೆತ್ತಲಾಗದಿರಲು ಜಗದ ಮುಂದೆ. ಇಪ್ಪತೊಂದನೆಯ ಶತಮಾನ ಅದೆಂತಹ ಕೇಡು.. ರಾಕೇಟುಗಳ ಕಳುಹಿಸಿ ಬೀಗದರೇನು ಬಂತು ಗಗನದೊಳು.. ಗಮನ ಹರಿಸಲು ಬೇಕು.. ಭೂಮಿಯೊಳು. ನಮ್ಮ ಆರೈಕೆಯೊಳು. ಇಂದು ರಸ್ತೆಗಳು ಖಾಲಿಯಾಗಿವೆ.. ಮನೆಗಳು ಹಾಳುಬೀಳದಿರಲಿ. […]Read More
ಈ ಆಧುನಿಕ ಯುಗವು ದಿನದಿಂದ ದಿನಕ್ಕೆ ಹೈ ಮಾಸ್ಟ್ ಎಂಬಂತೆ ಮುಂದುವರೆಯುತ್ತಲಿದೆ, ,ಅಂಗೈ ಬೆರಳ ತುದಿಯಲ್ಲೇ ಪ್ರಪಂಚ ಅಡಕವಾಗಿದೆ! ಕ್ಯಾಬ್ ಸೌಲಭ್ಯವಿದೆ! ಎರಡೇ ನಿಮಿಷದಲ್ಲಿ ನಿಮ್ಮ ಮನೆಯ ಬಾಗಿಲಿಗೆ ಬಂದು ನಿಲ್ಲುತ್ತದೆ. ಸ್ವಿಗ್ಗಿ, ಜೋಮ್ಯಾಟೋಗಳಿವೆ ಆರ್ಡರ್ ಮಾಡಿ 20 ನಿಮಿಷದೊಳಗೆ ಊಟ ನಿಮ್ಮ ಕೈಯಲ್ಲಿ!! ಶರವೇಗದಲ್ಲಿ ಓಡುವ ಪ್ರಪಂಚದಲ್ಲಿ ಯಾರಿಗೂ, ಯಾರಿಗಾಗಿಯೂ, ಸಮಯವಿಲ್ಲ! ತಾಳ್ಮೆಯಿಲ್ಲ!! ಸಹನೆಯಂತೂ ಇಲ್ಲವೇ ಇಲ್ಲಾ!!! ಜನಸ್ತೋಮದಲ್ಲಿ ನುಗ್ಗಿಬಂದು, ಅಂಬರದೆತ್ತರಕ್ಕೆ ಟಿಸಿಲೋಡೆದು, ಎದ್ದು ನಿಂತದ್ದು, “ಸೆರೋಗೆಸಿ “ ಅಂದ್ರೆ, “ಸಂತಾನಕ್ಕಾಗಿ ಒಂದು ಹೆಣ್ಣಿನ ಗರ್ಭವನ್ನು […]Read More
ಒಂದು ಹೂ ಕುಂಡದ ಕಿರು ಕಥೆ ಅದು ಒಡೆದ ಹೂಕುಂಡದ ಒಂದು ಭಾಗ. ಬೆಂಗಳೂರಿನ ಸೈನ್ಸ್ ಮ್ಯೂಸಿಯಂ ಒಂದರಲ್ಲಿ ಪ್ರದರ್ಶನಕ್ಕೆಂದು ಇಟ್ಟಿದ್ದರು. ಮುನ್ನೂರು ವರ್ಷಗಳ ಹಿಂದೆ ಪಡಾಯಿ ಸಾಮ್ರಾಜ್ಯದ ರಾಣಿ ರುಕುಮಾಯಿ ಬಳಿ ಈ ಹೂಕುಂಡ ಇತ್ತಂತೆ. ತನ್ನ ರಾಜ್ಯವೆಲ್ಲಾ ಶತ್ರುಗಳಿಂದ ಧ್ವಂಸವಾದಾಗ ಈ ಕುಂಡವೂ ನುಚ್ಚುನೂರಾಯಿತಂತೆ. ಅದಾದ ಒಂದಷ್ಟು ವರ್ಷಗಳಲ್ಲಿ ಆ ಜಾಗವು ಒಂದು ಪ್ರೇಕ್ಷಣೀಯ ಸ್ಥಳವಾಯಿತಂತೆ. ಆ ಸ್ಥಳಕ್ಕೆ ಅಲೆಮಾರಿಯೊಬ್ಬ ಭೇಟಿ ನೀಡಿ, ಒಡೆದ ಹೂಕುಂಡವನ್ನು ಗಮನಿಸಿ ವಿಶೇಷವೆನಿಸಿದಾಗ ಅದನ್ನು ತಂದು ಮ್ಯೂಸಿಯಂಗೆ ಒಪ್ಪಿಸಿದಂತೆ. […]Read More
ಓ ಕಲ್ಪನೆಯ ಹೆಣ್ಣೆಕನಸಲ್ಲಿ ಕಾಣುತಿರುವೆ ನಾನಿನ್ನೊಂದಿಗಿನ ಆ ಸುಂದರ ಸೆಣೆಸಾಟ.ಅದಕ್ಕೆ ನಿತ್ಯವು ನಿನ್ನ ಹೊಕ್ಕಳ ಮೇಲೆಹೊರಳಾಟದ ಬಯಕೆ ನನಗೆ..ನೀನೆ ತೆರೆದಿಟ್ಟು ಕರೆದ ಮೇಲೆನಾನೇನನ್ನೂ ಮುಚ್ಚಿಡುವುದಿಲ್ಲ..ಸನಿಹ ಬಾ ಇಬ್ಬರ ಬಯಕೆಗೆ ನಾಚಿ ಸುರಿಸೋಆ ಮುಗಿಲ ಮಳೆಯಷ್ಟೇ ಸಾಕು.. ಬೇಕಂತಲೇ ಗಟ್ಟಿಯಾಗಿ ಉಡದ ಸೀರೆಯನುನೀ ಎಷ್ಟಂತ ಹಿಡಿದುಕೊಳ್ಳುವೆ,ನನ್ನನು ಕೆರಳಿಸಿ ಕರೆಯುವ ನಿನ್ನ ಈಚಾಲಾಕಿತನವನ್ನ ನಾನೆಂದೋ ಅರಿತಿರುವೆ.ತಿಳಿದಿಕೋ ಅರಳಿದ ಗುಲಾಬಿ ಸೆಳೆಯದೆ ಇರಲಾರದುಬಳಿಗೆ ಕರೆದು ಸ್ಪರ್ಶಿಸಿಕೊಳ್ಳದೆ ಬಿಡಲಾರದು.. ಇಂದಿಗೂ ಮುದುಡಿಕೊಂಡೆ ಇದ್ದವುನನ್ನ ಕೈ ಬೆರಳುಗಳೆಲ್ಲ.ನಿನ್ನ ಹೊಕ್ಕಳಮೇಲೆಲ್ಲ ಕೈಯಾಡಿಸುವ ಕೆಲಸ ಕೊಟ್ಟ ಮೇಲೆನಾನು […]Read More
ಎಷ್ಟೂಂದು ನಿಶ್ಚಲವಾಗಿ ನಿಂತಿದೆಕಲ್ಲು-ಮಣ್ಣು-ಸುಣ್ಣದಿಂದ ಕೂಡಿದಬ್ರಿಟೀಷರ ಕಾಲದ ಈ ಗೋಡೆನನಗೆ ಹೆಮ್ಮೆಯ ಸಂಗತಿಈ ನಿರ್ಜೀವಿ ಗೋಡೆ ಜೀವ ಇಲ್ಲದೆಯೂ..ನನ್ನೆದೆಯ ಭಾವಗಳಿಗೆಸ್ಪಂದಿಸೋ ಈ ಗೋಡೆನಾನು ಜೈಲಿನಲ್ಲಿ ಸಂಪಾದಿಸಿದ್ದು;ಹದಿಮೂರು ವರ್ಷಗಳಿಂದ ಇದ್ದಿಲಿನಿಂದ ನಾ ಒತ್ತಿ ಒತ್ತೀ..ನನ್ನ ಮನದಾಳದ ನೋವುಗಳನ್ನುಗಟ್ಟಿಯಾಗಿ ಗೀಚುವಾಗಲೆಲ್ಲಉಸಿರನ್ನೂ ಬಿಡದೆ ನಿಂತಿದ್ದ ಈ ಗೋಡೆ;ಆಗಾಗ ನನ್ನ ಇತಿಹಾಸವನ್ನೇ ಹೊಳೆಯುವಂತೆಇಲ್ಲಿಗೆ ಬಂದವರಿಗೆಲ್ಲಾ ಬಣ್ಣಿಸುತ್ತದೆಉಣ್ಣಿಸಿ, ಅವರನ್ನೂ ಸಲುಹುತ್ತದೆ ಕೂಡಪ್ರೇಯಸಿಯರ ವಿರಹಕ್ಕೋಅಪ್ಪ-ಅಮ್ಮನ ನೆನಪಿಗೋಗೆಳೆಯರ ತುಂಟಾಟದ ಸವಿಗಳಿಗೋರಂಗದ ಮೇಲಿನ ನನ್ನ ಅಚ್ಚರಿ ದೃಶ್ಯಗಳಿಗೋಇಲ್ಲಿಗೆ ಬರುವ ಮುಂಚೆ ಪ್ರೀತಿಸಿದ್ದಆ ಚೋರಿ ಯಾಶಿಯ ಬಲೆಗೋ ಸಿಕ್ಕಈ ನೀರಪರಾಧಿಯ ಸಾಲುಗಳ […]Read More
ಕಾದಂಬರಿ ಪರಿಚಯ ಲೇಖಕರು: ಪ್ರಮೋದ್ ಕರಣಂ ಶ್ರೀ ಪ್ರಮೋದ್ ಕರಣಂ ರವರ ಚೊಚ್ಚಲ ಕಾದಂಬರಿ ಇದಾಗಿದ್ದು, ದಿನಾಂಕ:17-12-2020 ರಂದು ಕಲ್ಬುರ್ಗಿಯಲ್ಲಿ ಖ್ಯಾತ ಸಾಹಿತಿಗಳಾಗಿರುವ ಪ್ರೊಫೆಸರ್ ಶ್ರೀ ವಸಂತ ಕುಷ್ಟಗಿ ರವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡ ಸಂದರ್ಭದಲ್ಲಿ ಪ್ರೊಫೆಸರ್ ವಸಂತ ಕುಷ್ಟಗಿ ರವರು “ನಾನು ಓದಿದ ಕಾದಂಬರಿಗಳಲ್ಲಿ ತ ರಾ ಸು ರವರ ಮಸಣದ ಹೂವು ಕಾದಂಬರಿ ನನಗೆ ತುಂಬ ಇಷ್ಟವಾಗಿದ್ದು, ಅದರ ನಂತರ ಈ ಕಾದಂಬರಿ ನನಗೆ ತುಂಬ ಇಷ್ಟವಾಗಿದೆ ” ಎಂಬ ಮೆಚ್ಚುಗೆಯ ನುಡಿಗಳೊಂದಿಗೆ ಹಾರೈಸಿರುತ್ತಾರೆ. […]Read More
ಮಹಾಕವಿಯ ಚೇತನಕ್ಕೊಂದು ಮಂತ್ರ! – ಕುಟುರ Barbet – Psilopogon viridis ಕುಟುರ್…ಕುಟುರ್….ಕುಟುರ್… ಕೇಳಿದೊಡನೆಯೇ ಕುವೆಂಪು ಭಾವಪರವಶರಾಗುತ್ತಿದ್ದರಂತೆ. ಅವರ ಸುಪುತ್ರ ಏಕೆಂದು ಕೇಳಿದರೆ, “ಕುಟುರನ ಹಕ್ಕಿಯ ಕೂಗು ಕೇಳಿದೊಡನೆಯೇ ನನ್ನ ಚೇತನ ಈ ಊರಿನ ಸದ್ದು ಗೊಂದಲಗಳಿಂದ ಪಾರಾಗಿ ಮಲೆನಾಡಿನ ವಿಸ್ತಾರವಾದ ಕಾಡಿಗೆ ಸ್ಥಳಾಂತರಗೊಳ್ಳುತ್ತದೆ. ನಿಮಗೆಲ್ಲ ಅದೊಂದು ಹಕ್ಕಿಯ ಕೂಗಾದರೆ, ನನಗೆ ಅದೊಂದು ಮಂತ್ರ!” ಎಂದರಂತೆ. ಆ ಹಕ್ಕಿಯೇ ಬಿಳಿ ಕೆನ್ನೆಯ ಕುಟುರ. ಸೊಪ್ಪುಕುಟಿರ, ಕುಟಿರ ಎಂದೆಲ್ಲ ಕರೆಸಿಕೊಳ್ಳುವ ಹಕ್ಕಿ ನಮ್ಮಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳಲ್ಲಿ ಒಂದು. […]Read More
-ರತ್ನನ ಪದಗಳು ಕುಡಕರ್ ಮಾತ್ವ ತಿಳಿಕೊಳ್ದೇನೆನೂಕ್ಬಾರ್ದ್ ಔರ್ನ ಕೆಳಗೆ;ಯಾವ್ ಚಿಪ್ನಾಗ್ ಮುತ್ತ್ ಐತೊ-ಒಡದ್ ನೋಡ್ಬೇಕ್ ಒಳಗೆ! ಕೊಚ್ಚೆ ನೀರೀನ್ ಸೋದೀಸ್ತ್ ಅಂದ್ರೆಸಿಕ್ಕೋಕಿಲ್ವ ಗಂಗೆ?ಸಾಜಾ ಯೇಳೋನ್ ಯಾರಾದ್ರೇನು?ಸತ್ಯ ಕಣ್ ಕಂಡೌಂಗೆ! ಆರ್ತ್ ಇಲ್ಲಾಂತ್ ನೆಗಬೇಡಾಣ್ಣನಾಕುಡದಾಡೋ ಮಟ್ಟು!ಕುಡಕನ್ ಪದಗೊಳ್ ಒಕ್ಕ್ ನೋಡಿದ್ರೆಮಸ್ತಾಗ್ ಅವೆ ಗುಟ್ಟು! ‘ರವ್ವಿ ಕಾಣದ್ ಕವಿ ಕಂಡ’ಅಂದ್ರೆ ಕವಿಗೊಳ್ ತತ್ವ-‘ಕವ್ವಿ ಕಾಣದ್ ಕುಡಕ ಕಂಡ’ಅನ್ನೊದ್ ಕುಡಕರ್ ಮಾತ್ವ! –ಜಿ ಪಿ ರಾಜರತ್ನಂ ಮೂಲ ಪದ: ಜಿ ಪಿ ರಾಜರತ್ನಂ – ರತ್ನನ ಪದಗಳು ಕೃಪೆ ಡಾ|| ನಾ […]Read More