ನಿಸರ್ಗದಾಟ

ನಿಸರ್ಗದಾಟ ತಳಿರ ತೋರಣಗಟ್ಟಿ,ತಾನತಾನದಿ ಗಾನಗೈವಕಾಜಾಣಗಳ ತಾನುಮುದದಿ ಕರೆಯುತಿಹುದು! ನೇಸರನು ಕುಂಚವನುತಾ ಮೆಲ್ಲ ಬೀಸುತಲಿ,ಮುಂಬಿಸಿಲ ಹೊಂಬಣ್ಣಎಲ್ಲೆಲ್ಲೂ ಸವರಿಹನು! ಮುತ್ತನೆರಚಿ ನಲಿವಸಲಿಲದ ನೀರ್ಗೊರಳು,ಕಣ್ತಣಿಸಿ, ಕಿವಿಗಿಂಪಾಗಿಮನವನಪಹರಿಸಿಹುದು! ಕಂದರದೊಳಲೆಯುತಿಹಮಂದ ಮಾರುತ ತಾನು,ಪರಪುಟ್ಟನಿಂಚರವಪ್ರತಿಧ್ವನಿಸುತಿಹನು ! ಶ್ರೀವಲ್ಲಿ ಮಂಜುನಾಥಬೆಂಗಳೂರುRead More

ಬಾ ಗೆಳತಿ

ಬಾ ಗೆಳತಿ ಹೃದಯದ ಕವಾಟು ತೆರೆದಿದೆ ಗೆಳತಿನೀ ನಿಲ್ಲದೆ ಗಾಳಿ ಬೆಳಕಿಲ್ಲ ಮನೆಯಲ್ಲಿ ತಾಂಬೂಲ ಅಗೆಯುತ್ತಾಕಂಗಳಲಿ ಆಸೆಯನೊಸುರುತ್ತಾಕಾಯುತ್ತಿದೆ ಜೀವ, ನಿರೀಕ್ಷೆ ಹುಸಿಯಾಗದಿರಲಿ ಕೈಯೊಳಗಿನ ಪುಸ್ತಕಕಂಗಳ ಮೇಲಿನ ಕನ್ನಡಕಹುಡುಕುತ್ತಿದೆ ನಿನ್ನನ್ನೇ ಎಲ್ಲಾ ಪುಟಗಳ ತಿರುಗಿಸಿಬಾವ ಬರಿದಾಗದಿರಲಿ ಅದೆಷ್ಟು ಹಣತೆಗಳ ಬೆಳಗಬೇಕಿದೆ ಮನದಲ್ಲಿಆರದ ಬೆಳಕಾಗಿ ಒಮ್ಮೆ ಬಾ ಸಂತಸದಿಈ ಹೃದಯದ ಕವಾಟು ತೆರದಿದೆ ನಿನಗಾಗಿ ಪವನ ಕುಮಾರ ಕೆ. ವಿ.ಬಳ್ಳಾರಿಮೊಬೈಲ್ : 9663346949Read More

ಹುಣಸೇ ಚಿಗರು ಮತ್ತು ಇತರ ಕಥೆಗಳು

ಹುಣಸೇ ಚಿಗರು ಮತ್ತು ಇತರ ಕಥೆಗಳು ಲೇಖಕಿ : ದೀಪದ ಮಲ್ಲಿಮುದ್ರಣ : ಕಾವ್ಯಮನೆ ಪ್ರಕಾಶನಬೆಲೆ : 100/- ಲೇಖಕಿ ಪರಿಚಯ : ಕವಿ, ಹೋರಾಟಗಾರ್ತಿ, ಕಲಾವಿದೆ ದೀಪದ ಮಲ್ಲಿ (ದೀಪಾ.ಕೆ ) ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಹಳ್ಳಿಯಲ್ಲಿ ಜನಿಸಿದರು. ತಂದೆ ಮೈಸೂರಿನ ನಂಜನಗೂಡು ಮೂಲದ ಕೆ.ಎಸ್. ಕೇಶವನ್ ತಾಯಿ, ಸುಲೋಚನಾ. ಇವರ ಮನೆಯ ಹಿರಿಯರು ಊರಿನ ದೇವಸ್ಥಾನದಲ್ಲಿ ಅರ್ಚಕರಾಗಿದ್ದ ಕಾರಣ ದೀಪಾ ಪೂಜೆ-ಪುನಸ್ಕಾರ ಮತ್ತು ಸಂಪ್ರದಾಯಸ್ಥ ವಾತಾವರಣದ ಮಧ್ಯೆಯೇ ಬೆಳೆದರು. ದೀಪಾ ಹುಟ್ಟಿದ್ದು […]Read More

ಗೆಳೆಯನಿರಬೇಕು

ಗೆಳೆಯನಿರಬೇಕು ಕಗ್ಗತ್ತಲ ಕಳೆದು ಬೆಳಕೆರೆವ ರವಿಯಂಥಕದ್ದಿಂಗಳ ಕಳೆವ ಬೆಳದಿಂಗಳ ಶಶಿಯಂಥಸುರಿಮಳೆಯ ಸಹಿಸುವ ಧರಣಿಯಂಥಗೆಳೆಯನಿರಬೇಕು ಒಬ್ಬ ಮುತ್ತಿನಂಥ ನಾವೆ ದಾರಿ ತಪ್ಪದಿರಲೆಂಬ ದಿಕ್ಸೂಚಿಯಂಥದಾರಿ ತಪ್ಪಿದ ನಾವೆಗೆ ದೀಪಸ್ತಂಭದಂಥದಾರಿಯುದ್ದ ಜೊತೆ ಇರುವ ಕಾಲುಗಳಂಥಗೆಳೆಯನಿರಬೇಕು ಒಬ್ಬ ಮುತ್ತಿನಂಥ ನೂರು ಮುಳ್ಳು ನಡುವ ಗುಲಾಬಿಯಂಥದುರ್ವಾಸನೆ ಕಳೆದೊಗೆವ ಧೂಪದಂಥಹೃದಯ ದೇಗುಲದ ದೇವತೆಯಂಥಗೆಳೆಯನಿರಬೇಕು ಒಬ್ಬ ಮುತ್ತಿನಂಥ ಗುರಿ ನೀಡಿ ದಾರಿ ತೋರೋ ಗುರುವಿನಂಥಗದರಿ ಬೆದರಿಸಿ ಹೇಳುವ ತಂದೆಯಂಥಸುಡುಬಿಸಿಲಲಿ ತಂಪೆರೆವ ತಾಯಿಯಂಥಗೆಳೆಯನಿರಬೇಕು ಒಬ್ಬ ಮುತ್ತಿನಂಥ ಬಾಳ ಮರುಭೂಮಿಯ ಓಯಾಸಿಸ್ ನಂಥಕಂಬನಿ ಮಹಾಪೂರ ಸಹಿಸುವ ಸಾಗರದಂಥಮಮತೆಯಿಂದ ಸಂತೈಸುವ ಮಡದಿಯಂಥಗೆಳೆಯನಿರಬೇಕು […]Read More

ಅಂತರಗಂಗೆ

ಅಂತರಗಂಗೆ “ರತ್ನಾಕರ ನೋಡು, ಪಕ್ಕದ ಮನೆಗೆ ಬಾಡಿಗೆಗೆ ಬಂದವರಿಗೆ ರೀತಿ, ರಿವಾಜು, ಮಡಿ, ಮೈಲಿಗೆ ಒಂದೂ ಇಲ್ಲ, ಹೇಸಿಗೆ ಆಗುತ್ತದಪ್ಪ”.“ಅಮ್ಮ, ಅದು ಎಷ್ಟಾದರೂ ಪಕ್ಕದ ಮನೆ, ನಾವೇ ಸ್ವಲ್ಪ ಅಡ್ಜೆಸ್ಟ ಮಾಡ್ಕೊಬೇಕು. ನಿನ್ನಿಷ್ಟದಂತೆ ಆಮರನಾಥ್ ಯಾತ್ರೆಗೆ ಟಿಕೆಟ್ ಬುಕ್ ಮಾಡಿದ್ದೀನಿ” ರತ್ನಾಕರ, ಹೆಂಡತಿ ಸುಜಾತ ಮತ್ತು 74 ವರ್ಷದ ತಾಯಿ ವಿಶಾಲಮ್ಮ ಆಮರನಾಥ್ ಯಾತ್ರೆಗೆ ಹೊರಟರು, ಹೋಟೆಲಿನ ಊಟ ಮಾಡದ ವಿಶಾಲಮ್ಮನಿಗಾಗಿ ಚಪಾತಿ, ಶೇಂಗ ಚಟ್ನಿ ಕಟ್ಟಿಕೊಂಡರು. ಬೆಂಗಳೂರಿನಿಂದ ಕಾಶ್ಮೀರದ ಪೆಹಲ್ಗಾಂವರೆಗಿನ ಯಾತ್ರೆ ಯಾವ ತೊಂದರೆಯೂ ಇಲ್ಲದೆ […]Read More

ಜನನಿ

ಜನನಿ ನವಮಾಸ ಹೊತ್ತು ನೋವನುಂಡವಳುಈ ದೇಹಕ್ಕೆ ಮಾಂಸ ಮಜ್ಜೆ ನೀಡಿದವಳುತನಗಿಲ್ಲದಿರೂ ನನಗೆ ಕೊಟ್ಟ ನಿಸ್ವಾರ್ಥಿಯಿವಳು ರಾತ್ರಿ ಹಗಲೂ ನಿದ್ರೆಗೆಟ್ಟು ಬೆಳೆಸಿದವಳುಲಾಲಿಯ ಜೋಗುಳವ ಹಾಡಿದವಳುಬಗೆ ಬಗೆಯ ಕಥೆಗಳನು ತಿಳಿಸಿದವಳು ಅಕ್ಕರದ ಪ್ರೀತಿಯನು ನನ್ನಲ್ಲಿ ತುಂಬಿಹಳುಶಾಸ್ತ್ರ ಸಂಪ್ರದಾಯಗಳ ಕಲಿಸಿದವಳುಹಳೆಯ ತಲೆಮಾರಿಗೆ ಕೊಂಡಿಯಿವಳು ಪ್ರೀತಿಯ ಧಾರೆಯ ಮೊಗೆದು ಹರಿಸಿದವಳುನನ್ನೆಲ್ಲ ಬೇಕು ಬೇಡಗಳನು ಅರಿತವಳುಮನಬಿಚ್ಚಿ ಮಾತಾಡಲು ಜೊತೆಯಿರುವಳು ತಾಯಲ್ಲವೇ ನಿಜ ಪ್ರೀತಿ ಗೆಳೆಯಳುಅಮ್ಮ ಅಮ್ಮ ಅಮ್ಮ ನನ್ನಮ್ಮ ಸಿ. ಎನ್. ಮಹೇಶ್Read More

ಭಾವದ ಬೆನ್ನತ್ತಿ

ಭಾವದ ಬೆನ್ನತ್ತಿ ಅವೆಷ್ಟೋ ಭಾವಗಳುಮಾತಿಗೆ ನಿಲುಕದೇಮೌನದಲೂ ಬೆರೆಯದೆಒಳಗೊಳಗೆ ಹುದುಗಿಹೈರಾಣಾಗುತಿದೆ ಸಪ್ಪ್ರೆಸ್ಡ್,ಡಿಪ್ರೈವ್,ಡಿಪ್ರೆಶನ್,ಗಿಲ್ಟ್ ಪ್ಲೆಶರ್,ಇನ್ನೆಷ್ಟು ಹೆಸರುಗಳೋ ಇವಕ್ಕೆ?! ಸೀಡ್ಲೆಸ್ ಹೈಬ್ರಿಡ್ಬ್ರೀಡ್ ಆಗದಹಾರ್ಮೋನು ಚುಚ್ಚಿದಮರಿ ಹಾಕದ ಮೊಟ್ಟೆಗಳಂಥಾಈ ಭಾವಗಳುಗೋಡೆ ಬಿರುಕು ಬಿಟ್ಟರೆಹೊರಗೆ ಬರಬಹುದು ಅಷ್ಟೇ ಪ್ಲಾಸ್ಟಿಕ್ ಬಿರಡೆಯನ್ನುಗಟ್ಟಿಯಾಗಿ ಮುಚ್ಚಿರುವಾಗಹೊರಬರಲಾಗದ ಭಾವಗಳುಒಳಗೊಳಗೆ ಉಬ್ಬರಿಸಬೇಕುತಮ್ಮೊಳಗೆ ಬೊಬ್ಬಿರಿಯಬೇಕುಕರಪತ್ರಗಳ ಪ್ರಕಟಣೆಗೆಖಾಲಿ ಸ್ಥಳವಿಲ್ಲಜಾಹಿರಾತುಗಳಿಗಾಗಿಜಾಗವನು ಈಗಾಗಲೇಮಾರಿಕೊಂಡಾಗಿದೆ ಭವಿಷ್ಯದ ದಾರಿಗೆಕಣ್ಣು ಮುಚ್ಚಿಕೊಂಡಿರುವಾಗಭೂತದ ಬೆನ್ನಿಗೇನಾನೆಂಬ ಭಾವನೇತು ಬಿದ್ದಿರುವಾಗವಾಸ್ತವದ ಅರಿವುಮೂಡುವುದಾದರೂ ಹೇಗೆ?! ಪ್ಲಾಸ್ಟಿಕ್ ಡಬ್ಬಿಯಲ್ಲಿಅವೆಷ್ಟು ಭಾವಗಳನ್ನುತುಂಬಿ ಇಟ್ಟರೂಏರ್ ಟೈಟ್ ಆಗಿರುವುದರಿಂದಗೋಡೆಗಳ ನಡುವೆಉಳಿದ ಗಾಳಿಯಷ್ಟೇಉಸಿರಾಡಲು ಸಿಗುವುದು ನಾವೇ ಮಾಡಿಕೊಂಡವ್ಯವಸ್ಥೆ ಹೀಗಿರುವಾಗಸ್ವಚ್ಛ ಗಾಳಿ ಸ್ವಸ್ಥ ಮನಸುಅರಳುವುದಾದರೂ ಹೇಗೆ?! […]Read More

ಆಮೇಜಾನ್ ಕಾಡಿನ ಜಾಗ್ವಾರ್

ಆಮೇಜಾನ್ ಕಾಡಿನ ಜಾಗ್ವಾರ್ ಅಘ್ರ ಪರಭಕ್ಷಕ ವನ್ಯಜೀವಿಗಳಲ್ಲಿ ಧೈಹಿಕ ಶಕ್ತಿ ಸಾಮರ್ಥ್ಯ‌, ಭೇಟೆಯಾಡುವ ಕುಶಲತೆ ಮತ್ತು ಯಾವ ಪ್ರದೇಶದಲ್ಲಿ ಭೇಟೆಯಾಡುತ್ತಿದೆಯೋ ಆ ಪ್ರದೇಶಕ್ಕೆ ತಕ್ಕಂತೆ ಹೊಂದಿಕೊಂಡು ಭೇಟೆಯಾಡಲು ಸಹಕರಿಸುವ ಅವುಗಳ ದೇಹದ ಗುಣಲಕ್ಷಣಗಳು ಸಹ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಬೆಕ್ಕಿನ ಕುಲದ ( Cat family) ಅಘ್ರಪರಭಕ್ಷಕ ಪಟ್ಟಿಗೆ ಬಂದಾಗ ಹುಲಿ ಸಿಂಹಗಳು ನಿಸ್ಸಂದೇಹವಾಗಿ ಪ್ರಥಮ ಶ್ರೇಣಿಯಲ್ಲಿ ನಿಲ್ಲುತ್ತವೆ ಎನ್ನುವುದು ನಿಜ. ಈ ಕ್ಯಾಟ್ ಪ್ಯಾಮಿಲಿಯ ಹೆಚ್ಚಿನವು ನೀರಿನಲ್ಲಿ ಆರಾಮವಾಗಿ ಈಜಬಲ್ಲವಾದರೂ ಹೆಚ್ಚಾಗಿ ನೀರಿನಿಂದ ದೂರವೇ […]Read More

ವ್ಯರ್ಥ

ವ್ಯರ್ಥ ತಂದಿಟ್ಟ ಓಲೆಯಲಿನಿನ್ನಿಷ್ಟದ ಅಕ್ಷರಗಳನುನನ್ನಿಷ್ಟದ ಹಾಗೆ ಬರೆಯಬೇಕೆಂದುಇರುಳೆಲ್ಲ ಚಿಂತಿಸಿದರುಒಂದಿಷ್ಟು ಜೋಡಿಸಿ ಬರೆಯಲುಸಾಧ್ಯವಾಗುತ್ತಿಲ್ಲ ಕಾರಣವೇನೆಂದು ಕೇಳಬೇಡ? ಬರಹಕ್ಕಾಗಿ ಆಯ್ದ ವಿಷಯವನ್ನುಗಂಭೀರವಾಗಿ ಶೋಧಿಸಿ ಪರಿಶೀಲಿಸಿಹುಡುಕಿಟ್ಟು ಇದ್ದಂತೆ ಬರೆಯಲುನೆರವು ಕೇಳಲು ಕೊಳಲು ಕೃಷ್ಣಗೆಕೈಮಾಡಿ ಕರೆದು ಹಣೆಯ ಮೇಲಿನನವಿಲು ಗರಿ ಕೇಳಿಬರೆಯಲು ಕುಳಿತುಕೊಂಡರುಅದೇನೋ ವಿಘ್ನಮೊದಲಕ್ಷರವು ಮೂಡಿ ಮುಂದೆ ಹೋಗುತ್ತಿಲ್ಲಕಾರಣವೇನೆಂದು ಕೇಳಬೇಡ? ಅಮವಾಸ್ಯೆಯ ರಾತ್ರಿ ಕುಳಿತುಸಮಸ್ಯೆಯೆಲ್ಲವ ಪರಿಹರಿಸಿಪ್ರಥಮ ರಾತ್ರಿಯ ಕತ್ತಲು ನೆನೆದುಕುಳಿತಲ್ಲಿಯೇ ಬೆವೆತುನೀನಿರುವ ಸಿಂಗಾರ ಚಾವಣಿಯ ಕಲ್ಪಿಸಿಸ್ಪರ್ಶಾಕ್ಷರ ಬರೆಯುವುದು ಸಾಧ್ಯವಾಗಲ್ಲಿಅಡ್ಡಗಟ್ಟಿದ್ದು ಯಾರೆಂದು ಕೇಳಬೇಡ? ಹಸಿಮನೆಯಿಂದ ಕೆಳಗಿಳಿದುನಾವಿಬ್ಬರೂ ಚದುರಂಗದಾಟಕ್ಕೆ ಕಾಯುತ್ತಿರುವಾಗಇರುಳ ಲೋಕವೆಲ್ಲ ಮಧ್ಯಪಾನ ಮಾಡಿಮಧ್ಯ ರಾತ್ರಿಯೇ […]Read More

ವ್ಯಕ್ತಿಯ ವ್ಯಕ್ತಿತ್ವ ಪೆನ್ಸಿಲ್‌ನಂತೆ

ವ್ಯಕ್ತಿಯ ವ್ಯಕ್ತಿತ್ವ ಪೆನ್ಸಿಲ್‌ನಂತೆ ಅಕ್ಷರಗಳನ್ನು ಸುಂದರವಾಗಿ ಬರೆಯುವ ಪೆನ್ಸಿಲ್ ವಿಭಿನ್ನ ವಿಚಾರಗಳನ್ನು ದಾಖಲಿಸಿ ಇಡಬಲ್ಲದು. ಅದ್ಭುತವಾದ ಕಥೆಗಳು, ಕವನಗಳು, ಒಳ್ಳೆಯ ಮತ್ತು ಕೆಟ್ಟ ವಿಚಾರಗಳನ್ನು ಬರೆಯುವ ಮೂಲಕ ಮತ್ತು ಬರೆದ ಅಕ್ಷರಗಳಿಂದ ವ್ಯಕ್ತಿ ವ್ಯಕ್ತಿಗಳಲ್ಲಿ ಪ್ರೀತಿ ಹುಟ್ಟಿಸುವ ಅಥವಾ ದ್ವೇಷವನ್ನು ಬಿತ್ತುವ ಎರಡೂ ಗುಣ ಪೆನ್ಸಿಲ್‌ ನಲ್ಲಿ ಇದೆ. ಆದರೆ, ಪೆನ್ಸಿಲಿಗೆ ಬರೆಯುವ ಕೈಗಳ ಸಹಕಾರ ಇಲ್ಲದಿದ್ದರೆ ಕೇವಲ ಪೆನ್ಸಿಲ್ ಒಂದೇ ಏನನ್ನೂ ಬರೆಯಲು ಯಾ ಮಾಡಲು ಸಾಧ್ಯವಿಲ್ಲ. ಅಕ್ಷರಗಳನ್ನು ಬರೆಯುವ ಪೆನ್ಸಿಲ್ ಬಳಸುತ್ತಾ ಹೋದಂತೆ ಅದರ […]Read More