“ಕಣಿ ಏಳ್ತೀನಮ್ಮ ಕಣಿ” ಅಥವಾ “ಕೊಂಡಮಾಮ-ಕುರ್ರಮಾಮ” ಎಂದು ರಾಗವಾಗಿ ಭವಿಷ್ಯವನ್ನು ಹೇಳುತ್ತಾ ಊರು ಊರು ತಿರುಗುವುವರನ್ನು ನೋಡಿರುತ್ತೀರಿ. ಇವರುಗಳ ಚಟುವಟಿಕೆಗಳು “ನೀಲಿ ಹೊತ್ತಿಗೆ“ಎಂಬ ಜನಪದ ಕಲೆಯ ಭಾಗವಾಗಿದೆ. ಇವರುಗಳು ಹೇಳುವ ಭವಿಷ್ಯ ಹಾಗು ಅವಲಂಬಿಸುವ ಚಿತ್ರಗಳ ಬಗ್ಗೆ ಒಂದು ಅವಲೋಕನ ನೀಲಿ ಹೊತ್ತಿಗೆ: ಜನನ-ಮರಣ, ಹಬ್ಬ-ಹರಿದಿನ, ಜಾತ್ರೆ-ಉತ್ಸವ, ಮದುವೆ- ದಿಬ್ಬಣದಂತದ ಸಂದರ್ಭಗಳಲ್ಲಿ, ಕೂರಿಗೆ ಹೂಡಿ, ಬಿತ್ತನೆ ಮಾಡುವ, ಬೆಳೆ ಕೊಯ್ಯುವ, ಗೂಡು ಹಾಕುವ, ಕಣ ಮಾಡುವ, ಹೀಗೆ ಹಲವು ಹಲವಾರು ಸಂದರ್ಭಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮುಹೂರ್ತ ನೋಡುವಂತಹ […]
ಕಳೆದ ವಾರ ನಮ್ಮ ಸಂಸ್ಕೃತಿಯ ಹೆಮ್ಮೆಯ ಕಲೆ ಚನ್ನಪಟ್ಟಣದ ಬೊಂಬೆಯ ಬಗ್ಗೆ ಓದಿದ್ದೀರಿ. ಈಗ ಕಲೆ ಸಂಸ್ಕೃತಿಯ ಅಳಿವಿನಂಚಿನಲ್ಲಿದ್ದು ಈಗ ಕೇಂದ್ರ ಸರ್ಕಾರದ ಕೃಪೆ ಯಿಂದ ಮತ್ತೆ ಪುನರ್ಉದಯಿಸುತ್ತಿರುವ ಕಿನ್ನಾಳ ಕಲೆ ಹಾಗು ಅದನ್ನೇ ನೆಚ್ಚಿಕೊಂಡಿರುವ ಕಲಾವಿದರ ಬಗ್ಗೆ ತಿಳಿಯೋಣ. ವಿಜಯನಗರ ಸಾಮ್ರಾಜ್ಯವು ಒಂದು ಕಾಲದಲ್ಲಿ ಇಡೀ ದಕ್ಷಿಣ ಭಾರತಕ್ಕೇ ಧಾರ್ಮಿಕ ರಕ್ಷಣೆಯನ್ನು ಕೊಟ್ಟ ಕರ್ನಾಟಕದ ರಾಜಮನೆತನ. ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯಂತೆ ಕುಸರಿ ಕಲೆಯು ಆ ಕಾಲದಲ್ಲಿ ಪ್ರಾಮುಖ್ಯತೆಯನ್ನು ಪಡೆದಿತ್ತು. ವಿಜಯನಗರ ಮಹಾ ಸಂಸ್ಥಾನದ ಪತನದ ನಂತರ […]Read More
ಆಟಿಕೆಗಳು ಕೇವಲ ಆಟಿಕೆಗಳಲ್ಲ, ಅದರಿಂದ ಮಕ್ಕಳ ಕಲ್ಪನಾ ಶಕ್ತಿ, ಮೇಧಾ ಶಕ್ತಿ ಬೆಳವಣಿಗೆಯಾಗುತ್ತದೆ. ಮತ್ತು ಇತರರ ಜತೆ ಬೆರೆಯುವುದನ್ನು ಮಕ್ಕಳಿಗೆ ಕಲಿಸಿಕೊಡುತ್ತದೆ. “ಆಟಿಕೆಗಳಿಂದ ಮನೋರಂಜನೆಯಷ್ಟೇ ಸಿಗುವುದಿಲ್ಲಆಟದ ಜೊತೆಗೆ ಪಠ್ಯ ಕಲಿಯುವುದು ನೂತನ ಶಿಕ್ಷಣ ನೀತಿಯ ಭಾಗವಾಗಲಿದೆ ಎಂದು ಎನ್ಇಪಿ ಹೇಳುತ್ತದೆ”. ಲಡಾಖ್ ಗಡಿ ತಂಟೆ ಬಳಿಕ ‘ಬಾಯ್ಕಾಟ್ ಚೀನಾ’ ಆಂದೋಲನ ತೀವ್ರಗೊಳಿಸಿದ ಕೇಂದ್ರ ಸರಕಾರ, ಚೀನಾ ಆಟಿಕೆಗಳ ಅಬ್ಬರಕ್ಕೆ ಕಡಿವಾಣ ಹಾಕಿ ಜಾಗತಿಕ ಆಟಿಕೆಗಳ ತಯಾರಿಕಾ ಕ್ಷೇತ್ರದಲ್ಲಿ ಚೀನಾ ಹೊಂದಿರುವ ಪ್ರಾಬಲ್ಯ ಹತ್ತಿಕ್ಕಲು ಆತ್ಮನಿರ್ಭರ ಅಭಿಯಾನ ಕೈಗೊಂಡಿದೆ. […]Read More