ಅಂತಿಮ ಭಾಗ ಮತ್ತೆ ಕಪೋತಕೂಟ ಅರಮನೆ ದೀಪಮಾಲಿಕೆಗಳಿಂದ ಝಗಝಗಿಸುತ್ತಿದೆ. ಮಂಗಳ ವಾದ್ಯಗಳು ಮೊಳಗುತ್ತಿವೆ. ಝಲ್ಲರಿ- ಮುರಳಿ- ಮೃದಂಗಗಳ ಮೃದುಮಧುರ ನಿನಾದ ವಾತಾವರಣದಲ್ಲೆಲ್ಲ ತುಂಬಿದೆ. ನಗರದ ಬೀದಿ ಬೀದಿಗಳಲ್ಲಿ ಗಂಡು ಹೆಣ್ಣುಗಳ ನೃತ್ಯಗೀತಗಳು ಇನ್ನೂ ಕಡಿಮೆಯಾಗಿಲ್ಲ. ಪುರಾತನ ರಾಜಪುತ್ರನಿಗೂ ನೂತನ ರಾಜಕುಮಾರಿಗೂ ಮದುವೆ ಎರಡು ರಾಜ ವಂಶಗಳು ಒಂದಾಗಿವೆ. ರಟ್ಟ ಧರ್ಮಾದಿತ್ಯರು ಅಳಿಯನ ಕೈಗೆ ರಾಜ್ಯಭಾರವನ್ನು ಒಪ್ಪಿಸಿ ಚಿಲ್ಲಕೂಟ ವಿಹಾರದಲ್ಲಿ ಆಶ್ರಯ ಪಡೆದಿದ್ದಾರೆ. ಸಮ್ರಾಟ ಸ್ಕಂದಗುಪ್ತರು ವಧೂವರರಿಗಾಗಿ ಸೇನಾ ಶಿಬಿರದಿಂದ ಐದು ಆನೆಗಳನ್ನು ಕಾಣಿಕೆಯಾಗಿ ಕಳುಹಿಸಿಕೊಟ್ಟಿದ್ದಾರೆ. ವಿಶ್ವಾಸಘಾತಕ ಕಿರಾತ […]Read More
ಕಳೆದ ಸಂಚಿಕೆಯಿಂದ…. ಕಿರಾತ ತನ್ನ ಭವನದಲ್ಲಿಯೇ ಇದ್ದನು. ಅವನು ನಗುನಗುತ್ತ ಚಿತ್ರಕನೊಡನೆ ಮಾತನಾಡಿದನು. ‘ದೂತಮಹಾಶಯರೆ, ತಾವು ವಾಪಸು ಹೋಗಲು ಬಹಳ ಕಾತರರಾಗಿದ್ದೀರಿ. ಆದರೆ ವಿಷಾದ ಸಂಗತಿಯೆಂದರೆ ಧರ್ಮಾದಿತ್ಯರ ಆರೋಗ್ಯ ಮೊದಲಿನಂತೆಯೇ ಯಥಾಸ್ಥಿತಿ. ಯಾವುದೇ ಬದಲಾವಣೆಯಾಗಲೀ ಸುಧಾರಣೆಯಾಗಲೀ ಕಂಡು ಬರುತ್ತಿಲ್ಲ. ತಾವು ಇನ್ನೂ ಒಂದೆರಡು ದಿನ ಇಲ್ಲಿಯೇ ಇರಬೇಕಾಗುತ್ತದೆ. ಚಿತ್ರಕ ಉತ್ತರ ಕೊಡಲಿಲ್ಲ. ಕಿರಾತನನ್ನೇ ದುರುಗುಟ್ಟಿಕೊಂಡು ನೋಡುತ್ತ ಇದ್ದು ಬಿಟ್ಟನು. ಕಿರಾತ- ಒಂದು ವೇಳೆ ತಾವು ಹೋಗಲೇಬೇಕು ಎನ್ನುವುದಾದರೆ ನಾಳೆ ಬೆಳಗ್ಗೆ ಹೋಗಬಹುದು. ಆದರೆ ತಾವು ಇಲ್ಲಿ ಯಾವ […]Read More
ಉಪಸಂಹಾರ ದುರ್ಗದಿಂದ ಸುಮಾರು ಎರಡು ಹರಿದಾರಿ ಉತ್ತರಕ್ಕೆ ಪ್ರಯಾಣ ಮಾಡಿದ ಅಶ್ವಾರೋಹಿಯು ಕುದುರೆಯನ್ನು ನಿಲ್ಲಿಸಿದನು. ಬೆಟ್ಟದ ತಪ್ಪಲು ಇಲ್ಲಿ ಇಕ್ಕಟ್ಟಾಗಿದೆ. ಸುತ್ತಲೂ ಮೇಲೆ ಕೆಳಗೆ ಬಂಡೆ ಕಲ್ಲುಗಳು ಹರಡಿವೆ. ಎಚ್ಚರಿಕೆಯಿಂದ (ಜಾಗರೂಕತೆಯಿಂದ) ಕುದುರೆಯನ್ನು ಓಡಿಸಬೇಕಾಗುತ್ತದೆ. ದಾರಿಯು ವಿಘ್ನ ಪರಂಪರೆಯಿಂದ ಕೂಡಿರುವುದರಿಂದ ಅಶ್ವಾರೋಹಿಯು ಚಂದ್ರೋದಯವಾದ ಮೇಲೆ ಪ್ರಯಾಣ ಹೊರಟಿದ್ದಾನೆ. ಅದೂ ಅಲ್ಲದೆ ಬೆಳದಿಂಗಳಿದ್ದರೂ ವೇಗವಾಗಿ ಕುದುರೆಯನ್ನು ಓಡಿಸುವುದು ಸಾಧ್ಯವಿಲ್ಲ. ಶಬ್ದ ನಿವಾರಣೆಗಾಗಿ ಕುದುರೆಯ ಕಾಲುಗಳಿಗೆ ಬಟ್ಟೆ ಬಿಗಿಯಲಾಗಿದೆ. ಹೀಗಿರುವಾಗ ಕುದುರೆಯು ವೇಗವಾಗಿ ಹೋಗಲು ಹೇಗೆ ಸಾಧ್ಯ! ಅಶ್ವಾರೋಹಿಯು ಹಿಂದಿರುಗಿ […]Read More
ಹಿಂದಿನ ಸಂಚಿಕೆಯಿಂದ…. ಚಿತ್ರಕನು ಮರದ ತೋಪಿಗೆ ಬಂದಾಗ ಸೂರ್ಯಾಸ್ತವಾಗುತ್ತಿತ್ತು. ಗುಲಿಕನಿಗೆ ಎಲ್ಲ ವಿಷಯವನ್ನು ತಿಳಿಸಿದ ಕೂಡಲೆ, ಗುಲಿಕನು ಮೀಸೆಯ ಮೇಲೆ ಕೈಯಾಡಿಸುತ್ತ ‘ಹುಂ ಅಸಭ್ಯ ಬರ್ಬರನಿಗೆ ಯಾವುದೋ ದುರಭಿ ಸಂಧಿ ಇರಬೇಕು. ರಾತ್ರಿಯೆಲ್ಲ ಎಚ್ಚರಿರಬೇಕು. ಅವನು ಅನಿರೀಕ್ಷಿತವಾಗಿ ಆಕ್ರಮಣ ಮಾಡಬಹುದು’ ಎಂದನು. ಕಿರಾತನಲ್ಲಿ ಯಾವುದೋ ದುರಾಲೋಚನೆ ಇದೆ ಎಂದು ಚಿತ್ರಕನಿಗೂ ಸಂದೇಹ ಇದ್ದೇ ಇತ್ತು. ಆದರೆ ಇರುಳಿನಲ್ಲಿ ಆಕ್ರಮಣ ಮಾಡಬಹುದೆಂದು ಅವನಿಗೆ ಅನ್ನಿಸುತ್ತಿಲ್ಲ. ಬೇರೆ ಏನೋ ಉದ್ದೇಶವಿಟ್ಟುಕೊಂಡು ಕಾಲಹರಣ ಮಾಡುತ್ತಿರಬಹುದು. ಆದರೆ ಆ ಉದ್ದೇಶವೇನಿರಬಹುದು? ಚಿತ್ರಕನ ಸೈನ್ಯ […]Read More
ಕಳೆದ ಸಂಚಿಕೆಯಿಂದ… ಒಬ್ಬರನ್ನೊಬ್ಬರು ನೋಡಿದರೂ ಅವರಿಗೆ ಸಂತೋಷವೇನೂ ಆಗಲಿಲ್ಲ. ಕಿರಾತನ ಆಕೃತಿ ಹೂಣರಂತಿರಲಿಲ್ಲ. ಅವನು ದೀರ್ಘಕಾಯನೂ ಸುದರ್ಶನನೂ ಆಗಿದ್ದನು. ಆದರೆ ಅವನ ಕಣ್ಣುಗಳು ಚಿಕ್ಕವು, ಹಾಗೆಯೇ ಕ್ರೂರವಾಗಿದ್ದವು. ‘ನೀನೆ ಏನು ಕಿರಾತನೆಂಬುವನು! ರಟ್ಟಾಳನ್ನು ಆಸೆ ಗಣ್ಣಿನಿಂದ ನೋಡಿದವನು!’ ಎಂದು ಚಿತ್ರಕನು ಮನಸ್ಸಿನಲ್ಲಿ ಅಂದುಕೊಂಡನು. ಕಿರಾತ- ಯಾರು ನೀನು? ಎಲ್ಲಿಂದ ಬಂದಿರುವೆ? ಚಿತ್ರಕ- ಮೊದಲೇ ಹೇಳಿದಂತೆ ನಾನು ಸಮ್ರಾಟ್ ಸ್ಕಂದಗುಪ್ತರ ದೂತ. ಅವರ ಶಿಬಿರದಿಂದ ಬರುತ್ತಿದ್ದೇನೆ. ಕಿರಾತ- (ಸಿಟ್ಟಿನಿಂದ) ಸ್ಕಂದಗುಪ್ತ! ಸ್ಕಂದಗುಪ್ತನಿಗೆ ನನ್ನಿಂದೇನಾಗಬೇಕು? ಚಿತ್ರಕ- ಸಮ್ರಾಟ್ ಸ್ಕಂದಗುಪ್ತರಿಗೆ ನಿನ್ನಿಂದೇನಾಗಬೇಕು […]Read More
ಪರಿಚ್ಛೇದ – 17 ಹೂಣರಕ್ತ ಮೀನಿನಾಕಾರದ ಒಂದು ತಪ್ಪಲಿನಲ್ಲಿ ಚಷ್ಟನ ದುರ್ಗ ಇದ್ದಿತು. ಉತ್ತರ ದಿಕ್ಕಿನಿಂದ ಆರ್ಯಾವರ್ತವನ್ನು ಪ್ರವೇಶಿಸುವ ಕಣಿವೆ ಮಾರ್ಗಗಳಲ್ಲಿ ಇದೂ ಒಂದು. ಆದುದರಿಂದಲೇ ಈ ದುರ್ಗಕ್ಕೆ ವಿಶೇಷ ಸ್ಥಾನವಿದೆ. ಈ ಮಾರ್ಗದಿಂದಲೇ ಹಿಂದಿನ ಕಾಲದಲ್ಲಿ ಯುದ್ಧ ವೀರರು ದಂಡಯಾತ್ರೆ ಮಾಡಲು ಆರ್ಯಭೂಮಿಗೆ ಬಂದಿದ್ದರು, ವ್ಯಾಪಾರ ಮಾಡುವ ಸಲುವಾಗಿ ವಿದೇಶಿ ವ್ಯಾಪಾರಿಗಳು ಬಹುಮೂಲ್ಯ ವಸ್ತುಗಳನ್ನು ತೆಗೆದುಕೊಂಡು ಬಂದು ಹೋಗಿ ಮಾಡುತ್ತಿದ್ದರು. ಚೀನಾ ದೇಶದ ಯಾತ್ರಿಕರು ತೀರ್ಥಯಾತ್ರೆಗಾಗಿ ಬರುತ್ತಿದ್ದರು. ಈ ತಪ್ಪಲಿನ ಪ್ರದೇಶವು ಉತ್ತರ ದಕ್ಷಿಣವಾಗಿ ಐದು […]Read More
ಹಿಂದಿನ ಸಂಚಿಕೆಯಿಂದ…… ಬೆಳಗ್ಗೆ ಸ್ಕಂದಗುಪ್ತನು ಹೊರಗಿನ ಕೊಠಡಿಯೊಳಕ್ಕೆ ಬಂದು ಕುಳಿತನು. ಆಗ ಪಿಪ್ಪಲಿ ಮಿಶ್ರ ಬಂದು ಅವನಿಗೆ ಸ್ವಸ್ತಿವಾಚನ ಮಾಡಿ ‘ವಯಸ್ಯ ನಿನ್ನೆ ರಾತ್ರಿ ದೊಡ್ಡ ಆಪತ್ತಿಗೆ ಒಳಗಾಗಿದ್ದೆ’ ಎಂದನು. ಸ್ಕಂದಗುಪ್ತನು ಬೇರೆ ಏನನ್ನೋ ಯೋಚಿಸುತ್ತಿದ್ದನು. ‘ವಿಪತ್ತೇ’ ಎಂದು ಕೇಳಿದನು. ಪಿಪ್ಪಲಿ – ಶತ್ರುಗಳು ನಾವಿರುವ ಜಾಗವನ್ನು ಪತ್ತೆ ಹಚ್ಚಿದ್ದಾರೆ. ವಯಸ್ಯ, ಇನ್ನು ಈ ಜಾಗ ಸುರಕ್ಷಿತವಲ್ಲ. ಸ್ಕಂದ ತನ್ನ ಸ್ನೇಹಿತನನ್ನು ಚೆನ್ನಾಗಿ ಬಲ್ಲ. ಆದ್ದರಿಂದ ಉದ್ವೇಗಕ್ಕೆ ಒಳಗಾಗಲಿಲ್ಲ. ‘ನಿನ್ನೆ ರಾತ್ರಿ ಏನು ನಡೆಯಿತು’ ಎಂದು ಕೇಳಿದನು. […]Read More
ಪರಿಚ್ಛೇದ – 16ರಮಣಿಯ ಮನಸ್ಸು ಸೈನ್ಯ ಶಿಬಿರ ಇನ್ನೂ ಎಚ್ಚರಗೊಂಡಿಲ್ಲ. ಪೂರ್ವ ದಿಕ್ಕಿನ ಪರ್ವತವು ರೇಖಾಕಾರವಾಗಿ ಕಾಣಿಸುತ್ತಿತ್ತು. ಚಿತ್ರಕ ಹಾಗೂ ಗುಲಿಕವರ್ಮ ನೂರುಜನ ಸಶಸ್ತ್ರ ಅಶ್ವಾರೋಹಿಗಳೊಂದಿಗೆ ಪ್ರಯಾಣ ಬೆಳೆಸಿದ್ದಾರೆ. ನಾಲ್ಕು ದಿಕ್ಕುಗಳ ನಿಸ್ತಬ್ಧತೆಯ ನಡುವೆ ಕುದೆರೆಗಳ ಖುರಪುಟ ಧ್ವನಿ ಹಾಗೂ ಅಸ್ತ್ರಗಳ ಝಣತ್ಕಾರ ಕ್ಷೀಣವಾಗಿ ಕೇಳಿಸುತ್ತಿದೆ. ಸ್ಕಂದಗುಪ್ತನು ಇಳಿದುಕೊಂಡಿದ್ದ ಈ ತಪ್ಪಲಿನ ಕಡೆಯಿಂದ ಹೊರ ಹೋಗುವ ಉತ್ತರ ದಿಕ್ಕಿನ ದಾರಿ. ಅದು ಎರಡು ಗಿರಿಶ್ರೇಣಿಗಳ ನಡುವೆ ಕಾಲುವೆ ಆಕಾರದ ಇಕ್ಕಾಟದ ಕಡಿದಾದ ದಾರಿ. ಎರಡು ಹರಿದಾರಿ. ದೂರದ […]Read More
ಹಿಂದಿನ ಸಂಚಿಕೆಯಿಂದ….. ರಾತ್ರಿ ಊಟವಾದ ಮೇಲೆ, ಮೊದಲ ಯಾಮದಲ್ಲಿಯೇ, ಚಿತ್ರಕನು ರಟ್ಟಾಳನ್ನು ಭೇಟಿ ಮಾಡಲು ಬಂದನು. ಮರುದಿನ ಬೆಳಿಗ್ಗೆ ಪ್ರಯಾಣ ಹೊರಡಬೇಕು. ಕೊಠಡಿಯಲ್ಲಿ ಬೇರೆ ಯಾರು ಇರಲಿಲ್ಲ. ದೀಪದ ಕಂಬದಲ್ಲಿ ಬತ್ತಿಯ ದೀಪ ಉರಿಯುತ್ತಿತ್ತು. ರಟ್ಟಾ ಬಂದು ಚಿತ್ರಕದ ಕೈ ಹಿಡಿದು ಪಕ್ಕದಲ್ಲಿ ನಿಂತು ‘ನಾನು ನಿಮ್ಮ ಜೊತೆ ಬರುವ ಹಾಗಿಲ್ಲ’ ಎಂದಳು. ತಗ್ಗಿದ ದನಿಯಲ್ಲಿ ಮಾತಾಡುತ್ತಿದ್ದಾರೆ. ಚಿತ್ರಕ ‘ಇದೇ ಒಳ್ಳೆಯದು ಇಲ್ಲಿ ನೀನು ಸುರಕ್ಷಿತವಾಗಿರಬಹುದು’ ಎಂದನು. ರಟ್ಟಾ- ನೀವು ಜೊತೆಯಲ್ಲಿ ಇರದಿದ್ದಾಗ ಸುರಕ್ಷತೆ ಎಲ್ಲಿ ಬಂತು? […]Read More
ಹಿಂದಿನ ಸಂಚಿಕೆಯಿಂದ….. ಗುಲಿಕ ವರ್ಮಾ ಒಬ್ಬ ಕನಿಷ್ಠ ಸೇನಾ ನಾಯಕ ಹಾಗೂ ಸ್ಕಂದಗುಪ್ತನ ಪಾರ್ಶ್ವಚರ. ಒಳ್ಳೆಯ ಬಲಶಾಲಿ, ವಿಶಾಲವಾದ ವಕ್ಷಸ್ಥಳ ಬಲಿಷ್ಠವಾದ ಭುಜಗಳು. ಧೂಮಕೇತುವಿನಂಥ ಮೀಸೆ. ಅವನು ಬಂದು ನಮಸ್ಕರಿಸಿ ನಿಂತ ಮೇಲೆ ಸ್ಕಂದಗುಪ್ತನು ‘ಗುಲಿಕ, ಚಷ್ಟನ ದುರ್ಗ ಎಲ್ಲಿದೆ? ಗೊತ್ತಿದೆಯೇ?’ ಎಂದು ಕೇಳಿದನು. ಗುಲಿಕ ವರ್ಮಾ- ಗೊತ್ತು ಆಯುಷ್ಮನ್. ಅದು ವಿಟಂಕ ರಾಜ್ಯದ ಉತ್ತರ ಸೀಮಾಂತದಲ್ಲಿದೆ. ಇಲ್ಲಿಂದ ಸುಮಾರು ಇಪ್ಪತ್ತು ಹರಿದಾರಿ ದೂರದಲ್ಲಿ, ಈಶಾನ್ಯ ದಿಕ್ಕಿನಲ್ಲಿದೆ. ಸ್ಕಂದಗುಪ್ತ- ಕೇಳು. ಚಷ್ಟನ ದುರ್ಗದ ದುರ್ಗಾಧಿಪ ಕಿರಾತನು ವಿಟಂಕದ […]Read More