ಪ್ರತ್ಯಗಾತ್ಮ ಚಿಂತನ ಇಳಿಹೊತ್ತು ಸಂಜೆಯಲಿ ಮಬ್ಬುಗತ್ತಲೆಯಲ್ಲಿಹುಲು ಸರವಿ ಬಿದ್ದಿರಲು ಹುತ್ತವನು ಬಳಸಿಎಲರುಣಿಯ ಭ್ರಮೆ ಬರಲು ಅದನು ಪರಿಕಿಸಬೇಕುಬಳಿಕವೇ ದಿಟದರಿವು !- || ಪ್ರತ್ಯಗಾತ್ಮ || ಬ್ರಹ್ಮನೆಂದರೆ ನಾಲ್ಕು ಮೊಗದ ಬ್ರಹ್ಮನು ಅಲ್ಲಬ್ರಹ್ಮಾಂಡವ್ಯಾಪಿ ಆ ಬ್ರಹ್ಮ ಪರವಸ್ತುಬ್ರಹ್ಮ ಚಿದ್ಘನ ವಸ್ತು; ನಿರ್ಗುಣ, ನಿರಾಕಾರ,ಬ್ರಹ್ಮ ಚೈತನ್ಯವೈ- || ಪ್ರತ್ಯಗಾತ್ಮ || ಬಳ್ಳಿ ಮಿಂಚಿನ ಹೊಳಪು; ಬಣ್ಣ ಬಣ್ಣದ ಮುಗಿಲುಹುಲ್ಲ ಮೇಲಿನ ಹನಿಯು; ಮಳೆಬಿಲ್ಲ ಸೊಬಗುಎಲ್ಲ ಕ್ಷಣ ಭಂಗರವು, ವೈರಾಗ್ಯ ಸಹಕಾರಿಬಲ್ಲ ಜ್ಞಾನಿಯೆ ಬಲ್ಲ ! – || ಪ್ರತ್ಯಗಾತ್ಮ || […]
ಪ್ರತ್ಯಗಾತ್ಮ ಚಿಂತನ ಕಾಲ ಕಾಲಕೆ ಮೋಡ ಮಳೆಯ ಸುರಿಸುತ್ತಿರಲಿಆಗೆಲ್ಲ ಬೆಳೆಯು ಸಾಕಷ್ಟು ಬರಲಿಸಾಲಗಾರನ ಕೈಗೆ ಸಿಲುಕದೆ ಕೃಷೀವಲನಬಾಳು ಹಸನಾಗಿರಲಿ- || ಪ್ರತ್ಯಗಾತ್ಮ || ಜೀವ ಜಂತುಗಳೆಲ್ಲ ಜೀವಿಸಲಿ ಸುಖವಾಗಿದೇವೇಂದ್ರ ವರ್ಷಿಸಲಿ ಕಾಲ ಕಾಲಕ್ಕೆಬೇವೊಂದೆ ಬಾಳಿನಲಿ ಇರದೆ, ಬೆಲ್ಲವೂ ಇರಲಿನೋವಿರದೆ ಸುಖವಿರಲಿ- || ಪ್ರತ್ಯಗಾತ್ಮ || ಮನೆಯ ಅಂಗಳದಲ್ಲಿ ಮಕ್ಕಳಾಡುತಲಿರಲಿಮನೆಯೊಳಗೆ ನಡೆದಿರಲಿ ನಿತ್ಯ ಶುಭಕಾರ್ಯಮನೆ ಮಂದಿ ಅನ್ಯೋನ್ಯ ಭಾವದಲಿ ಬಾಳಿರಲಿಮನೆ ತುಂಬ ನಗುವಿರಲಿ- || ಪ್ರತ್ಯಗಾತ್ಮ || ಎನ್. ಶಿವರಾಮಯ್ಯ (ನೇನಂಶಿ)ವಾಚನ: ಗೌರಿದತ್ತRead More
ಬಗೆಬಗೆಯ ಕರ್ಮಫಲ ಭೋಗಿಪುದು ಜೀವಾತ್ಮಜಗದ ಸುಖ ದುಃಖಗಳ ದ್ವಂದ್ವಕೊಳಗಾಗಿನಗು ಅಳುವಿನಿಂ ದೂರ ಪರಮಾತ್ಮ ನಿರ್ಲಿಪ್ತನಿಗಮ ಸಾರುವುದಿಂತು- || ಪ್ರತ್ಯಗಾತ್ಮ || ಜೇಡಿ ಮಣ್ಣನು ತಂದು ಬಗೆಬಗೆಯ ಬೊಂಬೆಗಳಮಾಡಿರಲು ಇದು ಆನೆ, ಅವು ನಾಯಿ-ಕುದುರೆಕೂಡಿಸಿದರೆಲ್ಲವನು ಮತ್ತೆ ಮಣ್ಣಿನ ಮುದ್ದೆನೋಡು ಒಂದೇ ಸತ್ಯ- || ಪ್ರತ್ಯಗಾತ್ಮ || ಒಂದರಿಂ ಹಲವಾರು ಹಣತೆಗಳ ಹೊತ್ತಿಸಿರೆಒಂದೊಂದು ಬೇರೆಂಬ ಮಾಯೆ ಕವಿಯುವುದುಒಂದೆ ಹಣತೆಯೊಳೆಲ್ಲ ಬತ್ತಿ ಸೇರಿಸೆ ಜ್ಯೋತಿಒಂದೆ ತಾನ್ ಎರಡಿಲ್ಲ- || ಪ್ರತ್ಯಗಾತ್ಮ || ಎಚ್ಚರಾಗುವವರೆಗೂ ದಿಟದಂತೆ ತೋರುವುದುಎಚ್ಚೆತ್ತು ಕಂದೆರೆಯೆ ಕನಸು ಬರಿ ಮಿಥ್ಯೆಎಚ್ಚೆತ್ತ […]Read More
ಶಿಕ್ಷಕನು ಮಕ್ಕಳಿಗೆ ಶಿಕ್ಷಣವ ಕೊಡಬೇಕುಶಿಕ್ಷೆ ಕೊಡುವುದು ಅಲ್ಲ ಶಿಕ್ಷಕನ ಕೆಲಸಶಿಕ್ಷಕನು ತತ್ವವಿದ, ಮಾರ್ಗದರ್ಶಿಯು, ಗೆಳೆಯ,ಮೋಕ್ಷದಾಯಕ ಕಾಣ !- || ಪ್ರತ್ಯಗಾತ್ಮ || ದಕ್ಷತೆಯೆ ಇಲ್ಲದಿಹ ಶಿಕ್ಷಕರ ನೇಮಿಸಲುಲಕ್ಷಾವಧಿಯ ಮುಗ್ಧ ಬಾಲಕರ ಬಾಳುದಿಕ್ಸೂಚಿಯಿಲ್ಲದಿಹ ನೌಕೆಯಂತಾಗುವುದು.ದಿಕ್ಕು ತೋರುವರಾರು?- || ಪ್ರತ್ಯಗಾತ್ಮ ||| ಮನೆ ಬಾಡಿಗೆಗೆ ಕೊಡುವ ಮುನ್ನ ಪರಿಕಿಸಿ ನೋಡುಮನೆ ಬೇಡಿ ಬರುವವನು ಕಾಲಿಗೆರಗುವನುಮನೆ ಕೊಟ್ಟು ಬಳಿಕವನ ಕಾಲ ಹಿಡಿಯುವೆಯೇನು ?ನೆನೆದು ಕೊಡು ಯೋಗ್ಯನಿಗೆ- || ಪ್ರತ್ಯಗಾತ್ಮ || ಬಾಯಿ ಅಬ್ಬರ ಹೆಚ್ಚು ಬಾಡಿಗೆಯ ಹಣ ಕೊಡನುನಾಯಿ ಜೀವನ ನಡೆಸಿ […]Read More
ಹೆಣ್ಣಿನವರಿಗೆ ನೋವು, ಗಂಡಿನವರಿಗೆ ನಲಿವುಹಣ್ಣಾದ ಮುದುಗಣ್ಗಳಿಗೆ ಸೊಂಟ ನೋವುಸಣ್ಣ ಮಕ್ಕಳಿಗಂತು ಅದುವೆ ಸುಖದಾಗರವುಕಣ್ಣಿಟ್ಟು ಕಾಣ್ ಮದುವೆ- || ಪ್ರತ್ಯಗಾತ್ಮ || ಮದು ಮಕ್ಕಳಿಗೆ ತಮ್ಮ ಓಪರನು ಕಾಂಬಾಸೆಮೊದಲು ಊಟದ ಆಸೆ ಬಂದ ನೆಂಟರಿಗೆಮದಿರಾಕ್ಷಿಯರ್ಗೆಲ್ಲ ಮೈಸಿರಿಯ ಮೆರೆವಾಸೆಇದು ಕಣಾ ಮದುವೆ ಮನೆ- || ಪ್ರತ್ಯಗಾತ್ಮ || ಮುದುಕರನು ನೀ ಕಂಡು ಮುದಿಗೊರಡು ಎನ್ನದಿರುಮದುವೆ ಮೊದಲಾದಂಥ ಶುಭ ಕಾರ್ಯಗಳಲಿವಿಧಿ ವಿಧಾನವ ತಿಳಿಸಿ ಮನೆಯ ಮುನ್ನಡೆಸಲಿಕೆಮುದುಕರನುಭವ ಬೇಕು- || ಪ್ರತ್ಯಗಾತ್ಮ || ಮನೆ ಮಂದಿ ಹೊರ ಹೋಗೆ ಮನೆಯ ಕಾಯುವರಲ್ತೆ!ಮನೆಯವರು ನಿದ್ರಿಸಲು […]Read More
ಎರಡು ಜೀವಗಳೊಂದು ಗೂಡುವುದೆ ಪರಿಣಯವುವರದಕ್ಷಿಣೆಯ ಪಿಡುಗು ಇದಕೊಂದು ವಿಘ್ನವರನ ತಾಯ್ ತಂದೆಗಳು ಆತ್ಮ ಶೋಧನೆಗೈಯೆಪರಿಹಾರವಿದಕುಂಟು- || ಪ್ರತ್ಯಗಾತ್ಮ || ಜೀವವೆರಡರ ಮಧುರ ಮಿಲನವಲ್ಲವೆ ಮದುವೆ!ಆ ವಿಚಾರವ ಮರೆಯಲಿನ್ನೇಕೆ ಮದುವೆ?ಆವ ಪುರುಷಾರ್ಥಕ್ಕೆ ವರದಕ್ಷಿಣೆಯ ತೆರುವೆ?ಹೂವಲ್ಲ ಹಾವಾಗು- || ಪ್ರತ್ಯಗಾತ್ಮ || ಹೊಸಗರಿಯ ಚಪ್ಪರವು, ಮಾವಿನೆಲೆ ತೋರಣವುಬಿಸಿಯಾದ ರುಚಿಯಾದ ಭಕ್ಷ್ಯಭೋಜ್ಯಗಳುಒಸಗೆ ವಾದ್ಯದ ಮೊಳಗು, ಪ್ರಸದನದ ಸಡಗರವುರಸಿಕತೆಯ ನೆಲೆ ಮದುವೆ- || ಪ್ರತ್ಯಗಾತ್ಮ || ನೆಂಟರಿಷ್ಟರ ಕೂಟ, ತುಂಟ ಮಕ್ಕಳ ಆಟಸೊಂಟ ತಿರುವುತ ಬರಿದೆ ಹೆಣ್ಗಳೋಡಾಟನೆಂಟತನ ಸೋಗಿನೊಳು ಗಂಟು ಹೊಡೆದವರವೈಕುಂಠವೈ ಮದುವೆ […]Read More
ತಿಳಿದ ಜ್ಞಾನಿಗೆ ಎಲ್ಲ ಗಿಡ ಬಳ್ಳಿ ಔಷಧವುಕಳೆಯ ರೂಪದಿ ಬೆಳೆದ ಮುಳ್ಳುಗಿಡ ಕೂಡಇಳೆಯೊಳಗೆ ಬೆಳೆದಿರುವ ಸಸ್ಯಕೋಟಿಗಳೆಲ್ಲಬೆಲೆಯುಳ್ಳ ಔಷಧವು- || ಪ್ರತ್ಯಗಾತ್ಮ || ಕೆಲವು ಗಿಡಗಳ ಬೇರು ಕೆಲವು ಮರಗಳ ತೊಗಟೆ,ಕೆಲವು ಗಿಡಗಳ ಹೂವು, ಕೆಲವುಗಳ ಕಾಯಿಕೆಲವು ಎಲೆಗಳ ತರಗು, ಕೆಲ ಕೆಲವು ಚಕ್ಕೆಗಳುಹಲವು ಬಗೆ ಔಷಧವು- || ಪ್ರತ್ಯಗಾತ್ಮ || ವರದಕ್ಷಿಣಿಗೆ ಮೂಲ ವರನಲ್ಲ ನಿಜವ ತಿಳಿವರನ ತಾಯಿಯೊ ಮೇಣು ಅಕ್ಕ ತಂಗಿಯರೊಪರಿಪರಿಯ ಪ್ರಾರ್ಥನೆಗೂ ಇವರು ಮಣಿಯರು ಕಾಣಕರುಬುವುದು ಪೆಣ್ಗೆ ಪೆಣ್- || ಪ್ರತ್ಯಗಾತ್ಮ || ತಾನು […]Read More
ಮೂಡಣಕೆ ಮುಖಮಾಡಿ ಜಲಬಾಧೆ ಮಾಡದಿರುಮೂಡುವೆಳನೇಸರನು ಭಕ್ತಿಯಲಿ ನಮಿಸುಗಾಢ ಭಕ್ತಿಯ ಬೆರೆಸಿ ತಾಯ್ ತಂದೆಗಳಿಗೆರಗುಓಡುವುದು ಕಷ್ಟಗಳು- || ಪ್ರತ್ಯಗಾತ್ಮ || ಕೈ ಗೂಡದಿರುವಂಥ ಆಸೆ ಆಕಾಂಕ್ಷೆಗಳುಮೈಗೂಡಿ ಫಲಿಸುವುದು ಇರುಳ ಕನಸಿನಲಿಆಗಾಗ ಮೂಡಿಬಹ ಕನಸು ದೇವನು ಇತ್ತಕೈಗಾಣ್ಕೆ ಎಂದು ತಿಳಿ- || ಪ್ರತ್ಯಗಾತ್ಮ || ಸೊಬಗಿನಲಿ ಸರಿಕಾಣೆ ವಿಶ್ವದಲಿ ಈ ಭುವಿಗೆನಭ ನೀ, ಇನ ಶಶಿಗಳುದಯಾಸ್ತ ಭವ್ಯಅಬುಧಿ ನೀಲಿಯ ಜೊತೆಗೆ ಸಸ್ಯ ಶ್ಯಾಮಲ ವರ್ಣಸುಭಗ ದೃಶ್ಯಾವಳಿಯೊ – || ಪ್ರತ್ಯಗಾತ್ಮ || ವಿಧವಿಧದ ವರ್ಣಗಳ ಪುಷ್ಪಗಳು ನೂರಾರುವಿಧವಿಧ ಸುವಾಸನೆಯ ಕುಸುಮಗಳು […]Read More
ಹುಲಿ-ಚಿರತೆ-ಸಾರಂಗ-ನರಿ-ಕರಡಿ-ಖಡ್ಗಮೃಗಮೊಲ-ಜಿಂಕೆ-ಕಾಡೆಮ್ಮೆ-ಸೀಳ್ನಾಯಿ-ಸಿಂಹಸಲಗ-ವಾನರ-ತೋಳ-ಹಂದಿ-ಮುಂಗುಸಿ-ಕೋಳಿಮಲೆನಾಡಿನೈಸಿರಿಯೊ !- || ಪ್ರತ್ಯಗಾತ್ಮ || ಕಾಡು ಕಾಷ್ಠದ ಗೂಡು, ಔಷಧಿಯ ನೆಲೆವೀಡುಮೂಡು ಮನೆಯಲಿ ಬಳಕೆ ಇದರ ಮರಮುಟ್ಟುನಾಡಿನಾದಾಯಕ್ಕೆ ಕಾಡು ಮೂಲಾಧಾರಕಾಡು ಜೇನಿನ ಗೂಡು- || ಪ್ರತ್ಯಗಾತ್ಮ || ಮುಳ್ಳುಗಿಡ ನೂರಾರು, ಕಳ್ಳಿಗಿಡ ನೂರಾರುಬಳ್ಳಿಗಳು ಎಷ್ಟೊಂದು ಎಣಿಸಿದವರಿಲ್ಲಎಲ್ಲೆಡೆಗೂ ಹಬ್ಬಿರುವ ಗೇಣುದ್ದ ಸಸ್ಯಗಳುಇಲ್ಲೇತಕೆನ್ನದಿರು- || ಪ್ರತ್ಯಗಾತ್ಮ || ಒಂದೊಂದು ಗಿಡ ಒಂದು ಜಾತಿ ಗಿಡಮೂಲಿಕೆಯುಒಂದೊಂದು ಗಿಡ ಒಂದು ರೋಗಾಪಹಾರಿಹಿಂದಿನವರಿದನೆಲ್ಲ ತಿಳಿದೆ `ಆಯುರ್ವೇದ’ವೆಂದರುವನೌಷಧಿಯ- ||| ಪ್ರತ್ಯಗಾತ್ಮ || ಎನ್. ಶಿವರಾಮಯ್ಯ (ನೇನಂಶಿ)ವಾಚನ: ಗೌರಿದತ್ತRead More
ವರಸೆ ಚಳಿ ರೋಗಿಯನು ಮೂಡಣಕೆ ಮುಖಮಾಡಿಅರಿಸಿನದ ಬಟ್ಟೆಯನು ನಾಡಿಯೆಡೆ ಕಟ್ಟುನರನ ಬಲಗೈ ನಾಡಿ, ನಾರಿಯರ ಎಡಗೈಗೆವರಸೆ ಚಳಿ ನಿಲ್ಲುವುದು- || ಪ್ರತ್ಯಗಾತ್ಮ || ಎಂಟೆಂಟು ತುಂಬೆ ಹೂ, ತುಂಬೆ ಶ್ರೀತುಳಸಿ ಎಲೆಎಂಟು ಕರಿ ಮೆಣಸೊಂದು ಬೆಳ್ಳುಳ್ಳಿ ಹಿಲುಕುಒಂಟಿ ವೀಳ್ಯ – ಲವಂಗ ಅರೆದು ನುಂಗಿಸಿ, ಮೇಲೆಗುಟುಕ ನೀರ- || ಪ್ರತ್ಯಗಾತ್ಮ || ಒಂದು ಗಜ್ಜುಗ ಒಡೆದು ಅದರ ಬಿತ್ತವ ತೆಗೆದುಮಂದ ಕಲಗಚ್ಚಿನಲಿ ತೇದು ಹಚ್ಚಿದರೆನೊಂದ ವೃಷಣದ ಊತ ಇಳಿದು ಮೊದಲಂತಹುದುಒಂದೆರಡು ಸಲ ಹಚ್ಚು- || ಪ್ರತ್ಯಗಾತ್ಮ || […]Read More