ವಿವೆರಿಡೀ (Viverridae) ಕುಟುಂಬದ ಕಬ್ಬೆಕ್ಕುಗಳು ಬೆಕ್ಕುಗಳಿಗೆ ಹೋಲಿಕೆ ಕಂಡು ಬಂದರೂ ಮುಂಗುಸಿಗಳಿಗೆ ಹತ್ತಿರದವು, ಉದ್ದ ಶರೀರ ಗಿಡ್ಡ ಕಾಲು, ಪ್ರತಿ ಕಾಲಿಗೆ ಭಾಗಶಃ ಒಳ ಸೇರುವ ಉಗುರುಳ್ಳ ಐದು ಬೆರಳುಗಳಿವೆ, ನೀಳ ತಲೆ ಚೂಪಾದ ಮುಸುಡಿ ಇದೆ, ಇವು ಮಿಶ್ರಹಾರಿಗಳು. ನಮ್ಮ ರಾಜ್ಯದಲ್ಲಿ ಮೂರು ಜಾತಿಯ ಕಬ್ಬೆಕ್ಕುಗಳನ್ನು ನೋಡಬಹುದು. ಇಂಗ್ಲೀಷಿನಲ್ಲಿ ಇವಕ್ಕೆ ‘Civet‘ ಎಂದು ಕರೆಯುತ್ತಾರೆ. 1) ಸಾಮಾನ್ಯ ಕಬ್ಬೆಕ್ಕು: ‘Asian palm civet‘ ಇದು ರಾಜ್ಯದೆಲ್ಲೆಡೆ ಕಂಡುಬರುತ್ತದೆ, ಮರ ಹಾಗು ನೆಲ ವಾಸಿ, ಮಿಶ್ರಹಾರಿ, ಸಾಮಾನ್ಯ […]
Feature post
“…ಸಾವಿಗೆ ಆತುರ! ಹದ್ದಿನಂತೆ ಬಂದು ಹಾರಿಸಿಕೊಂಡು ಹೋಯಿತು!” ಎಂಬುದು ನಮ್ಮ ಸಾಹಿತ್ಯದಲ್ಲಿ ಆಗಾಗ್ಗೆ ಕಂಡುಬರುತ್ತದೆ. ಹದ್ದು ಅಂತಹ ಶುಭದ ಸಂಕೇತವೇನೂ ಅಲ್ಲ. ಆದರೆ, ವಿಜ್ಞಾನದ-ಪರಿಸರದ ದೃಷ್ಟಿಯಿಂದ ಯಾವುದೂ ಮೇಲಲ್ಲ, ಕೀಳಲ್ಲ. ಎಲ್ಲಕ್ಕೂ ಅದರದೇ ಆದ, ಯುಕ್ತವಾದ ಸ್ಥಾನವಿರುತ್ತದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಸಾವಿರ ಸಾವಿರ ಅಥವಾ ಲಕ್ಷದ ಸಂಖ್ಯೆಯಲ್ಲಿ ಕಂಡುಬರುವ ಹಕ್ಕಿ ಹದ್ದು! ಆದರೆ, ಇದರ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂಬ ಆತಂಕಕಾರಿ ಸುದ್ದಿ ಬರುತ್ತಿದೆ. ಇರಲಿ, ಹದ್ದು ನಮ್ಮ ಬಹು ಸಾಮಾನ್ಯವಾದ ಮಧ್ಯಮಗಾತ್ರದ ಹಕ್ಕಿ. ಮಾಸಲು ಕಂದು […]Read More
ಗರುಡ ಎಂದ ಕೂಡಲೆ ನಮ್ಮಲ್ಲಿ ಅನೇಕರಿಗೆ ಹಿರಿಯರು ಆಕಾಶದಲ್ಲಿ ಗರುಡ ಕಂಡ ಕೂಡಲೆ ಕೈಗಳ ಬೆರಳುಗಳನ್ನು ವಿಶಿಷ್ಟವಾಗಿ ಒಳಸೇರಿಸಿಕೊಂಡು ಕೈಮುಗಿಯುವ ದೃಶ್ಯ ಕಣ್ಣಮುಂದೆ ಬರಬಹುದು. ಇದು ನಮ್ಮ ಸಂಸ್ಕೃತಿಯಲ್ಲಿ ಹೇಗೆ ಬೆಸೆದಿಕೊಂಡಿದೆ ಎಂಬುದರ ದ್ಯೋತಕವಿದು. ಇದಕ್ಕೂ ಗರುಡಪುರಾಣ ಎಂಬ ಗ್ರಂಥಕ್ಕೂ ಸಂಬಂಧವಿಲ್ಲ. ವಿಷ್ಣುವಿನ ವಾಹನವೆಂಬ ನಂಬಿಕೆ ಆಳವಾಗಿ ಬೇರೂರಿದೆ. ಇದನ್ನು ಕಾಣುವುದು ವಿಷ್ಣುವನ್ನು ಕಂಡಷ್ಟೇ ಪುಣ್ಯವೆಂಬ ನಂಬಿಕೆಯೂ ಇದೆ. ಇಂತಹ ಧಾರ್ಮಿಕ ನಂಬಿಕೆಗಳು ಭಾರತದಲ್ಲಿ ಮಾತ್ರವಲ್ಲ ಈ ಹಕ್ಕಿ ಕಂಡುಬರುವ ಏಷ್ಯಾದ ರಾಷ್ಟ್ರಗಳಲ್ಲೆಲ್ಲಾ ಕಂಡುಬರುತ್ತದೆ. ಆಕಾಶದಲ್ಲಿ ಎತ್ತರದಲ್ಲಿ […]Read More
ಅರೇ! ಯಾವುದೋ ಔಷಧದ ಹೆಸರಿನಂತಿರುವ ಇದು ಹಕ್ಕಿಯೇ ಎಂದು ನಿಮಗನ್ನಿಸಬಹುದು! ಹೌದು ಇದು ಹಕ್ಕಿಯೇ! ನಮ್ಮಲ್ಲಿನ ಅತಿ ಮುದ್ದಾದ ಹಕ್ಕಿಗಳಲ್ಲಿ ಒಂದು ಈ ಪ್ರಾಟಿನ್ಕೋಲ್. ಕನ್ನಡದಲ್ಲಿ ಇವನ್ನು ಚಿಟವ ಎಂದು ಕರೆಯುತ್ತಾರೆ. ಕವಲುಬಾಲದ ಚಿಟವ, ಸಣ್ಣ ಚಿಟವ ಇತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಸಾಮಾನ್ಯವಾಗಿ ನೀರಿನಾಸರೆಗಳ ಸಮೀಪ ಕಂಡುಬರುವ ಇವು ಕಲ್ಲು, ಮರಳಿನ ಭೂಭಾಗದೊಂದಿಗೆ ಸೇರಿಹೋಗುವಂತಹ ಗರಿಹೊದಿಕೆಯನ್ನು ಹೊಂದಿದೆ. ಗುಬ್ಬಿ ಮತ್ತು ಮೈನಾದ ನಡುವಿನ ಗಾತ್ರದ ಪುಟ್ಟಕಾಲು ಮತ್ತು ಪುಟ್ಟ ಕೊಕ್ಕಿನ ಹಕ್ಕಿ. ಭಾರತದಾದ್ಯಂತ ಮತ್ತು ಪಾಕಿಸ್ಥಾನ, ನೇಪಾಳ, […]Read More
ಚಳಿಗಾಲದ ಸುಖಗಳಲ್ಲಿ ವಲಸೆ ಬರುವ ಇಂತಹ ಹಕ್ಕಿಗಳನ್ನು ನೋಡುವುದೂ ಒಂದು. ಕರಾರುವಾಕ್ಕಾಗಿ ಅದೇ ಪ್ರದೇಶಕ್ಕೆ ಬರುವ ಇವು ಸಂತೋಷ ತರುವುದಲ್ಲದೆ ಇವು ಬರುವುದು ನಿಲ್ಲುವಷ್ಟು ವಾತಾವರಣ ಕೆಟ್ಟಿಲ್ಲ ಎಂಬ ಭರವಸೆಯನ್ನೂ ಮೂಡಿಸುತ್ತವೆ. ಮೊನಾರ್ಚ್ ಬ್ಲೂ (Black-naped Monarch Hypothymis azurea) ಎಂದು ಇಂಗ್ಲಿಷಿನಲ್ಲಿ ಕರೆಯಲಾಗುವ ಇದು ನಮ್ಮ ಸುಂದರ ನೊಣ ಹಿಡುಕಗಳಲ್ಲಿ ಒಂದು (ಹಕ್ಕಿಗಳಲ್ಲಿ ಎಲ್ಲವೂ ಸುಂದರವೇ!). ಜೀವಿಗಳನ್ನು ಸುಂದರ/ಇಲ್ಲ ಎಂದು ಎಣಿಸುವುದು ಮನುಷ್ಯನ ದೌರ್ಬಲ್ಯ. ಇರಲಿ. ಈ ನೀಲಿ ಬಣ್ಣದ ಹಕ್ಕಿಗೆ ಕಪ್ಪು ನೆತ್ತಿ ಒಂದು ಮೆರುಗನ್ನು […]Read More
ಕಳೆದ ಬಾರಿ ಜಗತ್ತಿನ ನಾನಾ ಭಾಗಗಳಲ್ಲಿ ಗೂಬೆಯನ್ನು ಅಪಶಕುನದ ದ್ಯೋತಕವಾಗಿಯೂ ಜ್ಞಾನದ ದ್ಯೋತಕವಾಗಿಯೂ ಕಾಣುವುದನ್ನು ನೋಡಿದ್ದೇವೆ. ಈ ಬಾರಿ ಈ ಪ್ರವೃತ್ತಿ ಕೇವಲ ಜನಸಾಮಾನ್ಯರಲ್ಲಿ ಮಾತ್ರವಲ್ಲ ಸಾಹಿತಿಗಳ, ಕಲಾವಿದರ ಕೃತಿಗಳಲ್ಲಿಯೂ ಇದು ಹಾಗೇ ಎಂಬುದನ್ನು ನೋಡೋಣ. ಜಗತ್ತಿನ ಮಹಾನ್ ಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿನ ಕೊನೆಯ ಅಂಕ ದುರ್ಯೋಧನ ಕೊನೆಯ ಘಳಿಗೆಗಳನ್ನು ಎಣಿಸುತ್ತಿರುವಾಗ ಅಶ್ವತ್ಥಾಮ “ಪಾಂಡವರೈವರ ತಲೆಗಳನ್ನು ತರಿದು ತರುವೆ” ಎಂದು ಮಧ್ಯರಾತ್ರಿ ಅವರ ಪಾಳಯಕ್ಕೆ ಹೋಗುವುದನ್ನು ವಿವರಿಸುವಾಗ ವ್ಯಾಸ ಮಹರ್ಷಿಗಳು ಅಶ್ವತ್ಥಾಮ ಗೂಬೆಯನ್ನು ಕಂಡ […]Read More
ತಿಂಗಳ ಕೊನೆ ದಿವಸದ ಆಫೀಸ್ ಕೆಲಸದ ಒತ್ತಡ, ಮನೆಯಿಂದ ಡಬ್ಬಿ ಬೇರೆ ತಂದಿರಲಿಲ್ಲ. ಸುಹಾಸ್ ಹಾಗು ಮೇಘನಾಳ ಜೊತೆ ಜೋಳದ ರೊಟ್ಟಿ ಊಟಕ್ಕೆ ಅಂತ ಹೊರಟಿದ್ದೆವು. ಇದ್ದಕಿದ್ದಂತೆ ಸುಹಾಸ್ ನಿಂತಿದ್ದ ಕಾರ್ ಒಂದರ ಬಳಿ ಬಗ್ಗಿ ಏನನ್ನೋ ಎತ್ತಿಕೊಂಡ. ಏನು ಅಂತ ನೋಡಿದರೆ ಪುಟ್ಟ ಹಸಿರು ಬಣ್ಣದ ಹಕ್ಕಿ ಮರಿ. ಸುಹಾಸ್ ಹಕ್ಕಿಯನ್ನು ಪರಿಶೀಲಿಸಿ ಸರ್ ಕಾಲು ಸೊಟ್ಟಗಾಗಿದೆ, ರೆಕ್ಕೆಗೆ ಏನು ಆಗಿಲ್ಲ ಎಂದ. ನಾನು ಸಹ ದಿಟ್ಟಿಸಿ ನೋಡಿದೆ ಹೌದು ಅದರ ಕಾಲು ತಿರಿಚಿಕೊಂಡಿತ್ತು. ಬಳಿಯಲ್ಲಿದ್ದ […]Read More
ಏಯ್! ಗೂಬೆ! ಹೀಗೆ ಬೈಸಿಕೊಳ್ಳದವರೇ ಅಪರೂಪ, ನಮ್ಮ ದೇಶದಲ್ಲಿ. ಅತಿ ದೊಡ್ಡ ದಡ್ಡ ಎಂದರೆ ಅವನು ಗೂಬೆಯೇ! ಕಳಂಕಕ್ಕೂ ಗೂಬೆ ಎಂದೇ ಹೆಸರು. ನಮ್ ತಲೆ ಮೇಲೆ ಗೂಬೆ ಕೂರಿಸಬೇಡಿ ಎನ್ನುವಲ್ಲಿ ಇದೇ ಭಾವ. ಗೂಬೆ ಇದ್ದಹಾಗೆ ಇದಾನೆ ಎನ್ನುತ್ತಾ ಇದಕ್ಕೆ ರೂಪಕಾಲಂಕಾರದ ಪ್ರಯೋಗವೂ ನಡೆಯುತ್ತದೆ. ಹೀಗೆ ಸಾಕಷ್ಟು ಹೇಳುತ್ತಾ ಹೋಗಬಹುದು. ಹಾಗಾದರೆ, ಒಟ್ಟಾರೆ ಅಭಿಪ್ರಾಯವೇನು? ಗೂಬೆ ಎಂದರೆ ಕೆಟ್ಟದ್ದು, ಅನಿಷ್ಟ ಎಂದೆ? ಹಾಗೇನೂ ಇಲ್ಲ! ಈ ಗೂಬೆ ಲಕ್ಷ್ಮಿಯ ವಾಹನ! ಇದನ್ನು ನೋಡುವುದು ಅದೃಷ್ಟವನ್ನು ಕಂಡಂತೆ! […]Read More
ಕೈರಾತ! ಇದು ಹಕ್ಕಿಯ ಕನ್ನಡದ್ದೇ ಹೆಸರಾದರೂ ಬಹುತೇಕರು ಕೇಳಿಲ್ಲ. ಇಂಗ್ಲಿಷಿನಲ್ಲಿ ಮಲ್ಕೊಹ (Malkoha) ಎನ್ನುತ್ತಾರೆ. ಹಿಂದೆ ನಾವು ಪರಪುಟ್ಟಹಕ್ಕಿ ಕೋಗಿಲೆ ಬಗ್ಗೆ ತಿಳಿದುಕೊಳ್ಳುವಾಗ ಬೇರೆ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆಯಿಡುವ ಪರತಂತ್ರಹಕ್ಕಿಗಳನ್ನು ಕುರಿತಾಗಿ ತಿಳಿದಿದ್ದೆವು. ಇತರ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆಯಿಡುವ ಕೋಗಿಲೆಯಂತಹ ಕುಕ್ಕು ಹಕ್ಕಿಗಳು ಪರತಂತ್ರಹಕ್ಕಿಗಳಾದರೆ, ಗೂಡು ಕಟ್ಟುವ ಕೈರಾತಗಳು ಪರತಂತ್ರವಲ್ಲದ ಕುಕ್ಕು ಹಕ್ಕಿಗಳು. ದಕ್ಷಿಣ ಏಷ್ಯಾದಲ್ಲಿ ನಾಲ್ಕು ಬಗೆಯ ಕೈರಾತಗಳು ಕಂಡುಬರುತ್ತವೆ. ಕೆಂಗಂದು ಕೈರಾತ (ಸಿರ್ಕೀರ್ ಮಲ್ಕೋಹ, Sirkeer Malkoha Taccocua leschenaultii ) ಹೊರತುಪಡಿಸಿ ಉಳಿದವು ಮರವಾಸಿಗಳು. […]Read More
ಮಕರಂದವ ಕುಡಿವ ಈ ಬೆಟ್ಟುದ್ದ ಹಕ್ಕಿಗಳು! ತಾಳಿ ತಾಳಿ ಬೆಟ್ಟುದ್ದ ಹಕ್ಕಿಗಳು ಎಂದ ಕೂಡಲೆ ಹಮ್ಮಿಂಗ್ ಹಕ್ಕಿಗಳು ಎಂದುಕೊಳ್ಳ ಬೇಡಿ! ಹಮ್ಮಿಂಗ್ ಹಕ್ಕಿಗಳು ಭಾರತದಲ್ಲಿ ಇಲ್ಲ. ದಕ್ಷಿಣ ಅಮೇರಿಕಾದಲ್ಲಿ ಕಂಡುಬರುತ್ತವೆ. ನಮ್ಮ ದೇಶದಲ್ಲಿ ಕಂಡುಬರುವ ಪುಟ್ಟಹಕ್ಕಿಗಳು ಹಲವಾರು ಇವೆ, ಸೂರಕ್ಕಿಗಳು, ಹೂ ಕುಟುಕಗಳು, ಜೇಡಹಿಡುಕಗಳು ಹೀಗೆ. ಇಂದು ನಾವು ಕೇವಲ ಸೂರಕ್ಕಿಗಳನ್ನು ಕುರಿತು ತಿಳಿಯೋಣ. ಇವು ಪುಟ್ಟಗಾತ್ರದ ಆದರೆ ತುಸು ಬಾಗಿದ, ಉದ್ದವಾದ ಕೊಕ್ಕಿರುವ ಹಕ್ಕಿಗಳು. ಈ ರೂಪದ ಕೊಕ್ಕು ಇವಕ್ಕೆ ಹೂವಿನ ತಳಭಾಗವನ್ನು ತಲುಪಿ ಮಕರಂದ […]Read More