ಗಿಳಿ ಗೊರವಂಕಗಳಂತೆ ಬಾಳಿದರು ಎಂದು ನಾವು ಸಾಮಾನ್ಯವಾಗಿ ಹಿಂದಿನ ಸಾಹಿತ್ಯದಲ್ಲಿ ನೋಡುತ್ತೇವೆ. ಇದು ಗಿಳಿಗಳು ಹಾಗೂ ಗೊರವಂಕಗಳು ಒಟ್ಟಿಗೆ ಜೀವಿಸುವುದನ್ನು ನೋಡಿ ಬೆಳೆದುಬಂದಿರುವ ನುಡಿಗಟ್ಟು. ಈ ಎರಡೂ ಪ್ರಭೇದದ ಹಕ್ಕಿಗಳು ಸಾಮಾನ್ಯವಾಗಿ ಒಟ್ಟೊಟ್ಟಾಗಿರುವುದರಿಂದಲೂ ಹಾಗೂ ಒಂದೇ ಸಂಗಾತಿಗೆ ಅಂಟಿಕೊಂಡಿರುವುದರಿಂದಲೂ ಈ ಮಾತು ಬಂದಿರಬೇಕು. ಇಂದಿನ ಅಂಕಣದಲ್ಲಿ ಕೇವಲ ಗೊರವಂಕಗಳನ್ನು ಮಾತ್ರ ಪರಿಗಣಿಸಲಾಗಿದೆ. ಗೊರವಂಕಗಳನ್ನು ಮೈನಾಗಳೆಂದೂ ಕರೆಯುತ್ತಾರೆ ಮತ್ತು ಈ ಹೆಸರೇ ನಗರ ಪ್ರದೇಶಗಳಲ್ಲಿ ಹಾಗೂ ನಗರ ಪ್ರದೇಶಗಳಿಂದ ಬಂದ ಜನರಲ್ಲಿ ಹೆಚ್ಚು ಪ್ರಚಲಿತವಾಗಿದೆ. ಇವುಗಳಲ್ಲಿಯೂ ಅನೇಕ ಪ್ರಭೇದಗಳಿವೆ. […]
Feature post
ಮಹಾಕವಿಯ ಚೇತನಕ್ಕೊಂದು ಮಂತ್ರ! – ಕುಟುರ Barbet – Psilopogon viridis ಕುಟುರ್…ಕುಟುರ್….ಕುಟುರ್… ಕೇಳಿದೊಡನೆಯೇ ಕುವೆಂಪು ಭಾವಪರವಶರಾಗುತ್ತಿದ್ದರಂತೆ. ಅವರ ಸುಪುತ್ರ ಏಕೆಂದು ಕೇಳಿದರೆ, “ಕುಟುರನ ಹಕ್ಕಿಯ ಕೂಗು ಕೇಳಿದೊಡನೆಯೇ ನನ್ನ ಚೇತನ ಈ ಊರಿನ ಸದ್ದು ಗೊಂದಲಗಳಿಂದ ಪಾರಾಗಿ ಮಲೆನಾಡಿನ ವಿಸ್ತಾರವಾದ ಕಾಡಿಗೆ ಸ್ಥಳಾಂತರಗೊಳ್ಳುತ್ತದೆ. ನಿಮಗೆಲ್ಲ ಅದೊಂದು ಹಕ್ಕಿಯ ಕೂಗಾದರೆ, ನನಗೆ ಅದೊಂದು ಮಂತ್ರ!” ಎಂದರಂತೆ. ಆ ಹಕ್ಕಿಯೇ ಬಿಳಿ ಕೆನ್ನೆಯ ಕುಟುರ. ಸೊಪ್ಪುಕುಟಿರ, ಕುಟಿರ ಎಂದೆಲ್ಲ ಕರೆಸಿಕೊಳ್ಳುವ ಹಕ್ಕಿ ನಮ್ಮಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳಲ್ಲಿ ಒಂದು. […]Read More
ಗಿಣಿಯು ಪಂಜರದೊಳಿಲ್ಲಾ, ರಾಮ ರಾಮಾ ಎಂಬ ದಾಸರ ಪದವನ್ನು ನಾವೆಲ್ಲರೂ ಕೇಳಿರುತ್ತೇವೆ. ಒಬ್ಬ ಸಂತನ ಮತ್ತು ಕಟುಕನ ಮನೆಯಲ್ಲಿ ಬೆಳೆದ ಒಂದೇ ಗಿಣಿಯ ಎರಡು ಮರಿಗಳು ಮುಂದೆ ಏನಾದವು ಎಂಬುದು ನಮಗೆ ತಿಳಿದೇ ಇದೆ. ಮದುವೆಗೆ ಮೊದಲು ಹುಡುಗಿಗೆ ಗಿಣಿಯಂತೆ ಮಾತಾಡುತ್ತೀಯಲ್ಲೇ ಎಂದವರು ಮುಂದೆ “ಗಿಣಿ ತರ ಮಾತಾಡ್ಬೇಡ ನೀನು ಎಂದಿರುತ್ತೇವೆ!” ಗಿಣಿ ಭವಿಷ್ಯ ಕೇಳಿರುವುದೂ ಉಂಟು! ಗಿಣಿಯ ಪ್ರಸ್ತಾಪವಿರುವ ಪ್ರಣಯ ಗೀತೆಗಳು ಕಡಿಮೆ ಇವೆಯೇ! (ಪಂಚರಂಗಿ!) ರಾಮ ರಾಮ! ಇವೆಲ್ಲಾ ಏನೇ ಇರಲಿ, ಗಿಣಿ ಸಾಮಾನ್ಯವಾಗಿ […]Read More
ಪಕ್ಷಿಲೋಕ – 1 ಕಾಗೆಗಳು “…ಅನ್ನದಲ್ಲಿ ಕೂತ ಕಾಗೆ ತನ್ನ ಬಳಗವನ್ನೆಲ್ಲಾ ಕರೆಯುತ್ತದೆ!” ಈ ಮಾತನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ. ಒಳ್ಳೆಯದಕ್ಕೂ ಕೆಟ್ಟದಕ್ಕೂ ಇದನ್ನು ಒಪ್ಪವಿಡುತ್ತೇವೆ. “ಅವನು ಬದುಕಿದ್ದಾಗ ಒಬ್ಬರಿಗೆ ಕೈಯೆತ್ತಿ ಒಂದು ಕಾಸು ಕೊಡಲಿಲ್ಲ, ಅವನ ಪಿಂಡದಲ್ಲಿ ಕೂತ ಕಾಗೆ ತನ್ನ ಬಳಗವನ್ನೆಲ್ಲ ಕರೀತು ನೋಡಿ ಎಂದು”. ಹಾಗೆಯೇ “…ಇದನ್ನ ಮಾಡ್ದೆ ಇದ್ರೆ ಅವಗೆ ಕಾಕಿಪಿಂಡ ಆಗಂಗಿಲ್ಲ!” ಎಂಬುದೂ ಒಂದು ಮಾತು! ಅದನ್ನು ಅವನು ಮಾಡೇ ಮಾಡುತ್ತಾನೆ ಎಂಬುದು ಅರ್ಥ. ಒಟ್ಟಾರೆ, ನಮ್ಮ ಸಂಸ್ಕೃತಿಯಲ್ಲಿ […]Read More
ಕೋಗಿಲೆ ಎಂದ ಕೂಡಲೆ ನಮ್ಮ ಮನಸ್ಸಿಗೆ ಬರುವುದು ಮೂರು. “ವಸಂತಕಾಲ, ಮಧುರ ಕಂಠ ಮತ್ತು ಪರಪುಟ್ಟ”. ಸದ್ಯ ನಾವು ಅದೇ ಕಾಲದಲ್ಲಿಯೇ ಇದ್ದೇವೆ. ಮೊದಲೆರೆಡನ್ನು ಬಿಟ್ಟು ಮೂರನೆಯದನ್ನು ಕುರಿತಾಗಿ ತಿಳಿದುಕೊಳ್ಳೋಣ. ಗಂಡು ಕೋಗಿಲೆ ಹೆಣ್ಣು ಕೋಗಿಲೆ ಮರಿ ಕೋಗಿಲೆ ಕೋಗಿಲೆ ಗೂಡುಕಟ್ಟುವುದಿಲ್ಲ, ಬದಲಿಗೆ ಕಾಗೆಯ ಗೂಡಿನಲ್ಲಿ ಮೊಟ್ಟೆಯಿಡುತ್ತದೆ. ಕಾಗೆ ಇದರ ಮೊಟ್ಟೆಗೆ ಕಾವುಕೊಟ್ಟು ಮರಿಮಾಡಿ ಸಾಕುತ್ತದೆ ಎಂಬುದನ್ನು ನಮ್ಮ ಪೂರ್ವೀಕರು ಗಮನವಿಟ್ಟು ನೋಡಿ ತಿಳಿದುಕೊಂಡಿದ್ದರು. ಅದರಿಂದಲೇ ಕೋಗಿಲೆಗೆ ಪರಪುಟ್ಟ ಎಂಬ ಹೆಸರು. ಕೋಗಿಲೆ ಸೋಮಾರಿ ಎಂದಾಯಿತು! ಆದರೆ, […]Read More
ಗಲಾಟೆ ಗುಬ್ಬಿ ಗುಬ್ಬಿಗಳಿಲ್ಲದ ಮನೆಯನ್ನು ಊಹಿಸಲು ಸಾಧ್ಯವೇ? ನಮ್ಮ ಅಜ್ಜಿಯ ಮನೆಯ ಪಡಸಾಲೆಯ ತುಂಬಾ ಹಾಗಾಗ ನಾನಾ ತರಹದ ಕಾಳುಗಳು, ಅಕ್ಕಿ ನುಚ್ಚು ಹಾಗೂ ಒಮ್ಮೊಮ್ಮೆ ಗೋದಿ ಕಾಳುಗಳನ್ನು ಒಣಗಲು ಹಾಕುತಿದ್ದಾಗ ಈ ಗುಬ್ಬಿಗಳು ತಮ್ಮ ಸೈನ್ಯದ ಸಮೇತ ದಾಳಿ ಇಡುತಿದ್ದವು. ಚಿಇಂಕ್-ಚಿಇಂಕ್ ಎಂದು ಎಡೆಬಿಡದೆ ಸದ್ದು ಮಾಡಿ ಕಾಳುಗಳನ್ನು ಹಾರಿಸಿಕೊಂಡೋಗುತಿದ್ದವು. ಅದೇನು ಸದ್ದು ಅವುಗಳದ್ದು, ಅಬ್ಬಬಾ ಆದರು ಇವುಗಳ ಸದ್ದು ಮನುಷ್ಯರ ಹಾಗೂ ವಾಹನದ ಸದ್ದಿನಷ್ಟು ಕಿರಿಕಿರಿಯೇನಲ್ಲ. ನಮ್ಮ ಅಜ್ಜಿಯ ಊರುಗೋಲಿನ ಸದ್ದು ಅವುಗಳನ್ನು ಕೆಲಕಾಲ […]Read More
ಮಯೂರ ನಮ್ಮ ರಾಷ್ಟ್ರಪಕ್ಷಿ ‘ಮುಗಿಲನು ಮುದ್ದಿಡೆ ನೆಲದ ಬೆಳೆ ಚಿಗಿವುದು, ಜಿಗಿವುದು ನೆಗೆವುದಿಳೆ; ಚಿಕ್ಕೆ ಇರುಳು ಕುಣಿದಂತೆ ಕುಣೀ ಕುಣಿ ಕುಣಿ ನವಿಲೇ ಕುಣೀ ಕುಣೀ’ ಡಾ|| ದ ರಾ ಬೇಂದ್ರೆ ನಮ್ಮ ರಾಷ್ಟ್ರ ಪಕ್ಷಿ ನವಿಲಿನ ಬಗ್ಗೆ ನಮ್ಮ ವರಕವಿ ಬೇಂದ್ರೆಯವರ ಸಾಲು. ಇತ್ತೀಚೆಗೆ ನಮ್ಮ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ನವಿಲಿನ ಜೊತೆಗಿರುವ ಚಿತ್ರಗಳು ಎಲ್ಲಾ ಮಾಧ್ಯಮದಲ್ಲೂ ಬಂದಾಗ ಅದೆಷ್ಟೋ ಜನರು ರೋಮಾಂಚಿತಗೊಂಡರು. ರಾಷ್ಟ್ರನಾಯಕನಾಗಿ ರಾಷ್ಟ್ರಪಕ್ಷಿಯ ಬಗ್ಗೆ ಅರಿವು ಮೂಡಿಸಲೆಂದೇ ಈ ಚಿತ್ರಗಳು ಬಂದದ್ದು […]Read More