UTI -ಮೂತ್ರನಾಳದ ಸೋಂಕು

UTI -ಮೂತ್ರನಾಳದ ಸೋಂಕು

ಈ ಸೋಂಕು ಮೂತ್ರಪಿಂಡಗಳು, ಮೂತ್ರಕೋಶ ಮತ್ತು ಮೂತ್ರನಾಳವನ್ನು ಬಾಧಿಸುತ್ತದೆ.
ಈ ದಿನಗಳಲ್ಲಿ ಇದೊಂದು ಸಾಮಾನ್ಯ ಸೋಂಕಾಗಿದ್ದು, ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಮೂತ್ರನಾಳದ ಸೋಂಕಿಗೆ ಕಾರಣಗಳು

ಇ-ಕೊಲೈ ಬ್ಯಾಕ್ಟೀರಿಯಾದಾ ಸೋಂಕು
ಕಡಿಮೆ ನೀರು ಕುಡಿಯುವುದು
ನೀರನ್ನೇ ಕುಡಿಯದೆ ಇರುವುದು,
ಅತಿಯಾದ ಹುಳಿಯುಕ್ತ, ಮಸಾಲೆಯುಕ್ತ ಪದಾರ್ಥ ಸೇವನೆ, ಹೆಚ್ಚು ಸಕ್ಕರೆ ಇರುವ ಆಹಾರ ಸೇವನೆ
ಕಾರ್ಬೊನೇಟೆಡ್ ಪಾನೀಯಗಳು,
ಕಾಫಿ, ಚಾಕೊಲೇಟುಗಳನ್ನು ಅತಿಯಾಗಿ ತಿನ್ನುವುದು,
ಅಸುರಕ್ಷಿತ ಲೈಂಗಿಕ ಕ್ರಿಯೆ,
ಶುಚಿಯಿಲ್ಲದ ಶೌಚಾಲಯದ ಬಳಕೆ,
ಲೈಂಗಿಕ ಕ್ರಿಯೆಯ ಸಮಯದಲ್ಲಿ ಕೀಟಾಣುಗಳು ಮೂತ್ರನಾಳಕ್ಕೆ ಹೋದಾಗ ಮೂತ್ರನಾಳದ ಸೋಂಕು ಉಂಟಾಗುತ್ತದೆ.

ಹಾರ್ಮೋನ್ ಬದಲಾವಣೆಗಳು,
ಮೂತ್ರಪಿಂಡದ ಕಲ್ಲುಗಳು
ಬೆನ್ನುಹುರಿಯ ಗಾಯದಂತಹ
Catheter ಬಳಕೆ ಕೂಡ ಸೋಂಕು ತರುವ ಸಾಧ್ಯತೆ ಇದೆ
ಮೂತ್ರನಾಳದ ಅಸಹಜತೆಗಳು
ಕೆಲವು ಜನನ ನಿಯಂತ್ರಣ ಸಾಧನಗಳು ಕೂಡ ಸೋಂಕುಂಟು ಮಾಡಬಹುದು.
ಗರ್ಭಾವಸ್ಥೆ ಸಹ ಮೂತ್ರನಾಳದ ಸೋಂಕಿಗೆ ಕಾರಣವಾಗುತ್ತವೆ. ಡಯಾಬಿಟಿಸ್‍ ಇರುವ ಮಹಿಳೆಯರು ಮತ್ತು ಪುರುಷರು ಮೂತ್ರನಾಳದ ಸೋಂಕಿಗೆ ಒಳಗಾಗಬಹುದು. ಏಕೆಂದರೆ ಅವರಲ್ಲಿ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. 

ಮೂತ್ರನಾಳದ ಸೋಂಕಿನ ಲಕ್ಷಣಗಳು

ಪದೇ ಪದೇ ಮೂತ್ರಕ್ಕೆ ಹೋಗುವುದು,
ಮೂತ್ರ ವಿಸರ್ಜನೆ ಮಾಡುವಾಗ ನೋವು, ಉರಿ, ಕಿರಿಕಿರಿ
ಕೆಲವೊಮ್ಮೆ ರಕ್ತ ಕಾಣಿಸಿಕೊಳ್ಳುವುದು, ದುರ್ವಾಸನೆ,
ಪದೇಪದೇ ಜ್ವರ, ವಾಕರಿಕೆ, ಪೂರ್ಣವಾಗಿ ಮೂತ್ರ ವಿಸರ್ಜನೆ ಆಗದೆ ಹನಿ ಹನಿಯಾಗಿ ಆಗಾಗ ಹೋಗುವುದು
ಹೊಟ್ಟೆಯ ಕೆಳಭಾಗದಲ್ಲಿ ನೋವು, ಮೂತ್ರ ವಿಸರ್ಜಿಸುವಾಗ ಸುಡುವ ಸಂವೇದನೆ, ಮೂತ್ರ ವಿಸರ್ಜಿಸಲು ಆಗಾಗ್ಗೆ ಮತ್ತು ನಿರಂತರ ಪ್ರಚೋದನೆ
ಆಗಾಗ್ಗೆ ಸಣ್ಣ ಪ್ರಮಾಣದ ಮೂತ್ರವನ್ನು ಹಾದುಹೋಗುವುದು, ಬಲವಾದ ವಾಸನೆಯ ಮೂತ್ರ
ಪರ್ಯಾಯವಾಗಿ ನಡುಗುವ ಮತ್ತು ಬೆವರುವಿಕೆಯ ಅವಧಿಗಳು (ಸೋಂಕು ನಿಮ್ಮ ಮೂತ್ರಪಿಂಡಗಳಿಗೆ ಹರಡಿದೆ ಎಂಬ ಚಿಹ್ನೆಗಳು) ಮೂತ್ರದಲ್ಲಿ ರಕ್ತದ ಚಿಹ್ನೆಗಳು ಕೆಂಪು, ಕಿತ್ತಳೆ ಅಥವಾ ಗುಲಾಬಿ ಬಣ್ಣವನ್ನು ಕಾಣುವಂತೆ ಮಾಡುತ್ತದೆ

ಸೋಂಕು ತಡೆಯುವುದು ಹೇಗೆ?

ಮೂತ್ರ ವಿಸರ್ಜನೆಯಂತಹ ನೈಸರ್ಗಿಕ ಕ್ರಿಯೆಗಳನ್ನು ಎಂದಿಗೂ ನಿಯಂತ್ರಿಸಬಾರದು. ಏಕೆಂದರೆ ಇದು ಮೂತ್ರದ ವ್ಯವಸ್ಥೆಯ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಸೋಂಕಿಗೆ ಕಾರಣವಾಗಬಹುದು.
ಜನನಾಂಗದ ಪ್ರದೇಶದಲ್ಲಿ ಯಾವಾಗಲೂ ಹಗುರವಾದ ಬಟ್ಟೆಗಳನ್ನು ಧರಿಸಬೇಕು, ಅಲ್ಲಿ ಬೆವರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಏಕೆಂದರೆ ಬೆವರಿನಿಂದ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ಅಪಾಯ ಉಂಟಾಗುವ ಸಾಧ್ಯತೆ ಇದೆ. ಪ್ರತಿ ದಿನ ಸ್ನಾನ ಮಾಡಿದ ನಂತರ ಬಟ್ಟೆ ಧರಿಸುವ ಮೊದಲು ಮೈಯ್ಯನ್ನು ಸರಿಯಾಗಿ ಟವಲ್ಲಿನಿಂದ ಒರೆಸಿಕೊಳ್ಳಬೇಕು.

ಮನೆ ಮದ್ದು

ದೇಹದಲ್ಲಿ ನೀರಿನ ಕೊರತೆಯು ಮೂತ್ರನಾಳದ ಸೋಂಕಿಗೆ ಕಾರಣವಾಗಬಹುದು. ಮಹಿಳೆಯರು, ಪುರುಷರು ಸಾಕಷ್ಟು ನೀರು ಕುಡಿಯಬೇಕು. ದಿನಕ್ಕೆ ಕನಿಷ್ಠ 7 ರಿಂದ 8 ಗ್ಲಾಸ್ ನೀರನ್ನು ಕುಡಿಯಲೇಬೇಕು.

ತಾಜಾ ಹಣ್ಣುಗಳ ರಸದಂತಹ ದ್ರವ ಪದಾರ್ಥಗಳು ಆರೋಗ್ಯಕರ ಪಾನೀಯಗಳಾದ ತೆಂಗಿನ ನೀರು, ನಿಂಬೆ ಪಾನಕ ಮತ್ತು ಕಬ್ಬಿನರಸ ಬೇಸಿಗೆಯಲ್ಲಿ ತುಂಬಾ ಪ್ರಯೋಜನಕಾರಿ. ಈ ಪಾನೀಯಗಳು ದೇಹದಿಂದ ಉಷ್ಣವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಬಾರ್ಲಿ ನೀರು ಮತ್ತು ಅಕ್ಕಿ ತೊಳೆದ ನೀರು ತೆಗೆದುಕೊಂಡರೆ ರೋಗಾಣುವಿನ ವಿರುದ್ಧ ಹೋರಾಡುವ ಶಕ್ತಿ ವೃದ್ದಿಸುತ್ತದೆ. ನೆಲ್ಲಿಕಾಯಿಯ ಶರಬತ್ತು,
ಸೊಗದೆ ಬೇರಿನ ಶರಬತ್ತು ಇವು ಮೂತ್ರ ಸೋಂಕಿಗೆ ಬಹು ಉತ್ತಮ ಮನೆ ಮದ್ದಾಗಿದೆ. ನೀರಿಗೆ ತುಳಸಿ ಬೀಜಗಳು ಮತ್ತು ಲಾವಂಚವನ್ನು ಹಾಕಿ ಕುಡಿಯುವುದು ಒಳ್ಳೆಯದು.
ಚಿಯಾ ಬೀಜಗಳನ್ನು ನೀರಿಗೆ ಹಾಕಿ ಹಣ್ಣುಗಳ ಜೊತೆಗೆ ಹಾಕಿ ಸೇವಿಸಬಹುದು. ಇದನ್ನು ಮಜ್ಜಿಗೆಗೆ ಹಾಕಿಯೂ ಬಳಸಬೇಕು. ಪಂಚಕರ್ಮದ ಚಿಕಿತ್ಸೆಯೂ ಬಹಳ ಸಹಾಯಕ. ಕರಿದ ಪದಾರ್ಥಗಳು, ಹೆಚ್ಚು ಮಸಾಲೆಯುಕ್ತ ಆಹಾರ ಸೇವನೆ ಮತ್ತು ಅತಿ ಎನಿಸುವ ಖಾರದ ತಿಂಡಿತಿನಿಸುಗಳನ್ನು ಸೇವಿಸುವುದನ್ನು ಬಿಡಬೇಕು. 

ಮೂತ್ರನಾಳದ ಸೋಂಕು ತಡೆಯಲು ಸ್ವಚ್ಛತೆ ಮುಖ್ಯ

ಮೂತ್ರನಾಳದ ಸೋಂಕು ಸಾಮಾನ್ಯವಾಗಿ ಸ್ವಚ್ಛತೆ ಇಲ್ಲದಿರುವುದರಿಂದಲೇ ಕಾಣಿಸಿಕೊಳ್ಳುತ್ತದೆ. ಮಹಿಳೆಯರು ಹತ್ತಿಯಿಂದ ತಯಾರಿಸಿರುವ ಒಳ ಉಡುಪುಗಳನ್ನು ಬಳಸುವುದು ಉತ್ತಮ. ಸಾರ್ವಜನಿಕ ಶೌಚಾಲಯಗಳನ್ನು ಬಳಸುವಾಗಿ ಚೆನ್ನಾಗಿ ನೀರು ಹಾಕಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಬಳಸಬೇಕು.
ಮಹಿಳೆಯರು ಮುಟ್ಟಿಗೆ ಮುಂಚೆ, ಮುಟ್ಟಿನ ವೇಳೆ ಮತ್ತು ನಂತರ ಸ್ವಚ್ಛತೆಗೆ ಬಹಳ ಒತ್ತು ನೀಡಬೇಕು. ಮಲಮೂತ್ರ ವಿಸರ್ಜನೆ ವೇಳೆ ಅಥವಾ ನಂತರ ಮೊದಲು ಜನನಾಂಗವನ್ನು ಸ್ವಚ್ಛಗೊಳಿಸಿ ನಂತರ ಗುದದ್ವಾರವನ್ನು ಸ್ವಚ್ಛಗೊಳಿಸಬೇಕು. ಇದರಿಂದ ಗುದದ ಸೋಂಕು ಜನನಾಂಗಕ್ಕೆ ಬರುವುದನ್ನು ತಡೆಯಬಹುದು.
ಇದಲ್ಲದೇ ಲೈಂಗಿಕ ಕ್ರಿಯೆಯ ನಂತರ ಗುಪ್ತಾಂಗಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಪ್ರತಿ ಬಾರಿ ಮೂತ್ರ ಅಥವಾ ಮಲ ವಿಸರ್ಜನೆ ಬಳಿಕ ವಿಸರ್ಜನಾಂಗವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಯಾವಾಗಲೂ ಸ್ವಚ್ಛ ಮತ್ತು ಆರಾಮದಾಯಕ ಒಳಉಡುಪುಗಳನ್ನು ಧರಿಸಬೇಕು.

ಚಿಕಿತ್ಸೆ

ಮೂತ್ರದ ಸಾಮಾನ್ಯ ಪರೀಕ್ಷೆ ಹಾಗು ಕಲ್ಚರ್ and ಸೆನ್ಸಿಟಿವಿಟಿ ಟೆಸ್ಟ್ ಇಂದ ಈ ಸೋಂಕು ರೋಗವನ್ನು ದೃಢಪಡಿಸಿಕೊಳ್ಳಬಹುದು.

ಮೂತ್ರದ ಸೋಂಕನ್ನು ಸಾಮಾನ್ಯವಾಗಿ ಪ್ರತಿಜೀವಕಗಳ ( antibiotics )ಮೂಲಕ ಚಿಕಿತ್ಸೆ ನೀಡಲಾಗುತ್ತದೆ ಮತ್ತು ಕೋರ್ಸ್ ಒಂದು ವಾರದಿಂದ 14 ದಿನಗಳವರೆಗೆ ಇರುತ್ತದೆ. ತಪ್ಪದೇ ಹೆಚ್ಚಿನ ದ್ರವ ಪದಾರ್ಥ ತೆಗೆದುಕೊಂಡು, ಸ್ವಚ್ಛತೆ ಕಾಪಾಡಿಕೊಂಡರೆ
ಈ ಸೋಂಕಿನಿಂದ ದೂರವಿರಬಹುದು.

ಡಾ. ರುಕ್ಮಿಣಿ ವ್ಯಾಸರಾಜ್

Related post