ಅಯೋಧ್ಯೆಯ ಕನಸು
ಅಯೋಧ್ಯೆಯಲ್ಲಿ ರಾಮಮಂದಿರ
ಕಟ್ಟಿಬಿಟ್ಟರು ಬಹಳ ಸುಂದರ
ಮರೆಯದೆ ನೋಡಿರಿ ಜನವೆಲ್ಲ,,,
ಹನುಮನ ಭಕ್ತಿಗೆ ಮಿತಿಯಿಲ್ಲ.!!೧!!
ಹನುಮನ ಹಾಗೆ ಭಜನೆಯ ಮಾಡುತ
ಮರ್ಯಾದ ರಾಮನ ಮನದಿ ನೆನೆಯುತ
ಪ್ರಭು ಸೀತಾರಾಮನ ಕೊಂಡಾಡಿ,,,
ರಾಮ ಭಕ್ತಿಯಲಿ ತೆಲಾಡಿ.!!೨!!
ಶಬರಿಯ ಹಾಗೆ ಕಾದು ಕುಳಿತಿಹರು
ಹನುಮನ ರೀತಿ ಜಪವಗೈದಿಹರು
ಗುಡಿಯ ನೋಡಲು ಬಂದೇ ಬರುವರು
ರಾಮ ಕೋಟಿಯನು ಬರೆದು ತರುವರು.!!೩!!
ರಾಮ ನವಮಿಗೆ ಪಾನಕ ಹಂಚುವ
ಅನ್ನದಾನದ ಘನತೆ ಮೆರೆಸುವ
ಏಕೈಕ ಧರ್ಮವು ನಮ್ಮದು,ನಿಮ್ಮದು
ಜಗದ ಒಳಿತಿಗೆ ಬೆಳಕು ಕೊಡುವುದು .!!೪!!
ಅಳಿಲು ಸೇವೆಯ ಧರ್ಮರಕ್ಷಕರು
ರಾಮನ ಗುಡಿಗೆ ಸೇವೆಗೈದಿಹರು
ಅಕ್ಷತೆ ಕೊಟ್ಟು ಕೂಗಿ ಕರೆದಿಹರು
ಅಯೋಧ್ಯೆಗೆ ಬನ್ನಿರಿ,,, ಶ್ರೀ ರಾಮನ ನೋಡಿರಿ.!!೫!!
ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ