ಆತ್ಮಪ್ರೀತಿಯ ಮೋಡಿ

ಆತ್ಮಪ್ರೀತಿಯ ಮೋಡಿ

ನಿನ್ನುಸಿರು ನನ್ನುಸಿರಲಿ ಒಂದಾಗಿ
ಬಾಳುವ ಬಾಳದು ಸುಂದರ!
ಸವಿನೆನಪಿನ ಚಿತ್ತಾರವಿರಲು
ಬದುಕಲಿ ಕಾಡದು ಬೇಸರ!!

ಮನದಾಸೆ ನಿನ್ನಲಿ ಹೇಳಿರಲು
ಕನಸೆಲ್ಲಾ ನನಸಾಗುವ ಕಾತುರ!
ಕಾಣದ ದೈವಬಲವು ಬೆರೆತಿರಲು
ನಲ್ಮೆಯ ಪ್ರೇಮವಿದು ಅಮರ!!

ಕಲ್ಲುಮುಳ್ಳಿನ ಹಾದಿಯು ಸರಿದು
ಹೂವಿನ ನಡಿಗೆಯಾದ ಪರಿ !
ಜನ್ಮಜನ್ಮಗಳ ಆತ್ಮಪ್ರೀತಿಯ
ಮೋಡಿ ಕಂಡು ಮನದಿ ಅಚ್ಚರಿ!!

ದಿಗಂತದಿ ಬುವಿ ಬಾನು
ಒಂದಾದಂತೆ ನಮ್ಮೊಲುಮೆ!
ಸಿಹಿಸಾಂಗತ್ಯದಿ ದೊರೆತಿರಲು..
ಸವಿಸಂತಸದ ಚಿಲುಮೆ!!

ಸುಮನಾ ರಮಾನಂದ
ಮುಂಬೈ

Related post