ಇಳಿಸಂಜೆಯಲ್ಲೊಂದು ಬೇಡಿಕೆ

ಇಳಿಸಂಜೆಯಲ್ಲೊಂದು ಬೇಡಿಕೆ

ಬೇಸರದ ಈ ಸಂಜೆ
ಬೀಸದಿರು ಬಿರುಗಾಳಿ,
ಕಾದ ಸಾಗರನ ಕಾವ
ಹೊತ್ತು ನೀ ತಾರದಿರು.!

ಮರ ಗಿಡಗಳೇ ನೀವು
ನಿಲ್ಲದಿರಿ ಸುಮ್ಮನೇ,
ತಂಪು ಗಾಳಿಯ ಸೂಸಿ
ಬೇಗೆಯನು ಕಳೆಯಿರಿ!

ಗಳಿಗೆಗಳಿಗೆಗೂ ಕೂಗಿ
ಕರೆಯುತಿದ್ದವ ನೀನು,
ಪರಪುಟ್ಟ ಕೋಗಿಲೆಯೆ
ನಿನ್ನುಲಿಯ ನಿಲಿಸದಿರು !

ನೆಲಮುಗಿಲ ಬೆಸೆದಿಹ
ಸಾಗರನೆ ನೀನಿನ್ನ ಅಲೆಗಳ
ಮರಮರಳಿ ಕಳುಹುತಿರು
ಮರಳಿನಾ ದಡಕೆ !

ಹಗಲು ಹರಿಯುತ,
ಇರುಳು ಮೂಡುವ ಮುನ್ನ,
ನೀಲಮೇಘ ಶ್ಯಾಮನೆ ನೀನು
ಇಲ್ಲೊಮ್ಮೆ ಬಂದು ಬಿಡು!!

ಶ್ರೀವಲ್ಲಿ ಮಂಜುನಾಥ

Related post

1 Comment

  • you are in reality a good webmaster The website loading velocity is amazing It sort of feels that youre doing any distinctive trick Also The contents are masterwork you have done a fantastic job in this topic

Leave a Reply

Your email address will not be published. Required fields are marked *