ಮಕ್ಕಳ ಪ್ರವಾಸ

ಮಕ್ಕಳ ಪ್ರವಾಸ

ಹೊರಟಿಹರು ಮಕ್ಕಳು ಉತ್ತಮ ಪ್ರವಾಸಕೆ
ಆಯ್ಕೆ ಮಾಡಿಹರು ಮೈಸೂರು ನಗರಕೆ |
ಇದು ಆಡುoಬೊಲದ ಉತ್ತಮ ತಿಳುವಳಿಕೆ
ಇದು ವಿಹಾರವೂ ಅಹುದು ಕ್ಷೇತ್ರ ದರ್ಶನಕೆ || ||೧||

ಮೊದಲ ದರ್ಶನ ಶ್ರೀರಂಗಪಟ್ಟಣಕೇ
ಅಲ್ಲಿ ಮನಸೋತರು ಆ ಸ್ಥಳದ ಪರಿಸರಕೆ |
ನಂತರದ ದರ್ಶನ ಚಾಮುಂಡಿ ಬೆಟ್ಟಕೇ
ಅಲ್ಲಿ ಬೆರಗಾದರೂ ಮಹಿಷಾಸುರನ ರೂಪಕೆ || ||೨||

ಮುಂದೆ ನೆಡೆದಿಹರು ಪ್ರಾಣಿಸಂಗ್ರಹಾಲಯಕೆ
ಅಲ್ಲಿ ವಿಧವಿಧದ ಕಾಡುಪ್ರಾಣಿಗಳ ನೋಡಲಿಕೆ |
ಅಲ್ಲದೆ ನಾನಾ ವಿಧದ ಪಕ್ಷಿಗಳ ವೀಕ್ಷಣೆಗೆ
ಜಲಚರ, ಉರಗಗಳ ವೃಕ್ಷಗಳ ಚೆಂದಕೆ || ||೩||

ಎಲ್ಲಾ ಆಡುಂಬೊಲದ ಸಂತಸ
ಊಟ ತಿಂಡಿ ಐಸ್ ಕ್ರೀಮ್ ನ ಸವಿರಸ |
ನಾಗಶಯನನ ಕ್ಷೇತ್ರಗಳ ದರ್ಶನ ಸಂತಸ
ಮರಳಿದರು ಊರಿಗೆ ಮೆಲುಕುತ ರಸನಿಮಿಷ || ||೪||

ನಾಗರಾಜು. ಹ
ಬೆಂಗಳೂರು

Related post

Leave a Reply

Your email address will not be published. Required fields are marked *