ಉತ್ತರಭಾರತದಲ್ಲಿ ಮಾತ್ರವೇ ಕಂಡುಬರುವ ಅಲ್ಲಿನ ಸಾಮಾನ್ಯ ಹಕ್ಕಿಗಳಲ್ಲೊಂದಾದ ಉತ್ತರದ ಕಬ್ಬಕ್ಕಿ ಈ ಈ ವಾರದ ಪಕ್ಷಿ. ಇದು ರೈಲು ನಿಲ್ದಾಣಗಳಂತಹ ಜನಭರಿತ ಸ್ಥಳಗಳಲ್ಲಿಯೂ ಯಾವ ಭಿಡೆಯಿಲ್ಲದೆ ಓಡಾಡುತ್ತದೆ. ಇಂಗ್ಲಿಷಿನ ಬ್ಯಾಂಕ್ ಮೈನಾ ಎಂದು ಕರೆಯಲಾಗುವ ಇದರ ವೈಜ್ಞಾನಿಕ ಹೆಸರು Acridotheres ginginianus ಎಂದು.
ನಮ್ಮಲ್ಲಿನ ಗೊರವಂಕಗಳಂತೆಯೇ ಇದ್ದರೂ ಬಣ್ಣ ಕಂದಿಗೆ ಬದಲಾಗಿ ನೀಲಿಮಿಶ್ರಿತ ಬೂದು ಹಾಗೂ ಕಣ್ಣಿನ ಸುತ್ತಲಿನ ಹಳದಿಯ ಬದಲಿಗೆ ಕಡುಕೆಂಗಂದು ಬಣ್ಣದ್ದು. ಉತ್ತರ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿಯೂ ಇದು ಕಂಡುಬರುತ್ತದೆ. ಇದು ಉತ್ತರದ್ದು ಎಂದು ಹೇಳಿದರೂ ದಕ್ಷಿಣಭಾರತದಲ್ಲಿ ಕಂಡು ಬಂದ ಕೆಲವು ಅಪರೂಪದ ದಾಖಲೆಗಳು ಇವೆ.
ಗೋಡೆಯಲ್ಲಿನ ರಂದ್ರ, ಇಲ್ಲವೆ ದಂಡೆ, ಮಣ್ಣಿನ ದಿಬ್ಬಗಳಲ್ಲಿನ ರಂದ್ರ ಇವುಗಳ ಗೂಡು. ಕೀಟಗಳು, ಮನುಷ್ಯ ಬಿಸಾಡುವ ಆಹಾರದ ವ್ಯರ್ಥ ಪದಾರ್ಥಗಳನ್ನು ಸೇವಿಸುತ್ತದೆ. ತ್ಯಾಜ್ಯ ಶೇಖರವಾಗಿರುವಲ್ಲಿ ಇವು ಇದ್ದೇ ಇರುತ್ತವೆ. ಪರಿಸರದ ವ್ಯವಸ್ಥೆಯಲ್ಲಿ ಇದಕ್ಕೊಂದು ಸ್ಥಾನವಿದೆ.
ನೀವು ಉತ್ತರಭಾರತದ ಪ್ರವಾಸ ಮಾಡುವಾಗ ಇದರ ನೆನಪು ದರ್ಶನ ಎರಡೂ ಆಗಲಿ. ನೀವು ಕಂಡಾಗ ನಮ್ಮ ksn.bird@gmail.com ಮೇಲ್ ಐಡಿಗೆ ಬರೆದು ತಿಳಿಸುವುದನ್ನು ಮರೆಯಬೇಡಿರಿ.
ಕಲ್ಗುಂಡಿ ನವೀನ್
ಚಿತ್ರಗಳು: ಜಿ. ಎಸ್. ಶ್ರೀನಾಥ
ಈ ಶತಮಾನ ವನ್ಯಜೀವಿ ಮತ್ತು ಸಂರಕ್ಷಣೆಯ ಸುವರ್ಣ ಪರ್ವ