ಕಾಲೇಜಿನ ಕಾಟ

ಕಾಲೇಜಿನ ಕಾಟ

ಪರಪರ ಪರಪರ ಪರದಾಟ,,
ಪ್ರೀತಿ ಪ್ರೇಮದ ಹುಡುಗಾಟ.
ಅಲೆಅಲೆ ಅಲೆಅಲೆ ಅಲೆದಾಟ
ಬದುಕಿಗೆ ಬೆಳಕಿನ ಹುಡುಕಾಟ.
ಕಾಲೇಜಿನ ವಯಸ್ಸು ಗಾಳಿಪಟ
ಎಡವಿದರೆ ಬದುಕೆ,,, ಧೂಳಿಪಟ.!!೧!!

ಸರಸರ ಸರಸರ ಸರಸಗಳು
ಗುಸುಗುಸು ಪಿಸುಪಿಸು ಮಾತುಗಳು
ತರಲೆಗು ಮೀರಿದ ಹರಟೆಗಳು
ಬಿದಿ ಹಲೆಯುವ ಜರಟೆಗಳು
ಗುರುಗಳ ಮಾತೆ ಸತ್ಯಗಳು
ಕೇಳದ ಬದುಕಲಿ ಮುಳ್ಳುಗಳು.!!೨!!

ಚಿಣಿಮಿಣಿ ಅನ್ನುವ ಬಟ್ಟೆಯಲಿ
ಅಳುಕುತ ಬಳುಕತ ರಸ್ತೆಯಲಿ
ತಂದೆ ತಾಯಿಯ ಕನಸಿನಲಿ
ನಿಮ್ಮಯ ಬದುಕಿದೆ ಬೆವರಿನಲಿ
ಕಲಿಯದೆ ಇದ್ದರೆ ಬದುಕಿನಲಿ
ನರಕವೆ ಇರುವುದು ಬಾಳಿನಲಿ.!!೩!!

ದೇಹದ ಮೋಹದ ಸೆಳೆತವಿದೆ
ಸೆಳೆತಕೆ ಸಿಕ್ಕರೆ ನಾಶವಿದೆ
ಅವನಿಗು ಅವಳಿಗು ಬದುಕು ಇದೆ
ಬದುಕುವ ದಾರಿಯು ಉದ್ದವಿದೆ.
ಕಲಿಕೆಯ ವಿಷಯವು ಆಳವಿದೆ
ಕಲಿತರೆ ಬದುಕಲಿ ಬೆಳಕು ಇದೆ.!!೪!!

ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ

Related post