ಕುರ್ಚಿಯ ಮಹಿಮೆ

ಕುರ್ಚಿಯ ಮಹಿಮೆ!

ಕುರ್ಚಿಗಾಗಿ ಏನೆಲ್ಲ ತಂತ್ರ-ಕುತಂತ್ರಗಳನ್ನು ನಡೆಸುತ್ತಿದ್ದ ಚಂದ್ರಪ್ಪನಿಗೆ ‘ಛೇರ್‌ಮನ್’ ಅಡ್ಡ ಹೆಸರು ಬಿದ್ದಿತ್ತು. ಎಷ್ಟೇ ಖರ್ಚಾಗಲಿ ಕುರ್ಚಿಯನ್ನು ಮಾತ್ರ ಯಾರಿಗೂ ಬಿಟ್ಟು ಕೊಟ್ಟಿರಲಿಲ್ಲ. ಹೀಗಿದ್ದವನು ಒಮ್ಮೆಗೆ ತನ್ನ ಸಿದ್ಧಾಂತವನ್ನು ಬದಲಿಸಿಕೊಂಡ. ಕುರ್ಚಿಯ ಮೋಹ ಒಳ್ಳೆಯದಲ್ಲಪ್ಪ ಎನ್ನುತ್ತಾ ಜನ-ಜನಸೇವೆಯೇ ಮುಖ್ಯವೆಂದು ಮನೆ ಮನೆಗೆ ಹೋಗಿ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಕೊಡಿಸುತ್ತಿದ್ದ. ಆಫೀಸು, ಕುರ್ಚಿ ಚಂದ್ರಪ್ಪನಿಗಾಗಿ ಕಾದು ಸೋತಿದ್ದವು. ಊರಿನವರಿಗೆಲ್ಲ ಆಶ್ಚರ್ಯವೋ ಆಶ್ಚರ್ಯ! ಯಾವ ಸ್ವಾಮೀಜಿಯ ಸಲಹೆಯೋ ಅರಿಯದಾಗಿತ್ತು. ಈ ದಿಢೀರ್ ಬದಲಾವಣೆಗೆ ಕಾರಣವನ್ನು ಬಿಚ್ಚಿಟ್ಟವರು ಆ ಊರಿನ ಮೂಲೆಯಲ್ಲಿದ್ದ ಪಿಸ್ತುಲ ಡಾಕ್ಟರ್! ವರ್ಷಾನುಗಟ್ಟಲೆ ಕುರ್ಚಿಗೆ ಅಂಟಿಕೊಂಡಿದ್ದರಿಂದ ‘ಪೈಲ್ಸ್’ ಒಕ್ಕರಿಸಿಕೊಂಡಿದೆ ಎಂದು!

-ಸಂಕೇತದತ್ತ!

Related post